ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Mid-day meals Scheme: ಬಿಸಿಯೂಟದಲ್ಲಿ ಮಕ್ಕಳಿಗೆ ಮೊಟ್ಟೆ ನೀಡಬೇಕು- ಕರ್ನಾಟಕ ಸರ್ಕಾರ ಆದೇಶ

|
Google Oneindia Kannada News

ಬೆಂಗಳೂರು ಜನವರಿ 23: 2002-03ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯಾದ್ಯಂತ ಆರಂಭಿಸಿತು. ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರ ಬಿಸಿಯೂಟ ಒದಗಿಸಲು ನಿರ್ಧರಿಸಿದೆ. ಆದರೆ ಬೆಲೆ ಹೆಚ್ಚು ಎಂದು ಬಿಸಿಯೂಟದಲ್ಲಿ ಮೊಟ್ಟೆ ನೀಡದೇ ಮಕ್ಕಳ ಹೊಟ್ಟೆಗೆ ಮೋಸ ಮಾಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಶಾಲೆಗಳಲ್ಲಿ ಮಕ್ಕಳು ಮೊಟ್ಟೆ ಕೇಳಿದರೆ ಕೊಡಬೇಕು. ಅದರ ಬದಲಿಗೆ ಚಿಕ್ಕಿ ಅಥವಾ ಬಾಳೆಹಣ್ಣು ನೀಡುವಂತಿಲ್ಲ ಎಂದು ಆದೇಶಿಸಿದೆ.

ಮಧ್ಯಾಹ್ನದ ಬಿಸಿಊಟ ಯೋಜನೆಯಡಿ ಮಕ್ಕಳಿಗೆ ಮೊಟ್ಟೆ ವಿತರಿಸದ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಶಿಕ್ಷಣ ಇಲಾಖೆಯು, ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ಮೊಟ್ಟೆ ನೀಡಬೇಕು ಎಂದು ಪುನರುಚ್ಚರಿಸಿದೆ. ಮಕ್ಕಳು ಕೇಳಿದಾಗ ಮೊಟ್ಟೆ ನೀಡಬೇಕು ಅದರ ಬದಲಿಗೆ ಬಾಳೆಹಣ್ಣು ಅಥವಾ ಚಿಕ್ಕಿ ನೀಡುವಂತಿಲ್ಲ ಎಂದು ರಾಜ್ಯ ಶಿಕ್ಷಣ ಇಲಾಖೆ ಆಯುಕ್ತ ಆರ್‌ ವಿಶಾಲ್ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದ್ದಾರೆ. ಮೊಟ್ಟೆಯ ದರ ವೆಚ್ಚ ಭರಿಸಲಾಗದೆ ಮಧ್ಯಾಹ್ನಾದ ಊಟದಲ್ಲಿ ಮೊಟ್ಟೆಯನ್ನು ನಿಲ್ಲಿಸಬಾರದು ಎಂದು ಕರ್ನಾಟಕ ಶಿಕ್ಷಣ ಇಲಾಖೆ ಶಾಲೆಗಳಿಗೆ ತಿಳಿಸಿದೆ.

ಮಧ್ಯಾಹ್ನದ ಊಟದ ಕುರಿತು ವಿವಿಧ ಮೂಲಗಳಿಂದ ಪ್ರತಿಕ್ರಿಯೆಯನ್ನು ಸ್ವೀಕರಿಸಲಾಗಿದೆ ಮತ್ತು ಆಂತರಿಕ ಕಚೇರಿ ಸುತ್ತೋಲೆಯನ್ನು ಹೊರಡಿಸಲಾಗಿದೆ. "ಯೋಜನೆಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ ಮತ್ತು ಶಾಲೆಗಳು ಎದುರಿಸುತ್ತಿರುವ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದೇವೆ" ಎಂದು ವಿಶಾಲ್ ಹೇಳಿದರು.

 Govt schools must provide eggs to students when they request it says Department of Public Instruction

ಮಕ್ಕಳು ಊಟದಲ್ಲಿ ಮೊಟ್ಟೆ ಕೇಳುತ್ತಿದ್ದರೂ ಮೊಟ್ಟೆ ನೀಡದ ಕಾರಣ ಮೊಟ್ಟೆಯ ಬೆಲೆ ಏರಿಕೆಯಾಗಿರುವುದರಿಂದ ಶಾಲೆಗಳು ತಮ್ಮ ಬಜೆಟ್ ಅನ್ನು ಮೀರಿಸುವಂತೆ ಮಾಡಿದೆ. ಬಜೆಟ್ ಹೆಚ್ಚಿಸುವಂತೆ ಶಾಲೆಗಳು ಇಲಾಖೆಗೆ ಮನವಿ ಮಾಡುತ್ತಿರುವುದರಿಂದ ಮೊಟ್ಟೆ ವಿತರಣೆ ಕುರಿತು ದೂರುಗಳು ಬಂದಿವೆ.

ವಿಶಾಲ್, "ಮೊಟ್ಟೆಯ ಬೆಲೆ ಬದಲಾಗುತ್ತದೆ, ಆದರೆ ನಿರ್ದಿಷ್ಟ ದಿನದಂದು ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ಬದಲಾಗುತ್ತದೆ. ಕಡಿಮೆ ವಿದ್ಯಾರ್ಥಿಗಳಿದ್ದರೆ, ಹೆಚ್ಚಿನ ಮಕ್ಕಳಿರುವ ದಿನಗಳಲ್ಲಿ ಹೆಚ್ಚುವರಿ ಖರ್ಚು ಮಾಡುವಂತೆ ಅದನ್ನು ಸರಿಹೊಂದಿಸಬೇಕು'' ಎಮದು ಹೇಳಿದ್ದಾರೆ.

 Govt schools must provide eggs to students when they request it says Department of Public Instruction

ಸರ್ಕಾರಕ್ಕೆ ಜೆಡಿಎಸ್ ತಾಕೀತು

ಆದರೆ ಕಲ್ಯಾಣ ಕರ್ನಾಟಕದ ಬೀದರ್, ಬಳ್ಳಾರಿ, ಕೊಪ್ಪಳ, ಯಾದಗಿರಿ, ಕಲಬುರಗಿ, ವಿಜಯನಗರ, ರಾಯಚೂರು, ಧಾರವಾಡ ಜಿಲ್ಲೆಯಲ್ಲಿ ಮೊಟ್ಟೆ ಕೊಡದಿರುವ ಸಮಸ್ಯೆಗಳು ಹೆಚ್ಚಿವೆ ಎಂದು ಹೆಸರೇಳುಲು ಇಚ್ಚಿಸದ ಹಿರಿಯ ಶಿಕ್ಷಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂತಹ ಆರೋಪಗಳ ಬೆನ್ನಲ್ಲೆ ಸರ್ಕಾರಕ್ಕೆ ಜೆಡಿಎಸ್ ತಾಕೀತು ಮಾಡಿದೆ. ಜೆಡಿಎಸ್ ಟ್ವೀಟ್ ಮೂಲಕ ಬಿಜೆಪಿಯನ್ನು ತರಾಟೆ ತೆಗೆದುಕೊಂಡಿದೆ.

 Govt schools must provide eggs to students when they request it says Department of Public Instruction

'ರಾಜ್ಯದ ಕೆಲವು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸುವದನ್ನ ನಿಲ್ಲಿಸಲಾಗಿದೆ ಎಂಬ ಸುದ್ದಿ ವರದಿಯಾಗಿದೆ. ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರೆ, ಇದು ನಿಮ್ಮ ಗಮನಕ್ಕೆ ಬಂದಿಲ್ಲವೆ? ಅಥವಾ ಆರ್ ಎಸ್ ಎಸ್ ನ ನಿರ್ದೇಶನಕ್ಕೆ ಕಾಯುತ್ತಿರುವಿರೆ? ನಿಮ್ಮ ಕಳಪೆ ಆಡಳಿತದಿಂದ ಮಕ್ಕಳ ಹೊಟ್ಟೆಗೆ ಯಾಕೆ ಮೋಸ ಮಾಡುವಿರಿ?

ಮೊಟ್ಟೆಯ ಬೆಲೆಯು ಏರಿಕೆಯಾಗಿರುವುದೇ ಈ ಪರಿಸ್ಥಿತಿಗೆ ಕಾರಣ ಎನ್ನಲಾಗಿದೆ. ಆಡಳಿತ ನಡೆಸುವವರಿಗೆ ದೂರದೃಷ್ಟಿ ಇರಬೇಕು. ವ್ಯವಸ್ಥೆಯನ್ನು ಅರಿತು, ಸಮಸ್ಯೆಗಳನ್ನು ತಡೆಯುವ ಚಾಕಚಕ್ಯತೆ ಇರಬೇಕು. ಸಮಸ್ಯೆಯಾಗುವವರೆಗೂ ಕಾಯ್ದು, ನಂತರ ಪರಿಹಾರಕ್ಕೆ ತಡಕಾಡುವುದು ಒಳ್ಳೆಯ ಲಕ್ಷಣವಲ್ಲ.

ಈ ಹೊತ್ತಲ್ಲಿ ದರ ಪರಿಷ್ಕರಣೆ ಸಾಧ್ಯವಿಲ್ಲ. ಆ ಕುರಿತು ಪರಿಜ್ಞಾನ ಇದ್ದಿದ್ದರೆ, ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆ ಬರದಂತೆ ಮಾಡಬಹುದಿತ್ತು. ಈಗಲೂ ಕಾಲ ಮಿಂಚಿಲ್ಲ, ಇದಕ್ಕೆ ಪರಿಹಾರ ಹುಡುಕಿ. ಯಾವುದೇ ಕಾರಣಕ್ಕೂ ಮಕ್ಕಳಿಗೆ ಮೊಟ್ಟೆ ಸಿಗದ ಪರಿಸ್ಥಿತಿ ರಾಜ್ಯದಾದ್ಯಂತ ವಿಸ್ತರಿಸದ ಹಾಗೆ ನೋಡಿಕೊಳ್ಳಿ' ಎಂದು ಹೇಳಿದೆ.

English summary
Govt schools must provide eggs to students when they request it says Department of Public Instruction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X