ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಗಳ ಪ್ರಾರಂಭಕ್ಕೆ ಸಕಲ ತಯಾರಿ: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ..!

|
Google Oneindia Kannada News

ಬೆಂಗಳೂರು, ಮೇ13: ಶಿಕ್ಷಣ ಇಲಾಖೆ ತನ್ನ ನಿಲುವಿನಂತೆ ಶಾಲೆಗಳನ್ನು ಮೇ 16ರಿಂದಲೇ ಪ್ರಾರಂಭವಾಗುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಸಹಬದಿಗೆ ತರಬೇಕೆಂದು ಶಿಕ್ಷಣ ಸಚಿವರು ಪ್ರಯತ್ನಿಸುತ್ತಿದ್ದಾರೆ. ಶಾಲೆಯ ಆರಂಭದ ದಿನ ಹಬ್ಬದಂತೆ ಹಾಜರಿಸಲು ಇಲಾಖೆ ಸಜ್ಜಾಗಿದೆ. ಈ ನಡುವೆ ಮಕ್ಕಳನ್ನು ಶಾಲೆಗೆ ಕರೆತರಲು ಪ್ರಯತ್ನಗಳು ಸಾಗಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯು ಎದುರಾಗುತ್ತಿದೆ.

ಸರ್ಕಾರಿ ಶಾಲೆಗಲ್ಲಿ ಸಕಲ ಸವಲತ್ತುಗಳನ್ನು ನೀಡಲಾಗುತ್ತದೆ. ಉಚಿತ ಪುಸ್ತಕ, ಸಮವಸ್ತ್ರ ಸೇರಿದಂತೆ ಎಲ್ಲ ರೀತಿಯ ಸೌಕರ್ಯವನ್ನು ಮಾಡಿ ಕೊಡುತ್ತದೆ. ಖಾಸಗಿ ಶಾಲೆಗಳಿಗೂ ಪೈಪೋಟಿ ನೀಡುತ್ತಿವೆ ಸರ್ಕಾರಿ ಶಾಲೆಗಳು. ಇನ್ನು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗುವುದು ಖಚಿತವಾಗಿದೆ. ಇದಕ್ಕಾಗಿಯೇ ಸರ್ಕಾರ ಅಥಿತಿ ಶಿಕ್ಷಕರನ್ನು ನೇಮಿಸುತ್ತಿದೆ. ಸುಮಾರು ರಾಜ್ಯಾದ್ಯಂತ 25 ರಿಂದ 27 ಸಾವಿರ ಅಥಿತಿ ಶಿಕ್ಷಕರನನ್ನು ನೇಮಿಸಲು ಶಿಕ್ಷಣ ಇಲಾಖೆ ಸಜ್ಜಾಗಿದ್ದು ಕೆಲವು ಶಿಕ್ಷಕರನ್ನು ಈಗಾಗಲೇ ನೇಮಿಸುವ ಮೂಲಕ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂದು ಎಚ್ಚರಿಕೆ ವಹಿಸುತ್ತಿದೆ.

ಮೇ 21,22 ರಂದು ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ)

ಮೇ 21,22 ರಂದು ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ)

ಇನ್ನು ಶಿಕ್ಷಣ ಇಲಾಖೆ 15 ಸಾವಿರ ಶಿಕ್ಷಕರನ್ನು ನೇಮಿಸಲು ಈಗಾಗಲೇ ಆದೇಶವನ್ನು ಹೊರಡಿಸಿದೆ. ಅದರಂದೇ ಮೇ 21,22 ರಂದು ಸ್ಪರ್ಧಾತ್ಮಕ ಪರೀಕ್ಷೆ (ಸಿಇಟಿ) ಸಹ ನಡೆಯಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೀಸಲಾತಿ ಮತ್ತು ಕಟ್ ಆಫ್ ಪರ್ಸೆಂಟೇಜ್ ಮೇಲೆ ಶಿಕ್ಷಕರನ್ನು ಆಯ್ಕೆ ಪಟ್ಟಿ ಬಿಡಗಡೆಯಾಗಲಿದೆ. ಶೈಕ್ಷಣಿಕ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದರಿಂದ ಈ ೈವರ್ಷವೇ ಸರ್ಕಾರಿ ಶಾಲೆಗಳಿಗೆ ಶಿಕ್ಷಕರು ಲಭ್ಯವಾಗಲಿದ್ದಾರೆ.

ಬಿಇಒ ಕಚೇರಿಗೆ ತೆರಳಿ ಅರ್ಜಿಯನ್ನು ಕೊಡಬಹುದು

ಬಿಇಒ ಕಚೇರಿಗೆ ತೆರಳಿ ಅರ್ಜಿಯನ್ನು ಕೊಡಬಹುದು

ಸರ್ಕಾರ ಸೂಚಿಸಿರುವ ವಿದ್ಯಾರ್ಹತೆಯನ್ನು ಹೊಂದಿರುವ ಅಂದರೆ ಪಿಯುಸಿ, ಡಿ.ಇಡಿ, ಬಿಎ,ಬಿಇಡಿ, ಬಿಎಸ್ಸಿ, ಬಿಇಡಿ ಯನ್ನು ಪೂರ್ಣಗೊಳಿಸಿರುವ ಶಿಕ್ಷಕರು ಸಮೀಪದ ಬಿಇಒ ಕಚೇರಿಯನ್ನು ಸಂಪರ್ಕಿಸಬೇಕು. ಅಲ್ಲಿ ವಿಷಯವಾರು ಖಾಲಿ ಇರುವ ಶಿಕ್ಷಕರು ಸಂಖ್ಯೆ ಮತ್ತು ಶಾಲೆಯ ವಿವರಗಳು ಲಭ್ಯವಾಗಲಿವೆ. ಈ ವಿವರವನ್ನು ಪಡೆದು ತಮಗೆ ಸಮೀಪದ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ಬಿಇಒ ಕಚೇರಿಯಲ್ಲಿ ಅರ್ಜಿಯೊಂದನ್ನು ನೀಡುವುದು. ಆ ಬಳಿಕ ಖಾಲಿ ಇರುವ ಸರ್ಕಾರಿ ಶಾಲೆಗೆ ಹೋಗಿ ಅಥಿತಿ ಶಿಕ್ಷಕರಾಗಿ ನೇಮಕಗೊಳ್ಳಲು ಅರ್ಜಿಯನ್ನು ನೀಡಿವ ಮೂಲಕ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿಕೊಳ್ಳಬಹುದು.

ಅಥಿತಿ ಶಿಕ್ಷಕರಿಗೆ 8 ರಿಂದ 10 ಸಾವಿರ ವೇತನ

ಅಥಿತಿ ಶಿಕ್ಷಕರಿಗೆ 8 ರಿಂದ 10 ಸಾವಿರ ವೇತನ

ಇನ್ನು ಅಥಿತಿ ಶಿಕ್ಷಕರನ್ನು ನೇಮಿಸಿಕೊಳ್ಳಿ ಎಂದು ಶಿಕ್ಷಣ ಇಲಾಖೆ ಅನುಮತಿಯನ್ನು ನೀಡಿದೆ. ಆದರೆ ಶಿಕ್ಷಕರಾಗ ಬಯಸಿರುವ ಆಕಾಂಕ್ಷಿಗಳು ಸ್ಪರ್ಥಾತ್ಮಕ ಪರೀಕ್ಷೆಯ ಸಿದ್ದತೆಯಲ್ಲಿ ತೊಡಗಿದ್ದಾರೆ. ಇನ್ನು ಕೆಲವು ಶಿಕ್ಷಕರು ಅಥಿತಿ ಶಿಕ್ಷಕರಾಗಿ 8 ರಿಂದ 10 ಸಾವಿರ ವೇತನವನ್ನು ಪಡೆಯುವ ಬದಲು ಖಾಸಗಿ ಶಾಲೆಯಲ್ಲಿ ಹೆಚ್ಚಿನ ವೇತನವನ್ನು ಪಡೆದು ಕೆಲಸ ಮಾಡುವುದು ಉತ್ತಮ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವು ಶಿಕ್ಷಕರ ನಮಗೆ ವೇತನ ಹೆಚ್ಚು ಮಾಡಿದಲ್ಲಿ ಅಥಿತಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತೇವೆ ಎನ್ನುತ್ತಾರೆ.

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಏರಿಕೆ

ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಏರಿಕೆ

ಕೋವಿಡ್ ಕಾರಣ , ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ, ಕರ್ನಾಟಕ ಪಬ್ಲಿಕ್ ಶಾಲೆಗಳಿಂದಾಗಿ ದಾಖಲಾತಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಸರ್ಕಾರ ಶಿಕ್ಷಕರ ಕೊರತೆಯಿಂದ ಅಥಿತಿ ಶಿಕ್ಷಕರ ನೇಮಕವನ್ನು ಮಾಡಿಕೊಳ್ಳುತ್ತಿದೆ. ಆದರೆ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಮರ್ಥ್ಯವಿರುವ ಶಿಕ್ಷಕರನ್ನು ನೇಮಿಸಿಕೊಳ್ಳಬೇಕಿದೆ.

Recommended Video

ಛೇ.... ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ IPLನಲ್ಲಿ ನೆನ್ನೆ ಆಗಬಾರದ್ದು ಆಗೋಯ್ತು!!! | Oneindia Kannada

English summary
Karnataka Schools will be open from May 16th onwards. the govt schools face acute shortage of teachers Govt to appoint guest teachers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X