ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಶಾಲೆ ಮಕ್ಕಳು ಚೂಡಿದಾರಕ್ಕೆ ಕಾಯುತ್ತಿವೆ!

|
Google Oneindia Kannada News

ಧಾರವಾಡ, ಸೆಪ್ಟೆಂಬರ್ 18: ಸರ್ಕಾರ ಶಾಲೆಗಳು ಆರಂಭಗೊಂಡು ಅರ್ಧವರ್ಷ ಕಳೆಯುತ್ತಾ ಬಂದರೂ ರಾಜ್ಯದ ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಸಮವಸ್ತ್ರ ಇನ್ನೂ ದೊರೆತಿಲ್ಲ.

ಹಳ್ಳಿಗಳಲ್ಲಿ ಸಾಮಾನ್ಯವಾಗಿ ಬಡ ಮಕ್ಕಳೇ ವ್ಯಾಸಂಗ ಮಾಡುತ್ತಿರುತ್ತಾರೆ, ಕೂಲಿ ನಾಲಿ ಮಾಡಿಕೊಂಡು ಮಕ್ಕಳನ್ನು ಓದಿಸುತ್ತಾರೆ, ಶಾಲೆಯಲ್ಲಿ ಸಮವಸ್ತ್ರ ನೀಡಿದರೆ ಅದನ್ನೇ ಹೊಸ ಬಟ್ಟ ಎಂಬಂತೆ ಸಂತೋಷ ಪಡುತ್ತಾರೆ. ಸಮವಸ್ತ್ರವನ್ನು ನೀಡುತ್ತೇವೆ ಎಂದು ಹೇಳಿದ ಮೇಲೆ ಕಡ್ಡಾಯವಾಗಿ ಸರಿಯಾದ ಸಮಯದಲ್ಲಿ ಶಾಲೆಗಳಿಗೆ ಸಮವಸ್ತ್ರವನ್ನು ವಿತರಿಸಬೇಕಾಗಿದ್ದು ಸರ್ಕಾರದ ಕರ್ತವ್ಯವಾಗಿರುತ್ತದೆ.

ಎರಡು ವರ್ಷಗಳ ನಂತರ ಸರ್ಕಾರಿ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ! ಎರಡು ವರ್ಷಗಳ ನಂತರ ಸರ್ಕಾರಿ ಶಿಕ್ಷಕರಿಗೆ ವರ್ಗಾವಣೆ ಭಾಗ್ಯ!

ಅರ್ಧವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿವೆ ಆದರೂ ಕಲರ್ ಡ್ರೆಸ್ ನಲ್ಲಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವಂತಾಗಿದೆ. ಇದು ಧಾರವಾಡದಲ್ಲಿ ಈಗಿರುವ ಪರಿಸ್ಥಿತಿ ಆದರೆ ರಾಜ್ಯದಲ್ಲಿ ಇನ್ನೂ ಹಲವು ಜಿಲ್ಲೆಗಳಲ್ಲಿ ಪ್ರೌಢಶಾಲಾ ಮಕ್ಕಳಿಗೆ ಸಮವಸ್ತ್ರಗಳು ದೊರೆತಿಲ್ಲ.

ಕರ್ನಾಟಕದ ಒಂದು ಸಾವಿರ, ಭಾರತದ 13 ಸಾವಿರ ಹಳ್ಳಿಗಳಲ್ಲಿ ಶಾಲೆಗಳೇ ಇಲ್ಲ!ಕರ್ನಾಟಕದ ಒಂದು ಸಾವಿರ, ಭಾರತದ 13 ಸಾವಿರ ಹಳ್ಳಿಗಳಲ್ಲಿ ಶಾಲೆಗಳೇ ಇಲ್ಲ!

ಮೇ ಅಂತ್ಯದಲ್ಲೇ ಉಚಿತ ಸಮವಸ್ತ್ರ ವಿತರಣೆ ಮಾಡಬೇಕು, 12 ಶಾಲೆಗಳ 800ಕ್ಕೂ ಹೆಚ್ಚು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಇನ್ನೂ ಸಮವಸ್ತ್ರ ದೊರೆತಿಲ್ಲ. ಈ ಕುರಿತು ಡಿಡಿಪಿಐ ಬಳಿಯೂ ಉತ್ತರವಿಲ್ಲ.

ಶಾಲೆಗೆ ಬರುವ ಅನುದಾನದಲ್ಲಿ ಮಕ್ಕಳಿಗೆ ಸಮವಸ್ತ್ರ

ಶಾಲೆಗೆ ಬರುವ ಅನುದಾನದಲ್ಲಿ ಮಕ್ಕಳಿಗೆ ಸಮವಸ್ತ್ರ

ಎಸ್‌ಡಿಎಂಸಿ ಸದಸ್ಯರು ಮತ್ತು ಶಾಲೆಯ ಮುಖ್ಯ ಶಿಕ್ಷಕರನ್ನು ಒಳಗೊಂಡ ಸಮಿತಿಗಳು ಶಾಲೆಯಲ್ಲಿನ ಮಕ್ಕಳ ಸಂಖ್ಯೆಯನ್ನು ಸ್ಕೂಲ್ ಟ್ರ್ಯಾಕಿಂಗ್ ಸಿಸ್ಟಂ ಮೂಲಕ ಇಲಾಖೆಗೆ ಕಳುಹಿಸಿವೆ, ಅದರನ್ವಯ ಬರುವ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಖರೀದಿಸಬೇಕಾಗಿದೆ.

ಹಣವಿಲ್ಲ ಎಂಬ ನೆಪವೊಡ್ಡಿ ಶಾಲೆಯ ಸಮವಸ್ತ್ರಕ್ಕೆ ಕೊಕ್

ಹಣವಿಲ್ಲ ಎಂಬ ನೆಪವೊಡ್ಡಿ ಶಾಲೆಯ ಸಮವಸ್ತ್ರಕ್ಕೆ ಕೊಕ್

ಹಣವಿಲ್ಲ ಎಂಬ ನೆಪವೊಡ್ಡಿ ಶಾಲೆಯ ಸಮವಸ್ತ್ರ ವಿತರಣೆಗೆ ಸರ್ಕಾರ ಕತ್ತರಿ ಹಾಕಿದೆ, ಇರುವ ಒಂದೇ ಸಮವಸ್ತ್ರವನ್ನು ತೊಟ್ಟು ವಾರವಿಡೀ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಶಾಲೆಯ ಮಕ್ಕಳಿಗೆ ಬಂದಿದೆ. ಶೈಕ್ಷಣಿಕ ವರ್ಷ ಆರಂಭಗೊಂಡು ಅರ್ಧ ವರ್ಷವೇ ಮುಗಿಯುತ್ತಾ ಬಂದರೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಎರಡನೇ ಜೊತೆ ಸಮವಸ್ತ್ರಗಳು ಇನ್ನೂ ವಿತರಣೆಯಾಗಿಲ್ಲ. ರಾಜ್ಯದ ಮಕ್ಕಳಿಗೆ ಅರಿವೆ ಕೊಡಿಸಲು ಕೋಟಿಗಟ್ಟಲೆ ಅನುದಾನ ಬೇಕು, ಸರ್ಕಾರದ ಬಳಿ ಹಣವಿಲ್ಲ ಎಂದಿದ್ದಾರೆ ಅಧಿಕಾರಿಗಳು.

ಶಾಲೆ, ಕಾಲೇಜಿಗೆ ಮೂಲ ಸೌಕರ್ಯ ಒದಗಿಸಲು ಸಿಎಂ ಸೂಚನೆಶಾಲೆ, ಕಾಲೇಜಿಗೆ ಮೂಲ ಸೌಕರ್ಯ ಒದಗಿಸಲು ಸಿಎಂ ಸೂಚನೆ

ಟೆಂಡರ್ ಮೂಲಕ ಸಮವಸ್ತ್ರ ಖರೀದಿಸಲು ಚಿಂತನೆ ನಡೆಸಿತ್ತು

ಟೆಂಡರ್ ಮೂಲಕ ಸಮವಸ್ತ್ರ ಖರೀದಿಸಲು ಚಿಂತನೆ ನಡೆಸಿತ್ತು

ಪ್ರೌಢಶಿಕ್ಷಣ ಇಲಾಖೆಯು ಎರಡನೇ ಜತೆ ಸಮವಸ್ತ್ರವನ್ನು ಟೆಂಡರ್ ಮೂಲಕ ವಿತರಿಸಲು ನಿರ್ಧರಿಸಿತ್ತು ಇದೀಗ ಶಾಲೆಗಳು ಆರಂಭವಾದ ಬಳಿಕ ಎಸ್‌ಡಿಎಂಸಿ ಮೂಲಕವೇ ಸಮವಸ್ತ್ರ ನೀಡಲು ಆದೇಶ ಹೊರಡಿಸಿದೆ.

ಎಷ್ಟು ಮಕ್ಕಳಿಗೆ ಸಮವಸ್ತ್ರ ಸಿಕ್ಕಿಲ್ಲ

ಎಷ್ಟು ಮಕ್ಕಳಿಗೆ ಸಮವಸ್ತ್ರ ಸಿಕ್ಕಿಲ್ಲ

1-8ನೇ ತರಗತಿಯಲ್ಲಿನ 8.60 ಲಕ್ಷ ಶಾಲಾ ಮಕ್ಕಳಿಗೆ ಸಮವಸ್ತ್ರ ದೊರೆತಿಲ್ಲ, 91 ಕೋಟಿ ಎರಡನೇ ಬಾರಿ ಸಮವಸ್ತ್ರ ವಿತರಣೆಗೆ ಬೇಕಾದ ಅನುದಾನ, 1-5 ನೇ ತರಗತಿ ಮಕ್ಕಳಿಗೆ ಸಮವಸ್ತ್ರಕ್ಕೆ 200 ರೂ ನೀಡಲಾಗುತ್ತದೆ 6-8ನೇ ತರಗತಿ ಮಕ್ಕಳಿಗೆ 300ರೂ. ನೀಡಲಾಗುತ್ತದೆ.

English summary
Within twenty days children in government school will go for midterm vacation on the occasion of Dussehra festival, but still waiting for their uniforms for this academic year. Here is the sorry status of the uniforms distribution system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X