ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಶಾಲೆಗಳಿಗೆ ಹೊಸ ಭರವಸೆ: ಹಳೆಯ ಪ್ರಸ್ತಾವಕ್ಕೆ ಸರ್ಕಾರದ ಆಸಕ್ತಿ

|
Google Oneindia Kannada News

ಬೆಂಗಳೂರು, ಜನವರಿ 2: ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿ ಮತ್ತು ನಗರ ವಾರ್ಡ್‌ಗಳಲ್ಲಿ ಕೇಂದ್ರೀಯ ವಿದ್ಯಾಲಯ ಮಾದರಿ ಆಧಾರಿತ 7,000ಕ್ಕೂ ಹೆಚ್ಚು ಶಾಲೆಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಹಳೆಯ ಯೋಜನೆಗೆ ಮರುಜೀವ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.

ಈ ಮಾದರಿಯ ಶಾಲೆಗಳನ್ನು ತೆರೆಯುವ ಪ್ರಸ್ತಾವವನ್ನು ಭಾರತೀಯ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದ ಮಗು ಮತ್ತು ಕಾನೂನು ಕೇಂದ್ರ (ಸಿಸಿಎಲ್) 2004ರಲ್ಲಿಯೇ ಪ್ರಸ್ತಾಪಿಸಿತ್ತು. ಆದರೆ 2018ರಲ್ಲಿ ಇದರ ಬದಲು ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಸ್ಥಾಪಿಸುವ ಮೂಲಕ ಯೋಜನೆಯನ್ನು ಕೈಬಿಡಲಾಗಿತ್ತು.

ರಾಜ್ಯಾದ್ಯಂತ ಶಾಲೆಗಳ ಪುನರಾರಂಭ; ವಿದ್ಯಾರ್ಥಿಗಳ ಹಾಜರಾತಿ ಎಷ್ಟು?ರಾಜ್ಯಾದ್ಯಂತ ಶಾಲೆಗಳ ಪುನರಾರಂಭ; ವಿದ್ಯಾರ್ಥಿಗಳ ಹಾಜರಾತಿ ಎಷ್ಟು?

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರು ಸಿಸಿಎಲ್‌ನ ಕಾರ್ಯಕ್ರಮ ಮುಖ್ಯಸ್ಥ ವಿ.ಪಿ. ನಿರಂಜನಾರಾಧ್ಯ ಅವರಿಗೆ ಈ ಯೋಜನೆಯನ್ನು ಮತ್ತೆ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ಮುಂದೆ ಓದಿ.

ಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳ ದಿನಾಂಕ ಪ್ರಕಟ: ಇಲ್ಲಿದೆ ವಿವರಸಿಬಿಎಸ್‌ಇ ಬೋರ್ಡ್ ಪರೀಕ್ಷೆಗಳ ದಿನಾಂಕ ಪ್ರಕಟ: ಇಲ್ಲಿದೆ ವಿವರ

ಶಾಲೆಗಳಿಗೆ ಮೂಲಸೌಕರ್ಯ ಕೊರತೆ

ಶಾಲೆಗಳಿಗೆ ಮೂಲಸೌಕರ್ಯ ಕೊರತೆ

ಸುಮಾರು 26 ಗ್ರಾಮಗಳಲ್ಲಿ ಪಂಚಾಯಿತಿಗಳ ಜತೆಗೂಡಿ ಕೆಲಸ ಮಾಡುತ್ತಿರುವ ಸಿಸಿಎಲ್, ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳು ಮೂಲಸೌಕರ್ಯದ ಕೊರತೆ ಎದುರಿಸುತ್ತಿದ್ದು, ಗುಣಮಟ್ಟದ ಸವಲತ್ತುಗಳ ಜತೆಗೆ ಉತ್ತಮ ಶಿಕ್ಷಣ ಒದಗಿಸುವ ಯೋಜನೆಯ ಪ್ರಸ್ತಾವ ಕರಡು ರೂಪಿಸಿತ್ತು.

ಸವಲತ್ತುಗಳು ಏನಿರಬೇಕು?

ಸವಲತ್ತುಗಳು ಏನಿರಬೇಕು?

ಕನಿಷ್ಠ ಮೂರು ಎಕರೆ ಭೂಮಿಯಲ್ಲಿ ಶಾಲೆ ಸ್ಥಾಪಿಸುವುದು. ಪ್ರತಿ 40 ಮಕ್ಕಳಿಗೆ ಒಂದು ತರಗತಿ ಕೊಠಡಿ. ಗ್ರಂಥಾಲಯ, ವಿಶೇಷ ಚೇತನ ಮಕ್ಕಳು ಕೂಡ ಬಳಸಬಹುದಾದಂತಹ ಬಾಲಕಿಯರು ಮತ್ತು ಬಾಲಕರಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಸಭಾಂಗಣ, ಕಂಪ್ಯೂಟರ್ ವಿಜ್ಞಾನ ಮತ್ತು ಇತರೆ ಪ್ರಯೋಗಾಲಯಗಳು, ಕನ್ವೆಂನ್ಷನ್ ಸೆಂಟರ್ ಮತ್ತು ವಿಶ್ರಾಂತಿಗೆ ಸಾಕಷ್ಟು ಜಾಗ ಮೀಸಲಿಡುವುದು.

ವಿದ್ಯಾರ್ಥಿಗಳಿಗೆ ಸಾಕಷ್ಟು ಶಿಕ್ಷಕರು

ವಿದ್ಯಾರ್ಥಿಗಳಿಗೆ ಸಾಕಷ್ಟು ಶಿಕ್ಷಕರು

ಕಟ್ಟಡಕ್ಕೆ ಸೂಕ್ತ ಕಾಂಪೌಂಡ್ ಮತ್ತು ಸಿಡಬ್ಲ್ಯೂಎಸ್ಎನ್ ಸ್ನೇಹಿ ಸವಲತ್ತುಗಳು. ಎಲ್ಲ ಶಿಕ್ಷಕರೂ ಪೂರ್ಣಾವಧಿ ಸಿಬ್ಬಂದಿಯಾಗಿರಬೇಕು. ಪ್ರತಿ ವಿಷಯಕ್ಕೆ 40 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಇರಬೇಕು. ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಪ್ರಯಾಣ ಸೌಲಭ್ಯಗಳು, ಸಾರ್ವತ್ರಿಕ ನೋಂದಣಿ ಮತ್ತು ಮಧ್ಯಾಹ್ನದ ಬಿಸಿಯೂಟ ಹಾಗೂ ಇತರೆ ಸವಲತ್ತುಗಳನ್ನು ಒದಗಿಸುವಂತೆ ಅದು ಸಲಹೆ ನೀಡಿತ್ತು.

ಶಾಲೆಗಳ ವಿಸ್ತರಣೆ ಶಿಫಾರಸು

ಶಾಲೆಗಳ ವಿಸ್ತರಣೆ ಶಿಫಾರಸು

ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ಅಂಗನವಾಡಿ/ಶಾಲಾ ಪೂರ್ವ ಅವಧಿಯ ಮೂರು ವರ್ಷ ಸೇರಿದಂತೆ 12 ವರ್ಷಗಳ ಶಾಲೆಗಳನ್ನು ಜತೆಗೂಡಿಸುವ ಪ್ರಸ್ತಾಪವನ್ನು ಇರಿಸಿದೆ. ಅದಕ್ಕೂ ಬಹಳ ಹಿಂದೆಯೇ 2004ರಲ್ಲಿ ಸಿಸಿಎಲ್ ಗ್ರಾಮೀಣ ಭಾಗಗಳಲ್ಲಿನ ಶಾಲೆಗಳು ಅಂಗನವಾಡಿಗಳನ್ನು 4ನೇ ತರಗತಿಯವರೆಗೆ ಒಳಗೊಳ್ಳುವಂತೆ ಶಿಫಾರಸು ಮಾಡಿತ್ತು. ಜತೆಗೆ ಗ್ರಾಮ ಪಂಚಾಯಿತಿ ಹಾಗೂ ನಗರ ವಾರ್ಡ್ ಮಟ್ಟಗಳಲ್ಲಿ 5 ರಿಂದ 12ನೇ ತರಗತಿಯವರೆಗೆ ಉತ್ತಮ ಸವಲತ್ತಿನ ಶಾಲೆಗಳನ್ನು ಸ್ಥಾಪಿಸುವ ಪ್ರಸ್ತಾವ ಇರಿಸಿತ್ತು.

Recommended Video

ಮೂರನೇ ಪಂದ್ಯಕ್ಕೂ ಮುನ್ನ ಭಾರತ ತಂಡ ಅಭ್ಯಾಸದಲ್ಲಿ ತೊಡಗಿದ್ದಾರೆ | Oneindia Kannada

English summary
Karnataka govt revisits plan, Kendriya Vidyalaya model schools likely in Gram Panchayats, Wards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X