ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲ್ಲೂಕು ಪಂಚಾಯತಿಗಳ ರದ್ದು: ಸರ್ಕಾರದ ಮಹತ್ವದ ಚಿಂತನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 18: ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರ ತಾಲ್ಲೂಕು ಪಂಚಾಯತಿಗಳನ್ನೇ ರದ್ದುಗೊಳಿಸಲು ಮುಂದಾಗಿದೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ತಾಲ್ಲೂಕು ಪಂಚಾಯತಿಗಳನ್ನು ರದ್ದುಪಡಿಸುವ ವಿಧೇಯಕವು ಮುಂದಿನ ಬಜೆಟ್‌ನಲ್ಲಿ ಮಂಡನೆಯಾಗಲಿದೆ.

ಪ್ರಸಕ್ತ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಜ್ಜುಗೊಂಡಿದೆ. ಅದಕ್ಕೂ ಮೊದಲೇ ತಾಲ್ಲೂಕು ಪಂಚಾಯತಿಗಳು ರದ್ದಾಗುವ ಸಾಧ್ಯತೆ ಇದೆ. ಬಜೆಟ್ ಅಧಿವೇಶನದಲ್ಲಿ ಈ ನಿರ್ಣಯ ಅಂಗೀಕಾರವಾಗಲಿದ್ದು, ನಂತರ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಕಳುಹಿಸುವ ನಿರೀಕ್ಷೆಯಿದೆ.

ಜಿ.ಪಂ, ತಾ.ಪಂ ಚುನಾವಣೆ ಮುಂದೂಡಲು ಸರ್ಕಾರದ ಹುನ್ನಾರ: ಎಚ್.ಕೆ ಪಾಟೀಲ್ ಕಿಡಿಜಿ.ಪಂ, ತಾ.ಪಂ ಚುನಾವಣೆ ಮುಂದೂಡಲು ಸರ್ಕಾರದ ಹುನ್ನಾರ: ಎಚ್.ಕೆ ಪಾಟೀಲ್ ಕಿಡಿ

ತಾಲ್ಲೂಕು ಪಂಚಾಯತಿಗಳ ಸದಸ್ಯರಿಗೆ ಆಡಳಿತಾತ್ಮಕ ಅಧಿಕಾರ ಮತ್ತು ಆರ್ಥಿಕ ಅಧಿಕಾರಗಳಿಲ್ಲ. ಈಗಾಗಲೇ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ತಾಲ್ಲೂಕು ಪಂಚಾಯತಿಗಳ ನಿರ್ವಹಣೆ ಮತ್ತಷ್ಟು ಆರ್ಥಿಕ ಹೊರೆಯಾಗುತ್ತಿದೆ. ಈಗಿನ ವ್ಯವಸ್ಥೆಯಲ್ಲಿ ತಾಲ್ಲೂಕು ಪಂಚಾಯತ್ ಸದಸ್ಯರಿಗೆ ವೇತನ ನೀಡಲು ಸಹ ಕಷ್ಟವಾಗುತ್ತಿದೆ. ಮುಂದೆ ಓದಿ.

ಗ್ರಾ.ಪಂಗೆ ಮರಳಿದ ಸದಸ್ಯರು

ಗ್ರಾ.ಪಂಗೆ ಮರಳಿದ ಸದಸ್ಯರು

ತಾಲ್ಲೂಕು ಪಂಚಾಯಿತಿಗೆ ಹೆಚ್ಚಿನ ಅಧಿಕಾರಗಳಿಲ್ಲದ ಕಾರಣ ಅನೇಕ ಸದಸ್ಯರು ಗ್ರಾಮ ಪಂಚಾಯಿತಿಗೆ ಸ್ಪರ್ಧಿಸುತ್ತಿದ್ದಾರೆ. ಗ್ರಾಮೀಣ ಆಡಳಿತವನ್ನು ಸುಗಮಗೊಳಿಸಲು ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಪಂಚಾಯತಿಯಲ್ಲಿ ಎರಡು ಸ್ತರದ ಆಡಳಿತ ವ್ಯವಸ್ಥೆ ತರಲು ಸರ್ಕಾರ ಚಿಂತನೆ ನಡೆಸಿದೆ.

ತಾಲ್ಲೂಕು ಪಂಚಾಯತಿಗಳು ಸರ್ಕಾರಕ್ಕೆ ಆರ್ಥಿಕ ಹೊರೆಯಾಗುತ್ತಿವೆ. ಅವುಗಳನ್ನು ರದ್ದುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲದ ಕಾರಣ, ಸದನದಲ್ಲಿ ನಿರ್ಣಯ ತೆಗೆದುಕೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗುತ್ತದೆ.

ತಾಲೂಕು ಪಂಚಾಯಿತಿ ವ್ಯವಸ್ಥೆ ತೆಗೆಯುವುದಿಲ್ಲ: ಸಚಿವರ ಸ್ಪಷ್ಟನೆತಾಲೂಕು ಪಂಚಾಯಿತಿ ವ್ಯವಸ್ಥೆ ತೆಗೆಯುವುದಿಲ್ಲ: ಸಚಿವರ ಸ್ಪಷ್ಟನೆ

ಕೆಎಸ್ ಈಶ್ವರಪ್ಪ ಮಾಹಿತಿ

ಕೆಎಸ್ ಈಶ್ವರಪ್ಪ ಮಾಹಿತಿ

ಈ ವಿಚಾರವನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್ ಎರಡೂ ಕಡೆ ಚರ್ಚಿಸಲಾಗುತ್ತದೆ. ನಂತರ ನಿರ್ಣಯ ತೆಗೆದುಕೊಳ್ಳಲಾಗುವುದು. ಕೇಂದ್ರ ಸರ್ಕಾರ ಇತರೆ ರಾಜ್ಯಗಳಿಂದಲೂ ಅಭಿಪ್ರಾಯಗಳನ್ನು ಕೇಳಬಹುದು. ತಾಲ್ಲೂಕು ಪಂಚಾಯಿತಿ ಸಿಬ್ಬಂದಿಯನ್ನು ಗ್ರಾಮ ಪಂಚಾಯತಿಗಳಿಗೆ ವರ್ಗಾಯಿಸಬಹುದು. ಇದರಿಂದ ಗ್ರಾಮ ಪಂಚಾಯತಿಗಳು ಆರ್ಥಿಕವಾಗಿಯೂ ಪ್ರಬಲವಾಗುತ್ತವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಸಂವಿಧಾನದ ತಿದ್ದುಪಡಿ ಮಾಡಬೇಕು

ಸಂವಿಧಾನದ ತಿದ್ದುಪಡಿ ಮಾಡಬೇಕು

ತಾಲ್ಲೂಕು ಪಂಚಾಯತಿಗಳನ್ನು ರದ್ದುಗೊಳಿಸುವುದು ಬಹಳ ಸುದೀರ್ಘ ಪ್ರಕ್ರಿಯೆಯಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಂವಿಧಾನದಲ್ಲಿ ತಿದ್ದುಪಡಿ ತರಬೇಕಾಗಿದೆ. ಹೀಗಾಗಿ ಈ ಬಾರಿಯ ತಾಲ್ಲೂಕು ಪಂಚಾಯಿತಿ ಚುನಾವಣೆಗೂ ಮುನ್ನ ಅವುಗಳ ರದ್ದತಿ ಸಾಧ್ಯವಾಗುವುದು ಅನುಮಾನ.

ನಿರ್ಣಯ ರವಾನೆಯ ಕೆಲಸ ಮಾತ್ರ

ನಿರ್ಣಯ ರವಾನೆಯ ಕೆಲಸ ಮಾತ್ರ

ಗ್ರಾಮ ಪಂಚಾಯತಿಗಳು ಅಂಗೀಕರಿಸಿದ ನಿರ್ಣಯಗಳನ್ನು ಜಿಲ್ಲಾ ಪಂಚಾಯಿತಿಗಳಿಗೆ ರವಾನಿಸುವ ಕೆಲಸವನ್ನಷ್ಟೇ ತಾಲ್ಲೂಕು ಪಂಚಾಯತಿಗಳು ಮಾಡುತ್ತಿವೆ. ಅವರಿಗೆ ಯಾವುದೇ ಆರ್ಥಿಕ ಅಧಿಕಾರವಿಲ್ಲ. ಅವುಗಳು ಯಾವುದೇ ಯೋಜನೆಯನ್ನು ಜಾರಿಗೊಳಿಸಲು ಆಗುವುದಿಲ್ಲ. ಹೀಗಾಗಿ ತಾಲ್ಲೂಕು ಪಂಚಾಯತಿಗಳು ಸರ್ಕಾರದ ಪಾಲಿನ ಬಿಳಿಯಾನೆಯಾಗಿದೆ.

Recommended Video

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ವಿಚಾರ-ಹೆಚ್ಡಿಕೆ,ಸಿದ್ದು ಆರೋಪಕ್ಕೆ ರೇಣುಕಾಚಾರ್ಯ ಟಾಂಗ್ | Oneindia Kannada
3,200 ತಾಲ್ಲೂಕು ಪಂಚಾಯತಿ ಸ್ಥಾನ

3,200 ತಾಲ್ಲೂಕು ಪಂಚಾಯತಿ ಸ್ಥಾನ

ಅತ್ತ ಚುನಾವಣಾ ಆಯೋಗವು ಚುನಾವಣಾ ಪೂರ್ವ ಪ್ರಕ್ರಿಯೆಗಳನ್ನು ನಡೆಸುತ್ತಿದೆ. ನಿಯಮದ ಪ್ರಕಾರ ಮತದಾರರ ಸಂಖ್ಯೆ ಹೆಚ್ಚಿದಂತೆ ಕ್ಷೇತ್ರ ವಿಂಗಡಣೆ ಮಾಡಬೇಕಾಗುತ್ತದೆ. ಪ್ರತಿ ಕ್ಷೇತ್ರಕ್ಕೆ ಮತದಾರರ ಸಂಖ್ಯೆಯನ್ನು ಹೆಚ್ಚಿಸಿದ ಬಳಿಕ ತಾಲ್ಲೂಕು ಪಂಚಾಯತಿ ಸ್ಥಾನಗಳ ಸಂಖ್ಯೆ 600ರಷ್ಟು ಇಳಿಕೆಯಾಗಲಿದೆ. 3,200 ತಾಲ್ಲೂಕು ಪಂಚಾಯತಿ ಸ್ಥಾನಗಳಿಗೆ ಚುನಾವಣೆ ನಡೆಸಲು ಆಯೋಗ ಮುಂದಾಗಿದೆ. ತಾಲ್ಲೂಕು ಪಂಚಾಯಿತಿಯ ರದ್ದತಿ ಇಲ್ಲ ಎಂದು ಇತ್ತೀಚೆಗೆ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದರು.

English summary
Karnataka looks at scrapping Taluk Panchayats, likely to be passed in assembly during the budget session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X