ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಕಾಲೇಜು ಉಪನ್ಯಾಸಕರ ವಿದೇಶ ಪ್ರಯಾಣ ಇನ್ನು ಸುಲಭ

|
Google Oneindia Kannada News

ಗಳೂರು, ಅಕ್ಟೋಬರ್ 6: ಸರ್ಕಾರಿ ಕಾಲೇಜುಗಳ ಉಪನ್ಯಾಸಕರ ವಿದೇಶ ಪ್ರವಾಸ ಇನ್ನು ಸುಲಭವಾಗಲಿದೆ. ಪ್ರವಾಸಕ್ಕಿದ್ದ ಸಾಕಷ್ಟು ನಿರ್ಬಂಧಗಳನ್ನು ಸರ್ಕಾರ ತೆರವುಗೊಳಿಸಿದೆ.

ಸರ್ಕಾರಿ ಪದವಿ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ವಿದೇಶ ಪ್ರವಾಸಕ್ಕಿದ್ದ ನಿರ್ಬಂಧಗಳನ್ನು ಸರ್ಕಾರ ತೆರವುಗೊಳಿಸಿರುವುದು ಸಾಕಷ್ಟು ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ.

3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು 3 ವರ್ಷಗಳಿಂದ ವರ್ಗಾವಣೆ ಸ್ಥಗಿತ: ಉಪವಾಸಕ್ಕೆ ಮುಂದಾದ ಶಿಕ್ಷಕರು

ಎಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಳೇಜುಗಳ ಪ್ರಾಧ್ಯಾಪಕರು ಹಾಗೂ ಇತರೆ ಬೋಧಕೇತರ ಸಿಬ್ಬಂದಿ ತಮ್ಮ ಸ್ವಂತ ಖರ್ಚಿನಲ್ಲಿ ಹಾಗೂ ತಮ್ಮ ಗಳಿಕೆ ರಜೆಗಳನ್ನು ಬಳಸಿಕೊಂಡು ವಿದೇಶ ಪ್ರವಾಸ ಕೈಗೊಳ್ಳಬೇಕಾಗಿತ್ತು. ಈ ಪ್ರಸ್ತಾವನೆಯನ್ನು ಪರಿಶೀಲಿಸಿ ಅನುಮೋದಿಸುವ ಅಧಿಕಾರವು ಇದೀಗ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಗೆ ನೀಡಲಾಗಿದೆ. ಹಾಗಾಗಿ ಇನ್ನುಮುಂದೆ ಉಪನ್ಯಾಸಕರ ವಿದೇಶ ಪ್ರವಾಸ ಸುಲಭವಾಗಲಿದೆ.

ಪ್ರವಾಸಕ್ಕೆ ಸಮಸ್ಯೆಯೇನಿತ್ತು?

ಪ್ರವಾಸಕ್ಕೆ ಸಮಸ್ಯೆಯೇನಿತ್ತು?

ವಿದೇಶ ಪ್ರವಾಸಕ್ಕೆ ಹೋಗಬೇಕೆಂದರೆ ಎರಡು ಕಡೆ ದಾಖಲೆಗಳನ್ನು ಸಲ್ಲಿಸಬೇಕಿತ್ತು, ನಂತರ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿ ವಿಳಂಬಗಳಾಗುತ್ತಿದ್ದವು, ಕೆಲಸ ಒತ್ತಡ ಹಾಗೂ ಅನೇಕ ಕಾರಣಗಳಿಂದ ಕಡತಗಳನ್ನು ಶೀಘ್ರ ವಿಲೇವಾರಿ ಮಾಡುವಲ್ಲಿ ಅಧಿಕಾರಿಗಳು ತೋರುತ್ತಿದ್ದ ವಿಳಂಬದಿಂದಾಗಿ ಪ್ರವಾಸವನ್ನು ಕೈಬಿಡಲಾಗುತ್ತಿತ್ತು.

ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು! ಛೆ, ಇದೆಂಥ ವಿಡಿಯೋ ನೋಡಿ! ವಿದ್ಯಾರ್ಥಿಗಳ ಕಾಲಿಗೆ ಬಿದ್ದ ಗುರು!

ಹೋರಾಟ ಆರಂಭವಾಗಿದ್ದು ಯಾವಾಗ

ಹೋರಾಟ ಆರಂಭವಾಗಿದ್ದು ಯಾವಾಗ

ವಿದೇಶ ಪ್ರವಾಸಕ್ಕೆ ತೆರಳಲು ಕೇವಲ ಶಿಕ್ಷಣ ಇಲಾಖೆಯ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡುವಂತೆ ಸರ್ಕಾರಿ ಪದವಿ ಕಾಲೇಜುಗಳ ಪ್ರಾಧ್ಯಾಪಕರ ಸಂಘ ಕಳೆದ ಐದಾರು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿತ್ತು, ಹಲವು ವರ್ಷಗಳ ಮನವಿಗೆ ಸರ್ಕಾರ ಸ್ಪಂದಿಸಿದೆ. ಇದು ಸಂತಸ ತಂದಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ್ ತಿಳಿಸಿದ್ದಾರೆ.

ನಿಂತು ಹೋದ ಶಿಕ್ಷಕರ ವರ್ಗಾವಣೆ: ಈ ಬಾರಿ ಶಿಕ್ಷಣ ಸಚಿವರೇ ತಡೆದರು! ನಿಂತು ಹೋದ ಶಿಕ್ಷಕರ ವರ್ಗಾವಣೆ: ಈ ಬಾರಿ ಶಿಕ್ಷಣ ಸಚಿವರೇ ತಡೆದರು!

ಗಳಿಕೆ ರಜೆಯಲ್ಲಿ ಮಾತ್ರ ಪ್ರವಾಸ

ಗಳಿಕೆ ರಜೆಯಲ್ಲಿ ಮಾತ್ರ ಪ್ರವಾಸ

ಗಳಿಕೆ ರಜೆಯಲ್ಲಿ ಮಾತ್ರ ಪ್ರವಾಸ ಕೈಗೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ. ಇತರೆ ಇಲಾಖೆಗಳ ಸಿಬ್ಬಂದಿಗೆ ವಾರ್ಷಿಕ 30 ಗಳಿಕೆ ರಜೆ ಇದ್ದರೆ, ಸರ್ಕಾರಿ ಪದವಿ ಕಾಲೇಜುಗಳ ಸಿಬ್ಬಂದಿಗೆ ಕೇವಲ 10 ಗಳಿಕೆ ರಜೆಗಳಿವೆ. ಆದ್ದರಿಂದ ಈ ಅವಧಿಯಲ್ಲಿ ರಜೆ ಅಔಧಿಯಲ್ಲಿ ಪ್ರವಾಸ ಕೈಗೊಂಡರೆ ಗಳಿಕೆ ರಜೆ ಕಡಿತ ಮಾಡಬಹುದು ಎಂದಿದ್ದಾರೆ,.

ಈ ಹಿಂದಿನ ಆದೇಶದಲ್ಲಿ ಏನಿತ್ತು

ಈ ಹಿಂದಿನ ಆದೇಶದಲ್ಲಿ ಏನಿತ್ತು

2009ಕ್ಕೂ ಮುನ್ನ ಸರ್ಕಾರಿ ಪದವಿ ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕಾಲೇಜು ಶಿಕ್ಷಣ ಇಲಾಖೆಯ ಅನುಮತಿ ಪಡೆದು ವಿದೇಶ ಪ್ರವಾಸ ಕೈಗೊಳ್ಳಬಹುದಿತ್ತು, ಆದರೆ 2009ರಿದ ಇಲಾಖೆ ಅನುಮತಿ ಜತೆಗೆ ಸರ್ಕಾರದಿಂದಲೂ ಅನುಮತಿ ಪಡೆಯುವ ನಿಯಮವನ್ನು ಜಾರಿಗೆ ತರಲಾಯಿತು. ವಿದೇಶ ಪ್ರವಾಸ ಕೈಗೊಳ್ಳುವ ಪ್ರಾಧ್ಯಾಪಕರು ಹಾಗೂ ಇತರೆ ಸಿಬ್ಬಂದಿ ತಮ್ಮ ಪಾಸ್‌ಪೋರ್ಟ್, ವೀಸಾ, ವಿಮಾನ ಟಿಕೆಟ್, ಪ್ರವಾಸದ ಕಾರಣ, ಪ್ರಯಾಣದ ವಿವರಗಳನ್ನು ಚೆಕ್ ಲಿಸ್ಟ್ ಅನ್ನು ಇಲಾಖೆಗೆ ಸಲ್ಲಿಸಬೇಕಿತ್ತು.

English summary
Higher education department has removed restrictions on visiting abroad for government degree college lecturers following decade old demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X