ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಶೇ.10ರಷ್ಟು ಹೆಚ್ಚಳಕ್ಕೆ ಸರ್ಕಾರ ನಿರ್ಧಾರ

|
Google Oneindia Kannada News

ಬೆಂಗಳೂರು, ಮಾರ್ಚ್ 2: ಖಾಸಗಿ ಎಂಜಿನಿಯರಿಂಗ್ ಕಾಲೇಜು ಶುಲ್ಕವನ್ನು ಶೇ.10ರಷ್ಟು ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿರುವುದಾಗಿ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ತಿಳಿಸಿದ್ದಾರೆ.

ಕಾಮೆಡ್-ಕೆ ಸೇರಿದಂತೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಯಾವ್ಯಾವ ಎಂಜಿನಿಯರಿಂಗ್ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಮಾನ್ಯತೆ ಸಾಧ್ಯತೆ ಯಾವ್ಯಾವ ಎಂಜಿನಿಯರಿಂಗ್ ಕಾಲೇಜುಗಳಿಗೆ ವಿಶ್ವವಿದ್ಯಾಲಯ ಮಾನ್ಯತೆ ಸಾಧ್ಯತೆ

ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ.15ರಷ್ಟು ಶುಲ್ಕ ಹೆಚ್ಚಳ ಮಾಡುವ ಪ್ರಸ್ತಾಪವಾಗಿತ್ತು. ಆದರೆ ನ್ಯಾ.ಶೈಲೇಂದ್ರಕುಮಾರ್ ನೇತೃತ್ವದ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ನಿಗದಿ ಸಮಿತಿ ಶೇ.8ರಷ್ಟು ಹೆಚ್ಚಳಕ್ಕೆ ಸೀಮಿತಗೊಳಿಸಿತ್ತು.

Govt gives 10 percent fee hike for Engineering courses

ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ ಶೇ.10ರಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಆದರೆ ಸರ್ಕಾರಿ ಕಾಲೇಜುಗಳ ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಏರೋಸ್ಪೇಸ್ ಸೇರಿ 12 ಎಂಜಿನಿಯರಿಂಗ್ ಕೋರ್ಸ್ ಶೀಘ್ರ ಬಂದ್ ಏರೋಸ್ಪೇಸ್ ಸೇರಿ 12 ಎಂಜಿನಿಯರಿಂಗ್ ಕೋರ್ಸ್ ಶೀಘ್ರ ಬಂದ್

ಮೊದಲನೇ ಸ್ಲ್ಯಾಬ್‍ನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಸರ್ಕಾರಿ ಸೀಟುಗಳಿಗೆ 2018-19ನೇ ಸಾಲಿನಲ್ಲಿ 53,460 ರೂ. ನಿಗದಿಯಾಗಿತ್ತು. ಅದನ್ನು 2019-20ನೇ ಸಾಲಿಗೆ 58,800 ರೂ.ಗೆ ಪರಿಷ್ಕರಿಸಲಾಗಿದೆ.

ಎಂಬಿಎಗಿಂತ ನೌಕರಿಗೆ ಎಂಜಿನಿಯರಿಂಗ್ ಬೆಸ್ಟ್: ಸಮೀಕ್ಷೆಎಂಬಿಎಗಿಂತ ನೌಕರಿಗೆ ಎಂಜಿನಿಯರಿಂಗ್ ಬೆಸ್ಟ್: ಸಮೀಕ್ಷೆ

2ನೇ ಸ್ಲ್ಯಾಬ್ 2018-19ನೇ ಸಾಲಿನಲ್ಲಿ 59,400 ರೂ. ಇದ್ದ ಶುಲ್ಕವನ್ನು 65,340 ರೂ.ಗೆ ಪರಿಷ್ಕರಿಸಲಾಗಿದೆ. ಹಾಗೆಯೇ ಕಾಮೆಡ್-ಕೆ ಸೀಟುಗಳನ್ನು ಮೊದಲ ಸ್ಲ್ಯಾಬ್‍ನಲ್ಲಿ 2018-19ರಲ್ಲಿ 1,30,680 ರೂ. ಶುಲ್ಕವನ್ನು 1,43,748 ರೂ.ಗೆ ಹೆಚ್ಚಿಸಲಾಗಿದೆ.

ಇಂಜಿನಿಯರಿಂಗ್‌ಗೆ ತಗ್ಗಿದ ಬೇಡಿಕೆ, 33 ಕಾಲೇಜಲ್ಲಿ ಒಬ್ಬರೂ ದಾಖಲಾಗಿಲ್ಲ!ಇಂಜಿನಿಯರಿಂಗ್‌ಗೆ ತಗ್ಗಿದ ಬೇಡಿಕೆ, 33 ಕಾಲೇಜಲ್ಲಿ ಒಬ್ಬರೂ ದಾಖಲಾಗಿಲ್ಲ!

2ನೇ ಸ್ಲ್ಯಾಬ್‍ನಲ್ಲಿ 1,83,600 ರೂ. ಇದ್ದ ಶುಲ್ಕವನ್ನು 2,01,960 ರೂ.ಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಯಾವುದೇ ಒತ್ತಡವಿಲ್ಲ. ಆದರೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಇಂಜಿನಿಯರಿಂಗ್ ಕೋರ್ಸ್‍ಗಳ ಪ್ರವೇಶಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಶುಲ್ಕ ನಿಗದಿ ಪಡಿಸಲಾಗಿದೆ.

English summary
Karnataka Government on Saturday allowed the private engineering colleges for 10% fee hike. Higher Education Minister GT Deve Gowda along with other officials and private college associations chaired the meeting and announced 10 percent fee hike in private engineering colleges.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X