ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ ಸರ್ಕಾರಿ ನೌಕರರಿಗೆ ಕೊನೆಗೂ ಡಿಎ ಹೆಚ್ಚಳ

By Srinath
|
Google Oneindia Kannada News

govt-employees-get-6-percent-annual-dearness-allowance
ಬೆಂಗಳೂರು, ಏಪ್ರಿಲ್ 9: ಚುನಾವಣೆ ಸಂದರ್ಭದಲ್ಲಿ ರಾಜ್ಯ ಸರಕಾರವು ತನ್ನ ನೌಕರರಿಗೆ ಶೇ. 6ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ಮೂರು ತಿಂಗಳ ಹಿಂದಿನ ಸಂಬಳಕ್ಕೆ ಅನ್ವಯವಾಗುವಂತೆ ಮೂಲ ವೇತನದಲ್ಲಿ ಶೇ. 6ರಷ್ಟು ಹೆಚ್ಚು dearness allowanace ಸಂದಾಯವಾಗಲಿದೆ.

ರಾಜ್ಯ ಸರಕಾರ ಪರಿಷ್ಕೃತ ವೇತನ ಶ್ರೇಣಿಗೆ ಅನುಗುಣವಾಗಿ 2014ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಶೇ. 6ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಿದೆ. ತುಟ್ಟಿ ಭತ್ಯೆಯನ್ನು ನಗದು ರೂಪದಲ್ಲಿ ನೀಡಲು ಸರಕಾರ ತೀರ್ಮಾನಿಸಿದ್ದು, ಈ ಸಂಬಂಧ ಮಂಗಳವಾರ ಆದೇಶ ಹೊರಡಿಸಿದೆ.

ಸರಕಾರಿ, ಜಿಲ್ಲಾ ಪಂಚಾಯತ್, ಅನುದಾನಿತ ಶಿಕ್ಷಣ ಸಂಸ್ಥೆಗಳು, ಯುಜಿಸಿ ವೇತನ ಪಡೆಯುವವರು, ನಿವೃತ್ತ ನೌಕರರು, ಕುಟುಂಬ ಪಿಂಚಣಿ ಪಡೆಯುತ್ತಿರುವವರಿಗೆ ತುಟ್ಟಿ ಭತ್ಯೆ ಹೆಚ್ಚಳ ಸಂದಾಯವಾಗಲಿದೆ.

ಕೇಂದ್ರ ಸರಕಾರ ತುಟ್ಟಿಭತ್ಯೆ ದರವನ್ನು ಶೇ.10ರಷ್ಟು ಹೆಚ್ಚಿಸಿತ್ತು. ರಾಜ್ಯದಲ್ಲೂ ಇದೇ ಪ್ರಮಾಣದಲ್ಲಿ ತುಟ್ಟಿ ಭತ್ಯೆ ನೀಡಬೇಕೆಂಬ ಬೇಡಿಕೆಯನ್ನು ಸರಕಾರಿ ನೌಕರರ ಸಂಘ ಮುಂದಿಟ್ಟಿತ್ತು. ಆ ಬೇಡಿಕೆಯನ್ನು ಸರಕಾರ ಒಪ್ಪಿಲ್ಲ. ಸರಕಾರದ ಈ ಆದೇಶದಿಂದ ನೌಕರರಿಗೆ ಸಂತೋಷವಾಗಿಲ್ಲ ಎಂದು ಸರಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಮಹದೇವಯ್ಯ ಮಠಪತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಅವರು ಶೇ. 6ರಷ್ಟು ಮಾತ್ರ ಹೆಚ್ಚಿಸಲು ಅನುಮತಿ ನೀಡುವಂತೆ ಕಳೆದ ಶನಿವಾರ ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದರು. ಆಯೋಗ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಏ. 8ರಂದು ಸರಕಾರದ ಅಧಿಕೃತ ಆದೇಶ ಹೊರಬಿದ್ದಿದೆ.

English summary
Lok Sabha Election 2014: The Karnataka state government on Tuesday (April 8) announced increase in dearness allowance (DA) for its employees and pensioners by six per cent with effect from Janualry 1, 2014, an official release said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X