ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜಾಪುರ : ಅಕ್ಷತಾ ಕುಟುಂಬಕ್ಕೆ 2 ಲಕ್ಷ ಪರಿಹಾರ

|
Google Oneindia Kannada News

ಬಿಜಾಪುರ, ಜೂ. 24 : ಬಿಜಾಪುರ ಜಿಲ್ಲೆಯ ನಾಗಾಠಾಣಾ ಗ್ರಾಮದಲ್ಲಿ ಕೊಳೆವೆ ಬಾವಿಗೆ ಬಿದ್ದು ಮೃತಪಟ್ಟ ನಾಲ್ಕು ವರ್ಷದ ಬಾಲಕಿ ಅಕ್ಷತಾ ಕುಟುಂಬಕ್ಕೆ ರಾಜ್ಯ ಸರ್ಕಾರ ಎರಡು ಲಕ್ಷ ರೂ.ಪರಿಹಾರ ಘೋಷಣೆ ಮಾಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್‌ ವೈಯಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರ ನೀಡಿದ್ದಾರೆ.

ಸೋಮವಾರ ಸರ್ಕಾರ ಈ ಕುರಿತು ಆದೇಶ ಹೊರಡಿಸಿದ್ದು, ಬಿಜಾಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ತೆರೆದ ಕೊಳವೆಬಾವಿಗೆ ಬಿದ್ದು ಮೃತಪಟ್ಟ 4 ವರ್ಷದ ಬಾಲಕಿ ಅಕ್ಷತಾ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ. [ಅಕ್ಷತಾ ರಕ್ಷಿಸುವ ಕಾರ್ಯ ನಡೆದದ್ದು ಹೇಗೆ?]

Compensation

ಜೂ.17ರಂದು ಸಂಜೆ ನಾಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಕೂಲಿ ಕಾರ್ಮಿಕರಾದ ಹನುಮಂತ ಪಾಟೀಲ್‌ ಹಾಗೂ ಸಾವಿತ್ರಿ ದಂಪತಿಯ ಪುತ್ರಿ ಅಕ್ಷತಾ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಹಟ್ಟಿ ಚಿನ್ನದ ಗಣಿ, ಪುಣೆಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು ರೋಬೋ ಯಂತ್ರ ತಜ್ಞ ಎಂ.ಮಣಿಕಂಠನ್‌ ಅವರು ಸತತ 52 ಗಂಟೆಗಳ ಕಾರ್ಯಾಚರಣೆ ನಡೆಸಿದರೂ ಬಾಲಕಿ ರಕ್ಷಿಸಲು ಸಾಧ್ಯವಾಗಿರಲಿಲ್ಲ.

ಜೂ.19ರಂದು ಬಾಲಕಿ ಮೃತದೇಹವನ್ನು ಕಾರ್ಯಾಚರಣೆ ನಡೆಸುತ್ತಿದ್ದ ಸಿಬ್ಬಂದಿಗಳು ಹೊರ ತೆಗೆದಿದ್ದರು. ಸದ್ಯ ಸರ್ಕಾರ ಅಕ್ಷತಾ ಕುಟುಂಬಕ್ಕೆ 2 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ. ಬಿಜಾಪುರ ಜಿಲ್ಲಾ ಉಸ್ತುವಾರಿ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್‌ ವೈಯಕ್ತಿಕವಾಗಿ ಅಕ್ಷತಾ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡಿದ್ದಾರೆ. [ಮೃತ್ಯಕೂಪದಿಂದ ಬದುಕಿಬರಲಿಲ್ಲ ಅಕ್ಷತಾ]

English summary
Karnataka Government has announced a compensation of Rs 2 lakh to the family of a four-year-old girl Akshatha who died recently when she fell into an open bore-well at Nagathana village of Bijapur district. Bijapur District in-charge Minister M.B.Patil has also announced a compensation of Rs one lakh on his personal behalf.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X