• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಾತಿ ಆಧಾರಿತ ಸಂಘಟನೆ, ಮಠಗಳಿಗೆ ಭೂದಾನ ಭಾಗ್ಯ

By Mahesh
|

ಬೆಂಗಳೂರು, ಡಿಸೆಂಬರ್ 12: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಳೆದ ಮೇ ತಿಂಗಳಿನಲ್ಲಿ ನೀಡಿದ ಮಾರ್ಗದರ್ಶನದಂತೆ ಮಠ ಮಾನ್ಯಗಳು, ಜಾತಿ ಆಧಾರಿತ ಸಂಘಟನೆಗಳಿಗೆ ಭೂದಾನ ಭಾಗ್ಯ ಲಭಿಸಿದೆ.

ವಿಧಾನಸಭೆ ಚುನಾವಣೆಗೂ ಮುನ್ನ ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಕಾಂಗ್ರೆಸ್ಸಿಗೆ ಇದು ದಾಳವಾಗಿ ಬಳಕೆಯಾಗಬಹುದು. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಠಗಳಿಗೆ ಆರ್ಥಿಕ ನೆರವು ಹಾಗೂ ಭೂಮಿ ನೀಡಿದ್ದಾಗ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.ಆದರೆ, ಈಗ ರಾಜ್ಯದ ವಿವಿಧ ಸಮುದಾಯಗಳ 35 ಮಠಗಳು ಹಾಗೂ ಜಾತಿ ಸಂಘಟನೆಗಳಿಗೆ ಭೂದಾನದ ಉಡುಗೊರೆ ಸಿಗುತ್ತಿದೆ.

ಬೆಂಗಳೂರಿನ ಹೊರವಲಯದಲ್ಲಿ ಭೂಮಿ ನೀಡುವ ನಿರ್ಧಾರಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದೆ. ಎಲ್ಲ ಜಾತಿ, ಎಲ್ಲ ವರ್ಗದವರಿಗೆ ಸಾರ್ವಜನಿಕ, ಶೈಕ್ಷಣಿಕ ಉದ್ದೇಶ, ವಸತಿ ನಿಲಯ ಹಾಗೂ ಇತರ ಸಮಾಜಪರ ಕೆಲಸಕ್ಕಾಗಿ ಇದ್ದ ಬೇಡಿಕೆ ಪರಿಗಣಿಸಿ ಒಟ್ಟಾಗಿ ಭೂಮಿ ನೀಡಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದರು.

ಸರ್ಕಾರದಿಂದ ಭೂದಾನ ಪಡೆಯುತ್ತಿರುವ ಮಠ, ಸಂಘ ಸಂಸ್ಥೆಗಳು:

ಆರ್ಯ ಈಡಿಗರ ಸಂಘ- 1 ಎಕರೆ

ಕುರುವೀರ ಶೆಟ್ಟಿ ಕೇಂದ್ರ ಸಂಘ- 1.20 ಎಕರೆ

ರಾಜ್ಯ ಪದ್ಮಶಾಲಿ ಸಂಘ- 1 ಎಕರೆ

ಮಡಿವಾಳ ಸಮಾಜ- 1.20 ಎಕರೆ

ವಾಲ್ಮೀಕಿ ನಾಯಕ ಮಹಾಸಭಾ- 1.20 ಎಕರೆ

ಜ್ಯೋತಿ ಪಣ ಗಾಣಿಗರ ಸಂಘ- 1.20 ಎಕರೆ

ಹಠಯೋಗಿ ಕಾಳಪ್ಪ ಸ್ವಾಮಿಗಳ ಟ್ರಸ್ಟ್- 1 ಎಕರೆ

ವಿಶಾಖ ಎಜುಕೇಷನ್ ಸೋಷಿಯಲ್ ಕಲ್ಚ್ಚಲ್- 1.20 ಎಕರೆ

ದೇವಾಡಿಗರ ಸಂಘ- 1.20 ಎಕರೆ

ಜಗದ್ಗುರು ಅಖಿಲ ಕುಂಚಿಟಿಗ ಮಹಾ ಸಂಸ್ಥಾನ ಮಠ- 1.20 ಎಕರೆ

ರಾಜ್ಯ ದೊಂಬಿ ದಾಸರ ಕ್ಷೇಮಾಭಿವೃದ್ಧಿ ಸಂಘ- 1.20 ಎಕರೆ

ಬೆಂಗಳೂರು ಪೆಂಟಾ ಕೋಸ್ಟಲ್ ಫೆರೋಶಿಪ್- 1.20 ಎಕರೆ

ತಿಗಳರ ಅಗ್ನಿವಂಶ ಕ್ಷತ್ರಿಯ ಸಂಘ- 1 ಎಕರೆ

ಅಖಿಲ ಭಾರತ ವೀರಶೈವ ಮಹಾಸಭಾ- 2 ಎಕರೆ

ಮಲಯಂಕರ ಸಿರಿಯ ಅನನ್ಯಾ ಟ್ರಸ್ಟ್- 1 ಎಕರೆ

ಬಂಜಾರ ಮಹಿಳಾ ಸೇವಾ ಸಮಾಜ- 1 ಎಕರೆ 20 ಗುಂಟೆ

ರೇವಣ ಸಿದ್ದೇಶ್ವರ ವಿದ್ಯಾಪೀಠ ಧಾರವಾಡ- 1 ಎಕರೆ

ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್- 1 ಎಕರೆ

ಆಂಗ್ಲೋ ಇಂಡಿಯನ್ ಅಸೋಸಿಯೇಷನ್- 2 ಎಕರೆ

ರಾಜ್ಯ ಗೊಲ್ಲ- ಯಾದವ ಸಂಘ- 1 ಎಕರೆ

ಅಹಲ್ಯಾ ಬಾಯಿ ಹೋಳ್ಕರ ಮಹಿಳಾ ಸೇವಾಸಂಘ- 1 ಎಕರೆ

ರಾಜ್ಯ ಕೊರಮ ಸೇವಾ ಸಂಘ- 1.20 ಎಕರೆ

ಬೆಂಗಳೂರು ಸೌತ್ ಸೆಂಟರ್- 1 ಎಕರೆ

(ಒನ್ಇಂಡಿಯಾ ಸುದ್ದಿ)

English summary
Karnataka state cabinet on Monday(Dec 11) took decision on allotment of government land to any institution or mutt. Over 35 Mutts and religion institutes granted land as Bhoodana said parliamentary affairs minister TB Jayachandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X