ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸಿಎಂ ಗೋವಿಂದ ಕಾರಜೋಳರ 'ಚಿನ್ನ'ದಂತಹ ತೀರ್ಮಾನ!

|
Google Oneindia Kannada News

ಬೆಂಗಳೂರು, ನವೆಂಬರ್ 25: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಮ್ಮ ತೀರ್ಮಾನದಿಂದಾಗಿ ರಾಜ್ಯದ ಇತರ ರಾಜಕೀಯ ನಾಯಕರಿಗೆ ಮಾದರಿಯಾಗಿದ್ದಾರೆ. ಚಿನ್ನದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸುವುದಾಗಿ ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಗೋವಿಂದ ಕಾರಜೋಳ ಅವರು ಈ ಕುರಿತು ಮಾತನಾಡಿದರು. ತವರು ಗ್ರಾಮದ ಜನರು ಪ್ರೀತಿಯಿಂದ ಸನ್ಮಾನಿಸಿ ನೀಡಿದ ಏಳು ತೊಲ ತೂಕದ ಚಿನ್ನದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸುತ್ತೇನೆ ಎಂದರು.

ಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ , ಬೆಳ್ಳಿಯ ಬೆಲೆ ಕುಸಿತಭಾರತೀಯ ಮಾರುಕಟ್ಟೆಗಳಲ್ಲಿ ಚಿನ್ನ , ಬೆಳ್ಳಿಯ ಬೆಲೆ ಕುಸಿತ

ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಗೋವಿಂದ ಕಾರಜೋಳರಿಗೆ ಚಿನ್ನದ ಕಿರೀಟ ತೊಡಿಸಿ ಸನ್ಮಾನ ಮಾಡಲಾಗಿತ್ತು. "ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸುವೆ. ಮುಖ್ಯಮಂತ್ರಿಗಳು ಅದನ್ನು ಸ್ವೀಕರಿಸಬೇಕು" ಎಂದು ಯಡಿಯೂರಪ್ಪ ಸಮ್ಮುಖದಲ್ಲಿಯೇ ಘೋಷಿಸಿದರು.

ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್ಸಿದ್ದರಾಮಯ್ಯನವರ ಕೈಗಡಿಯಾರದ ಟೈಂ ಲೈನ್

Govid Karajol To Hand Over Golden Crown To Government

"ಜನದಿಂದ ಬಂದ ಸನ್ಮಾನ ಜನರಿಗೆ ಬಳಕೆಯಾಗಬೇಕು ಎಂಬುದು ನನ್ನ ಇಚ್ಛೆ" ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು. ಉಪ ಮುಖ್ಯಮಂತ್ರಿಗಳ ಘೋಷಣೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಗೋಲ್ಡ್‌ ಸ್ಮಗ್ಲಿಂಗ್ ಮಾಡುತ್ತಿದ್ದ ಇಬ್ಬರ ಸೆರೆ , 6 ಕೆ.ಜಿ. ಚಿನ್ನ ಪತ್ತೆಗೋಲ್ಡ್‌ ಸ್ಮಗ್ಲಿಂಗ್ ಮಾಡುತ್ತಿದ್ದ ಇಬ್ಬರ ಸೆರೆ , 6 ಕೆ.ಜಿ. ಚಿನ್ನ ಪತ್ತೆ

ಗೋವಿಂದ ಕಾರಜೋಳ ಅವರ ಜೊತೆ ಮಾಜಿ ಸಚಿವ ಎಂ. ಬಿ. ಪಾಟೀಲ್, ಶಿವಾನಂದ ಪಾಟೀಲ್ ಅವರಿಗೆ ಸಹ ಚಿನ್ನದ ಕಿರೀಟ ತೊಡಿಸಿ ಗ್ರಾಮಸ್ಥರು ಸನ್ಮಾನ ಮಾಡಿದ್ದರು.

Recommended Video

Diego Maradona ಅಗಲಿಕೆಗೆ ಫುಟ್ಬಾಲ್ ಜಗತ್ತು ಮರುಕ | Oneindia Kannada

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ನೇಹಿತರು ಉಡುಗೊರೆ ನೀಡಿದ ವಜ್ರ ಖಚಿತ ಹ್ಯುಬ್ಲೋಟ್ ವಾಚ್‌ ಅನ್ನು ವಿಧಾನಸಭೆ ಅಧಿವೇಶದನದಲ್ಲಿಯೇ ಸರ್ಕಾರಕ್ಕೆ ನೀಡಿದ್ದನ್ನು ನೆನಪು ಮಾಡಿಕೊಳ್ಳಬಹುದು.

English summary
Karnataka deputy chief minister Govinda Karajol decided to handover golden crown to government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X