ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ.22ರಿಂದ 30ರವರೆಗೆ ಜಂಟಿ ಅಧಿವೇಶನ

|
Google Oneindia Kannada News

ಬೆಂಗಳೂರು, ಜ.8 : ಬಜೆಟ್ ಅಧಿವೇಶನಕ್ಕೂ ಮೊದಲು ವಿಧಾನ ಮಂಡಲದ ಜಂಟಿ ಅಧಿವೇಶನ ನಡೆಸಲು ಸರ್ಕಾರ ತೀರ್ಮಾನಿಸಿದೆ. ಜ.22ರಿಂದ 30ರವರೆಗೆ ಅಧಿವೇಶನ ನಡೆಯಲಿದ್ದು, ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ, ಜಂಟಿ ಸದನದ ಕುರಿತು ವಿವರಗಳನ್ನು ನೀಡಿದರು. ಜಂಟಿ ಅಧಿವೇಶನದ ದಿನಾಂಕವನ್ನು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಬೇಕಿತ್ತು. ಆದರೆ, ಸಿಎಂ ದೆಹಲಿಗೆ ತೆರಳುವುದರಿಂದ, ವಿಳಂಬವಾಗತ್ತದೆ ಎಂಬ ಕಾರಣಕ್ಕೆ ಅವರೊಂದಿಗೆ ಚರ್ಚಿಸಿ, ದಿನಾಂಕ ನಿಗದಿಗೊಳಿಸಲಾಗಿದೆ ಎಂದು ಹೇಳಿದರು.

tb jayachandra

ಜ.22ರಿಂದ 30ರವರೆಗೆ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಜಂಟಿ ಅಧಿವೇಶನದ ಮೊದಲ ದಿನವಾದ ಜ.22ರಂದು ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಕಲಾಪಗಳು ನಡೆಯಲಿವೆ ಎಂದು ಸಚಿವ ಟಿ.ಬಿ.ಜಯಚಂದ್ರ ಮಾಹಿತಿ ನೀಡಿದರು.

ಫೆಬ್ರವರಿಯಲ್ಲಿ ಬಜೆಟ್‌ ಅಧಿವೇಶನ : ಬಜೆಟ್‌ ಅಧಿವೇಶನವನ್ನು ಒಂದು ತಿಂಗಳು ನಡೆಸಬೇಕಿದೆ. ಆದರೆ, ಲೋಕಸಭೆ ಚುನಾವಣೆಗೆ ಮಾರ್ಚ್‌ ಮೊದಲ ವಾರ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆಯಿದೆ. ಆದ್ದರಿಂದ ಜಂಟಿ ಅಧಿವೇಶನವನ್ನು ಜನವರಿಯಲ್ಲಿ ನಡೆಸಿ ಫೆಬ್ರವರಿ 2ನೇ ವಾರದಲ್ಲಿ ಬಜೆಟ್‌ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ ಎಂದ ಹೇಳಿದರು.

ಗೋಡೆ ಒಡೆಯುವುದು ಸಂಸ್ಕೃತಿ ಅಲ್ಲ : ಸಚಿವರು ತಮ್ಮ ಕಚೇರಿ ವಿಸ್ತರಣೆಗಾಗಿ ವಿಧಾನಸೌಧದಲ್ಲಿ ಗೋಡೆ ಒಡೆಯುವುದು ಒಳ್ಳೆಯ ಸಂಸ್ಕೃತಿ ಅಲ್ಲ. ಸಚಿವರ ಈ ತೀರ್ಮಾನ ಸರಿಯಿಲ್ಲ. ವಿಧಾನಸೌಧದಲ್ಲಿ ಈ ರೀತಿ ಗೋಡೆ ಕೆಡಹುವುದು ಗಂಭೀರ ವಿಚಾರ. ಆದ್ದರಿಂದ, ಸ್ಪೀಕರ್‌ ಅಧ್ಯಕ್ಷತೆಯಲ್ಲಿರುವ ವಿಶೇಷ ಮಂಡಳಿಯು ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಟಿ.ಬಿ.ಜಯಚಂದ್ರ ತಿಳಿಸಿದರು. [ವಿಧಾನಸೌಧದ ಗೋಡೆ ಒಡೆದ ಸಚಿವ ಆಂಜನೇಯ]

English summary
Karnataka Governor H.R.Bhardwaj will address a joint session of the State legislature on January 22 said T.B.Jayachandra, Minister for Law, Justice and Human Rights. The joint session will held form January 22 to 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X