ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಲಾ, ರಾಜಭವನಕ್ಕೆ 4 ಕೋಟಿ ಖರ್ಚು ಮಾಡಿದ ವಾಲಾ!

|
Google Oneindia Kannada News

ಬೆಂಗಳೂರು, ಜೂ. 03 : ಕಚೇರಿ ನವೀಕರಣಕ್ಕೆ 40 ಲಕ್ಷ, ಆಪ್ತ ಕಾರ್ಯದರ್ಶಿ ಕಚೇರಿ ನವೀಕರಣಕ್ಕೆ 30 ಲಕ್ಷ, ನಿವಾಸ ರಿಪೇರಿಗೆ 20 ಲಕ್ಷ, ಅಡುಗೆ ಮನೆ, ಬಾತ್ ರೂಮ್ ರಿಪೇರಿಗೆ 50 ಲಕ್ಷ. ಹೀಗೆ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರು ರಾಜ್ಯಕ್ಕೆ ಬಂದ 9 ತಿಂಗಳಿನಲ್ಲಿ ರಾಜಭವನದ ರಿಪೇರಿಗೆ 4 ಕೋಟಿ ರೂ. ಖರ್ಚು ಮಾಡಿದ್ದಾರೆ.

ಪಬ್ಲಿಕ್ ಟಿವಿ ರಾಜ್ಯಪಾಲ ವಜುಭಾಯಿ ವಾಲಾ ಅವರ ರಾಜಭವನದ ರಿಪೇರಿ ಖರ್ಚಿನ ಮಾಹಿತಿಯನ್ನು ದಾಖಲೆಗಳ ಸಮೇತ ಪ್ರಸಾರ ಮಾಡಿದೆ. ಸಾರ್ವಜನಿಕರ ಹಣವನ್ನು ನವೀಕರಣಕ್ಕೆ ಹೇಗೆ ಖರ್ಚು ಮಾಡಲಾಗಿದೆ ಎಂಬ ಮಾಹಿತಿಯನ್ನು ವಿವಿರವಾಗಿ ನೀಡಿದೆ.

vajubhai vala

ಗುಜರಾತ್ ಮೂಲದ ವಜುಭಾಯಿ ವಾಲಾ ಅವರು 2014ರ ಸೆಪ್ಟೆಂಬರ್ 1ರಂದು ಕರ್ನಾಟಕದ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇವಲ 9 ತಿಂಗಳಿನಲ್ಲಿ ಅವರು 4 ಕೋಟಿ ರೂ. ಹಣವನ್ನು ರಾಜಭವನದ ನವೀಕರಣಕ್ಕೆ ಖರ್ಚು ಮಾಡಿದ್ದಾರೆ. [ರಾಷ್ಟ್ರಗೀತೆ ವೇಳೆ ವೇದಿಕೆ ಬಿಟ್ಟಿಳಿದ ರಾಜ್ಯಪಾಲರು]

ಸರ್ಕಾರದ ಎಲ್ಲಾ ನಿರ್ಧಾರಗಳಿಗೆ ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲರೇ ಅಂತಿಮ ಅಂಕಿತ ಹಾಕುವುದರಿಂದ ಅವರು ಕೇಳಿದ್ದಕ್ಕೆಲ್ಲಾ ಸರ್ಕಾರ ಹಣ ಬಿಡುಗಡೆ ಮಾಡಿದೆ. ರಾಜ್ಯಪಾಲರ ವಿಮಾನ ಹಾರಾಟದ ಖರ್ಚು ಸಹ ಹೆಚ್ಚಾಗೇ ಇದ್ದು, ಅದನ್ನು ಪಬ್ಲಿಕ್ ಟಿವಿ ಬಹಿರಂಗ ಮಾಡಿದೆ. [ರಾಜ್ಯಪಾಲರು ಹಿಂದಿಯಲ್ಲೇಕೆ ಭಾಷಣ ಮಾಡಬೇಕು?]

ಯಾವುದಕ್ಕೆ ಎಷ್ಟು ವೆಚ್ಚ : ನವೀಕರಣ ಕಾಮಗಾರಿಗೆ 3 ಕೋಟಿ, ವಿದ್ಯುತ್ ಕಾಮಗಾರಿಗೆ 1 ಕೋಟಿ ಸೇರಿ ರಾಜಭವನದ ನವೀಕರಣಕ್ಕೆ ಇದುವರೆಗೂ ಒಟ್ಟು 4 ಕೋಟಿ ರೂ.ವೆಚ್ಚ ಮಾಡಲಾಗಿದೆ.

ಯಾವುದಕ್ಕೆ ಎಷ್ಟು ಖರ್ಚು?

* ರಾಜ್ಯಪಾಲರ ಕಚೇರಿ ನವೀಕರಣಕ್ಕೆ 40 ಲಕ್ಷ
* ರಾಜ್ಯಪಾಲರ ಆಪ್ತಕಾರ್ಯದರ್ಶಿ ಕಚೇರಿ ನವೀಕರಣಕ್ಕೆ 30 ಲಕ್ಷ
* ರಾಜಭವನದ ನಿವಾಸ ರಿಪೇರಿಗೆ 20 ಲಕ್ಷ
* ಅಡುಗೆ ಮನೆ, ಬಾತ್ ರೂಮ್ ರಿಪೇರಿಗೆ 50 ಲಕ್ಷ [ಮಾಹಿತಿ : ಪಬ್ಲಿಕ್ ಟಿವಿ]

English summary
Karnataka Governor Vajubhai Rudabhai Vala has spend 4 core for renovation work for Raj Bhavan building. Vajubhai Vala took charge as governor on September 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X