ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸಮತ ಯಾಚನೆಗೆ ಸಿಎಂಗೆ ಹೊಸ ಡೆಡ್‌ಲೈನ್ ನೀಡಿದ ರಾಜ್ಯಪಾಲರು

|
Google Oneindia Kannada News

Recommended Video

Karnataka Crisis : ಎಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಹೊಸ ಡೆಡ್‌ಲೈನ್ ನೀಡಿದ ರಾಜ್ಯಪಾಲರು

ಬೆಂಗಳೂರು, ಜುಲೈ 19: ವಿಶ್ವಾಸಮತ ಯಾಚನೆಗೆ ಸಿಎಂ ಅವರಿಗೆ ನೀಡಿದ್ದ 1: 30 ರ ಗಡುವು ಮೀರಿದ್ದರೂ ವಿಶ್ವಾಸಮತ ಯಾಚನೆ ಮಾಡಿಲ್ಲವಾದ್ದರಿಂದ ಈಗ ಮತ್ತೊಮ್ಮೆ ಹೊಸ ಡೆಡ್‌ಲೈನ್ ಅನ್ನು ರಾಜ್ಯಪಾಲರು ಸಿಎಂ ಅವರಿಗೆ ನೀಡಿದ್ದಾರೆ.

Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

ಮರುಜ್ಞಾಪನಾ ಪತ್ರವನ್ನು ಸಿಎಂ ಅವರಿಗೆ ರವಾನಿಸಿರುವ ರಾಜ್ಯಪಾಲರು ಸಂಜೆ 6 ಗಂಟೆ ಒಳಗೆ ಬಹುಮತವನ್ನು ಸಾಬೀತು ಮಾಡಿ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ನಿರ್ದೇಶನ ನೀಡಿದ್ದಾರೆ.

ವಿಶ್ವಾಸಮತ LIVE: ಸಂಜೆ 6 ಗಂಟೆ ಒಳಗೆ ವಿಶ್ವಾಸಮತ ಸಾಬೀತು ಮಾಡಲು ರಾಜ್ಯಪಾಲರ ಸೂಚನೆವಿಶ್ವಾಸಮತ LIVE: ಸಂಜೆ 6 ಗಂಟೆ ಒಳಗೆ ವಿಶ್ವಾಸಮತ ಸಾಬೀತು ಮಾಡಲು ರಾಜ್ಯಪಾಲರ ಸೂಚನೆ

ನಿನ್ನೆ ಮಧ್ಯಾಹ್ನ ಸಿಎಂ ಅವರಿಗೆ ಪತ್ರ ಬರೆದಿದ್ದ ರಾಜ್ಯಪಾಲರು, 15 ಜನ ಶಾಸಕರು ನನಗೆ ರಾಜೀನಾಮೆ ಪತ್ರಿ ನೀಡಿ ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ, ನಿಮಗೆ ಬಹುಮತ ಇಲ್ಲವೆಂಬ ಅನುಮಾನವಿದೆ ಹಾಗಾಗಿ ಶುಕ್ರವಾರ ಮಧ್ಯಾಹ್ನ 1:30 ರ ಒಳಗಾಗಿ ವಿಶ್ವಾಸಮತ ಯಾಚನೆ ಮಾಡಿ ಎಂದು ಸೂಚಿಸಿದ್ದರು.

Governor instructed chief minister to prove majority before today evening 6

ಆದರೆ ಇಂದು ಸದನದಲ್ಲಿ ಈ ವಿಷಯ ಚರ್ಚೆಯಾಗಿ, ರಾಜ್ಯಪಾಲರು ಹೀಗೆ ಸದನದ ಕಾರ್ಯಕಲಾಪದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರವಿಲ್ಲವೆಂದು ಚರ್ಚೆ ಮಂಡಿಸಿದರು. ಇದರ ಪರ ವಿರೋಧ ಚರ್ಚೆಯೂ ಸಾಕಷ್ಟು ನಡೆಯಿತು, ಆದರೆ ರಾಜ್ಯಪಾಲರು ನೀಡಿದ್ದ ಸಮಯದ ಒಳಗೆ ವಿಶ್ವಾಸಮತ ಯಾಚನೆ ಆಗಲಿಲ್ಲ.

ರಾಜ್ಯಪಾಲರಿಗೆ ನನ್ನ ನಮನಗಳು, 1.30ಕ್ಕೆ 'trust vote' ಅಸಾಧ್ಯ: ಎಚ್ಡಿಕೆರಾಜ್ಯಪಾಲರಿಗೆ ನನ್ನ ನಮನಗಳು, 1.30ಕ್ಕೆ 'trust vote' ಅಸಾಧ್ಯ: ಎಚ್ಡಿಕೆ

ತಮ್ಮ ನಿರ್ದೇಶನವನ್ನು ಪಾಲಿಸಿಲ್ಲವಾದ್ದರಿಂದ ರಾಜ್ಯಪಾಲರು ಮತ್ತೆ ಮರುಜ್ಞಾಪನಾ ಪತ್ರವನ್ನು ರವಾನಿಸಿದ್ದಾರೆ. ಹೊಸ ಸೂಚನೆಯಂತೆ ಸಿಎಂ ಅವರು ಇಂದು ಸಂಜೆ 6 ಗಂಟೆ ಒಳಗೆ ವಿಶ್ವಾಸಮತ ಯಾಚನೆ ಮಾಡಬೇಕಿದೆ.

ರಾಜ್ಯಪಾಲರ ಪರಿಷ್ಕೃತ ಸೂಚನೆಯನ್ನು ಸಿಎಂ ಅವರು ಪಾಲಿಸುತ್ತಾರಾ? ಅಥವಾ ಮತ್ತೆ ನಿರ್ದೇಶನವನ್ನು ಉಲ್ಲಂಘಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

English summary
Governor Vajubhai vala instructed chief minister Kumaraswamy to prove vote of trust before today evening 6. Governor yesterday also instructed to prove majority before afternoon but CM did not.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X