ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದ ಹಣ ಬಳಕೆಯಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ನವೆಂಬರ್ 15: ಮಂಡ್ಯ ಜಿಲ್ಲೆಯ ಕೃಷ್ಣ ರಾಜ ಸಾಗರ (ಕೆಆರ್ಎಸ್) ಜಲಾಶಯದ ಅಭಿವೃದ್ಧಿ ಯೋಜನೆಯ ಭಾಗವಾಗಿ ನಿರ್ಮಾಣ ಮಾಡಲಿರುವ ಕಾವೇರಿ ತಾಯಿಯ ಪ್ರತಿಮೆ ಗೋಪುರದಂತೆ ಇರಲಿದೆ ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕೆಆರ್‌ಎಸ್‌ನಲ್ಲಿ 350 ಅಡಿ ಎತ್ತರದ ಕಾವೇರಿ ತಾಯಿ ಪ್ರತಿಮೆ ನಿರ್ಮಾಣಕೆಆರ್‌ಎಸ್‌ನಲ್ಲಿ 350 ಅಡಿ ಎತ್ತರದ ಕಾವೇರಿ ತಾಯಿ ಪ್ರತಿಮೆ ನಿರ್ಮಾಣ

ಕೆಆರ್‌ಎಸ್‌ನಲ್ಲಿ ಸರ್ಕಾರಕ್ಕೇ ಸೇರಿದ ಜಮೀನಿದೆ. ಅದರಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರನ್ನು ಆಹ್ವಾನಿಸುತ್ತೇವೆ. ಅದರಲ್ಲಿ ಸರ್ಕಾರದ ಹಣವನ್ನು ಬಳಸಿಕೊಳ್ಳುವುದಿಲ್ಲ. ಸಂಪೂರ್ಣವಾಗಿ ಪ್ರತಿಮೆ ಎಂದು ಹೇಳಲು ಸಾಧ್ಯವಿಲ್ಲ. ಅದು ಗೋಪುರದಂತೆ ಇರಲಿದೆ ಎಂದು ಅವರು ತಿಳಿಸಿದ್ದಾರೆ.

ಕೆಆರ್‌ಎಸ್ ಸುತ್ತಮುತ್ತ 20 ಕಿ.ಮೀ.ಯಲ್ಲಿ ಗಣಿಗಾರಿಕೆ ನಿಷೇಧ ಕೆಆರ್‌ಎಸ್ ಸುತ್ತಮುತ್ತ 20 ಕಿ.ಮೀ.ಯಲ್ಲಿ ಗಣಿಗಾರಿಕೆ ನಿಷೇಧ

government will not use its money to cauvery statue dk shivakumar krs

ಜಲಾಶಯದ ಪಕ್ಕದಲ್ಲಿ ಹೊಸದೊಂದು ಕೆರೆಯನ್ನು ನಿರ್ಮಿಸಲಾಗುವುದು. ಅದರ ವಿನ್ಯಾಸ ಇನ್ನೂ ಮಾಡಬೇಕಿದೆ. ಮ್ಯೂಸಿಯಂ ಸ್ಥಾಪಿಸಿ ಅದರ ಮೇಲ್ಭಾಗದಲ್ಲಿ ಮತ್ತು ಗಾಜಿನ ಗೋಪುರಗಳ ನಡುವೆ ಪ್ರತಿಮೆಯ ಗೋಪುರವನ್ನು ಅಳವಡಿಸಲಾಗುವುದು.

ಈ ಪ್ರತಿಮೆ ಕೆಆರ್ಎಸ್ ಜಲಾಶಯಕ್ಕಿಂತಲೂ ಎತ್ತರ ಇರಲಿದೆ. ಭೂಮಿಯನ್ನು ಹೊರತುಪಡಿಸಿ ಬೇರೇನನ್ನೂ ಸರ್ಕಾರ ಹೂಡಿಕೆ ಮಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದರು.

ತಮಿಳುನಾಡಿಗೆ ಕರ್ನಾಟಕ ಕೊಟ್ಟ ಕಾವೇರಿ ನೀರೆಷ್ಟು? ತಮಿಳುನಾಡಿಗೆ ಕರ್ನಾಟಕ ಕೊಟ್ಟ ಕಾವೇರಿ ನೀರೆಷ್ಟು?

ಈ ಪ್ರದೇಶದಲ್ಲಿ ಒಂದು ಒಳಾಂಗಣ ಕ್ರೀಡಾಂಗಣ, ಬ್ಯಾಂಡ್‌ಸ್ಟ್ಯಾಂಡ್, ಐತಿಹಾಸಿಕ ಸ್ಥಳಗಳ ನಕಲು ಸೃಷ್ಟಿ ಇರಲಿವೆ. ಒಟ್ಟಾರೆ ಯೋಜನೆಯ ವೆಚ್ಚ ಸುಮಾರು 1200 ಕೋಟಿ ರೂ.

English summary
Karnataka government will not use its money to build Cauvery statue. Except land, govt is not making any investments. We will be inviting investors to invest in it, Minister DK Shivakumar said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X