ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಠಗಳಿಗೆ ನಾಳೆಯಿಂದಲೇ ಅಕ್ಕಿ-ಗೋಧಿ ಸರಬರಾಜು: ಯಡಿಯೂರಪ್ಪ

|
Google Oneindia Kannada News

ಬೆಂಗಳೂರು, ಫೆಬ್ರವರಿ 04: ಸಿದ್ದಗಂಗಾ ಮಠ ಸೇರಿ ರಾಜ್ಯದ 454 ವಿವಿಧ ಸಂಸ್ಥೆಗಳು ಮಠಗಳಿಗೆ ಅಕ್ಕಿ-ಗೋಧಿ ಸರಬರಾಜು ನಿಲ್ಲಿಸಿರುವ ಕ್ರಮ ಬಹಿರಂಗವಾಗುತ್ತಿದ್ದಂತೆ ಸಿಎಂ ಯಡಿಯೂರಪ್ಪ ಅವರು ಎಚ್ಚೆತ್ತುಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಯಡಿಯೂರಪ್ಪ, 'ನಾಳೆಯಿಂದಲೇ ಮಠಗಳಿಗೆ ತಡೆಹಿಡಿಯಲಾಗಿದ್ದ ಅಕ್ಕಿ-ಗೋಧಿ ಸರಬರಾಜು ಮುಂದುವರೆಸಲಾಗುವುದು' ಎಂದಿದ್ದಾರೆ.

ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, 'ಎಷ್ಟೇ ಆರ್ಥಿಕವಾಗಿ ಭಾರವಾದರೂ ಸಹ ಮಠಗಳಿಗೆ ನೀಡಲಾಗುತ್ತಿದ್ದ ಅಕ್ಕಿ-ಗೋಧಿಯನ್ನು ಕಡಿತಗೊಳಿಸುವುದಿಲ್ಲ' ಎಂದು ಭರವಸೆ ನೀಡಿದರು.

Government Will Not Stop Supplying Rice-Wheat To Mutts: Yediyurappa

'ಈ ಬಗ್ಗೆ ಸಚಿವ ಸಂಪುಟದಲ್ಲಿಯೂ ಚರ್ಚೆ ಮಾಡಲಾಗಿದೆ. ಬಿಪಿಎಲ್‌ ಗಳಿಗೆ ಅಕ್ಕಿ ಪ್ರಮಾಣ ಕಡಿಮೆ ಮಾಡಿರುವ ಬಗ್ಗೆ ಈಗ ಚರ್ಚೆ ಬೇಡ' ಎಂದೂ ಸಹ ಅವರು ಹೇಳಿದರು.

ಮಠಗಳಿಗೆ ತಡೆ ಹಿಡಿಯಲಾಗಿದ್ದ ಅಕ್ಕಿ-ಗೋಧಿ ಸರಬರಾಜು ಮಾಡಲಾಗುತ್ತಿದೆ. ಆದರೆ ವಿವಿಧ ಸೇವಾ ಸಂಘ-ಸಂಸ್ಥೆಗಳಿಗೆ ತಡೆ ಹಿಡಿಯಲಾಗಿದ್ದ ಧಾನ್ಯವನ್ನು ಸರಬರಾಜು ಮಾಡಲಾಗುತ್ತದೆಯೇ ಎಂಬ ಬಗ್ಗೆ ಸಿಎಂ ಮಾಹಿತಿ ನೀಡಿಲ್ಲ.

ಮಠಗಳು ಸೇರಿದಂತೆ ಅನಾಥಾಶ್ರಮ, ವೃದ್ಧಾಶ್ರಮ, ಬುದ್ದಿಮಾಂದ್ಯರ ಚಿಕಿತ್ಸಾ ಕೇಂದ್ರ, ಭಿಕ್ಷುಕರ ಪುನರ್ವಸತಿ ಕೇಂದ್ರ ಸೇರಿದಂತೆ ಹಲವು ಸೇವಾ ಸಂಘಗಳಿಗೂ ಅಕ್ಕಿ-ಗೋಧಿ ಸರಬರಾಜು ನಿಲ್ಲಿಸಲಾಗಿತ್ತು. ಮಠಗಳಿಗೆ ನಾಳೆಯಿಂದಲೇ ಸರಬರಾಜು ಪುನರ್ ಪ್ರಾರಂಭಿಸುವುದಾಗಿ ಸಿಎಂ ಹೇಳಿದ್ದಾರೆ. ಆದರೆ ಸಂಘ-ಸಂಸ್ಥೆಗಳ ಗತಿಯೇನು ಎಂಬುದು ಪ್ರಶ್ನೆಯಾಗಿದೆ.

English summary
CM Yediyurappa said government will not stop supplying of rice and wheat supply to Mutts. government had stopped supply of rice and wheat to 454 organizations including some mutts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X