ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ಕಂಪನಿ VS ವರ್ಕ್ ಫ್ರಂ ಹೋಂ: ಅಶ್ವತ್ಥ ನಾರಾಯಣ ಮಹತ್ವದ ಸೂಚನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 11:ಐಟಿ ಕಂಪನಿಗಳು ಕಚೇರಿಯನ್ನು ಶೀಘ್ರ ತೆರೆಯಬೇಕೆಂದು ಹೇಳುವುದಿಲ್ಲ, ವರ್ಕ್ ಫ್ರಂ ಹೋಂ ವ್ಯವಸ್ಥೆಯನ್ನೂ ಇನ್ನೂ ಕೆಲವು ತಿಂಗಳುಗಳ ಕಾಲ ಮುಂದುವರೆಸಿ ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಹೊಸಕೋಟೆಯ ಸ್ವತಂತ್ರ ಶಾಸಕ ಶರತ್ ಬಚ್ಚೇಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಈ ಕೊರೊನಾ ಸಾಂಕ್ರಾಮಿಕ ರೋಗ ಕಡಿಮೆಯಾದ ನಂತರ ಪರಿಸ್ಥಿತಿ ನೋಡಿಕೊಂಡು ಐಟಿ-ಬಿಟಿ ಕಂಪೆನಿಗಳೇ ಕಚೇರಿಗಳನ್ನು ತೆರೆಯಲಿವೆ. ಸದ್ಯದ ಪರಿಸ್ಥಿತಿಯಲ್ಲಿ ಇನ್ನೂ ಕೂಡ ಉದ್ಯೋಗಿಗಳು ಕಚೇರಿಗೆ ಹೋಗಿ ಕೆಲಸ ಮಾಡಬಹುದಾದ ವಾತಾವರಣವಿಲ್ಲ ಎಂದರು.

ಭಾರತದಲ್ಲಿ 29,398 ಮಂದಿ ಕೊರೊನಾ ಸೋಂಕಿತರು ಪತ್ತೆ ಭಾರತದಲ್ಲಿ 29,398 ಮಂದಿ ಕೊರೊನಾ ಸೋಂಕಿತರು ಪತ್ತೆ

ಕಚೇರಿಗಳನ್ನು ತೆರೆಯಿರಿ ಎಂದು ಸದ್ಯದ ಪರಿಸ್ಥಿತಿಯಲ್ಲಿ ಐಟಿ ಕಂಪೆನಿಗಳಿಗೆ ಕಡ್ಡಾಯ ಮಾಡಲು ಸಾಧ್ಯವಿಲ್ಲ, ಅದರ ಬದಲು ಉದ್ಯೋಗಿಗಳು ತಾವಿರುವಲ್ಲಿಂದಲೇ ಅಥವಾ ತಮ್ಮ ತಮ್ಮ ಮನೆಗಳಿಂದ ಕೆಲಸ ಮಾಡುವ ಸೌಲಭ್ಯವನ್ನು ಇನ್ನು ಕೆಲ ತಿಂಗಳುಗಳ ಮಟ್ಟಿಗೆ ಮುಂದೂಡಲಾಗುವುದು ಎಂದರು.

ಕೇಂದ್ರ ಸರ್ಕಾರ ಡಿಸೆಂಬರ್ 31ರವರೆಗೆ ತನ್ನ ಮಾರ್ಗಸೂಚಿಯಲ್ಲಿ ಐಟಿ ಮತ್ತು ಬಿಪಿಒ ಕಂಪೆನಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ಒದಗಿಸಿತ್ತು.

ಬಹುತೇಕ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ

ಬಹುತೇಕ ಐಟಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ

ಇನ್ನೂ ಬಹುತೇಕ ಐಟಿ ಕಂಪೆನಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದು ಇದರಿಂದ ಕಾರ್ಯವೈಖರಿ ಮೇಲೆ, ಕೆಲಸದ ಉತ್ಪನ್ನದ ಮೇಲೆ ಪರಿಣಾಮ ಬೀರುತ್ತಿದೆ, ಹೀಗಾಗಿ ಐಟಿ-ಬಿಟಿ ಕಂಪೆನಿಗಳನ್ನು ಆರಂಭಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಶರತ್ ಬಚ್ಚೇಗೌಡ ಒತ್ತಾಯಿಸಿದರು.

ಐಟಿ ಕಚೇರಿಗಳನ್ನು ತೆರೆದರೆ ಎಲ್ಲಾ ಸೇವೆಗಳು ಸಹಜ ಸ್ಥಿತಿಗೆ

ಐಟಿ ಕಚೇರಿಗಳನ್ನು ತೆರೆದರೆ ಎಲ್ಲಾ ಸೇವೆಗಳು ಸಹಜ ಸ್ಥಿತಿಗೆ

ಅದಕ್ಕೆ ಉತ್ತರಿಸಿದ ಅಶ್ವಥ್ ನಾರಾಯಣ್, ಒಂದು ಸಲ ಕಚೇರಿ ತೆರೆದರೆ ಇತರ ಸೇವೆಗಳು ಸಹ ಮೊದಲಿನ ಸ್ಥಿತಿಗೆ ಬರುತ್ತವೆ, ಆದರೆ ಇನ್ನೂ ಕೊರೋನಾ ಸೋಂಕು ಸಂಪೂರ್ಣವಾಗಿ ಇಳಿಮುಖವಾಗದಿರುವುದರಿಂದ ಮನೆಯಿಂದಲೇ ಕೆಲಸ ಮಾಡುವುದು ಸುರಕ್ಷಿತ ಎಂದರು.

ಮಾರ್ಚ್ ತಿಂಗಳಿಂದ ಐಟಿ ಕಚೇರಿಗಳು ಬಂದ್

ಮಾರ್ಚ್ ತಿಂಗಳಿಂದ ಐಟಿ ಕಚೇರಿಗಳು ಬಂದ್

ಕೊವಿಡ್-19 ಸೋಂಕು ಒಕ್ಕರಿಸಿದ ಮೇಲೆ ಕಳೆದ ಮಾರ್ಚ್ ತಿಂಗಳಿನಿಂದ ಬಹುತೇಕ ಐಟಿ ಕಂಪೆನಿಗಳು ತಮ್ಮ ಕಚೇರಿಗಳನ್ನು ಮುಚ್ಚಿದ್ದು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯವನ್ನು ನೀಡುತ್ತಿವೆ.

Recommended Video

Virushka ದಂಪತಿಗೆ ಇಂದು ಮೂರನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ | Oneindia Kannada
ಐಟಿ ಕಂಪನಿಗಳು ತೆರೆಯದಿದ್ದರೆ ಆಗುವ ಪರಿಣಾಮಗಳು

ಐಟಿ ಕಂಪನಿಗಳು ತೆರೆಯದಿದ್ದರೆ ಆಗುವ ಪರಿಣಾಮಗಳು

ಐಟಿ ಕಂಪೆನಿಗಳು ತೆರೆಯದಿರುವುದರಿಂದ ಉದ್ಯೋಗಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಕ್ಯಾಬ್ ಸಾರಿಗೆಗಳು, ಕ್ಯಾಂಟೀನ್ ಗಳ ಮೂಲಕ ಜೀವನ ನಿರ್ವಹಣೆಗೆ ನಂಬಿಕೊಂಡಿದ್ದವರ ಮೇಲೆ ಪರಿಣಾಮ ಬೀರಿದೆ ಎಂದು ಉಡುಪಿ ಶಾಸಕ ಕೆ ರಘುಪತಿ ಭಟ್ ಕೂಡ ಹೇಳಿದರು.

ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ

English summary
The Karnataka government on Thursday said it will not ask IT companies to open office spaces and that the work from home arrangement that is currently in place may continue for a few more months due to prevailing COVID-19 situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X