ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಂಎ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ: ಎಂಬಿ.ಪಾಟೀಲ್

|
Google Oneindia Kannada News

ಮೈಸೂರು, ಜೂನ್ 17: ಐಎಂಎ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಸಹ ಅವರನ್ನು ಬಿಡುವುದಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಗುಡುಗಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಶಾಸಕರು, ಸಚಿವರು ಯಾರೇ ಐಎಂಎ ಹಗರಣದಲ್ಲಿ ಭಾಗಿಯಾಗಿದ್ದರೂ ಸಹಿತ ಅವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಬಹುಕೋಟಿ ರೂಪಾಯಿ ಐಎಂಎ ಪ್ರಕರಣ ಸಿಬಿಐ ತನಿಖೆಗೆ?ಬಹುಕೋಟಿ ರೂಪಾಯಿ ಐಎಂಎ ಪ್ರಕರಣ ಸಿಬಿಐ ತನಿಖೆಗೆ?

ನಮ್ಮ ಪೊಲೀಸ್ ಇಲಾಖೆಯ ಮೇಲೆ ನನಗೆ ಪೂರ್ಣ ನಂಬಿಕೆ ಇದೆ, ಎಸ್‌ಐಟಿಯು ಈ ಪ್ರಕರಣವನ್ನು ಸೂಕ್ತವಾಗಿ ನಿಭಾಯಿಸಲಿದೆ ಎಂದು ಅವರು ಹೇಳಿದರು.

Government will leave no one behind IMA fraud case: MB Patil

ನಮ್ಮ ಮುಂದೆ ಈಗ ಇರುವುದು ಹಣ ಕಳೆದುಕೊಂಡವರಿಗೆ ಹಣ ಮರಳಿ ಕೊಡಿಸುವ ವಿಚಾರ. ಸಿಬಿಐಗೆ ಪ್ರಕರಣಗಳನ್ನು ಒಪ್ಪಿಸಿ ಅವು ಏನಾಗಿದೆ ಎಂಬುದು ಗೊತ್ತಿದೆ, ಬಿಜೆಪಿಯವರಿಗೆ ಏಕಾ-ಏಕಿ ಸಿಬಿಐ ಮೇಲೆ ಪ್ರೀತಿ ಬಂದುಬಿಟ್ಟಿದೆ ಎಂದು ಅವರು ಹೇಳಿದರು.

ಐಎಂಎ ವಂಚನೆ ಪ್ರಕರಣ : ಎಸ್‌ಐಟಿ ತಂಡದ ಅಧಿಕಾರಿಗಳ ಪಟ್ಟಿಐಎಂಎ ವಂಚನೆ ಪ್ರಕರಣ : ಎಸ್‌ಐಟಿ ತಂಡದ ಅಧಿಕಾರಿಗಳ ಪಟ್ಟಿ

ಚಾರ್ಜ್‌ಶೀಟ್ ಆಗದೆ ಯಾರ್ಯಾರೋ ಹೆಸರನ್ನು ಹೇಳುವುದು ಸರಿಯಲ್ಲ, ವಂಚನೆ ಮಾಡಿದವರ ಆಸ್ತಿ ಜಪ್ತಿ ಮಾಡುವುದು, ಹಣ ಕಳೆದುಕೊಂಡವರಿಗೆ ಹಣ ತಲುಪಿಸುವುದು ನಮ್ಮ ಮುಂದೆ ಇರುವ ಕೆಲಸ ಎಂದು ಎಂ.ಬಿ.ಪಾಟೀಲ್ ಹೇಳಿದರು.

English summary
Home minister MB Patil said that government not leave anyone who is in contact with IMA fraud case. He talked with media people in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X