ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

42 ಐಎಎಸ್ ಅಧಿಕಾರಿಗಳ ವರ್ಗಾವಣೆ: ಯಾವ ಅಧಿಕಾರಿಗೆ ಎಲ್ಲಿಗೆ ವರ್ಗಾವಣೆ? ಸಂಪೂರ್ಣ ಪಟ್ಟಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 13: ರಾಜ್ಯ ಸರ್ಕಾರವು 42 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ತುಷಾರ್ ಗಿರಿನಾಥ್, ವಿ. ರಶ್ಮಿ ಮಹೇಶ್, ಬಗಾದಿ ಗೌತಮ್, ಡಾ. ರವಿ ಎಂಆರ್, ಡಾ. ಕೆ. ಹರೀಶ್ ಕುಮಾರ್ 42 ಐಎಎಸ್ ಅಧಿಕಾರಿಗಳನ್ನು ವಿವಿಧ ಇಲಾಖೆ ಹಾಗೂ ಜಿಲ್ಲೆಗಳಿಗೆ ವರ್ಗಾವಣೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಅವರು ಸುತ್ತೋಲೆ ಹೊರಡಿಸಿದ್ದಾರೆ.

ಕೆಲವು ಅಧಿಕಾರಿಗಳಿಗೆ ಈಗಾಗಲೇ ಹುದ್ದೆ ನಿಗದಿಗೊಳಿಸಲಾಗಿದ್ದು, ಇನ್ನು ಕೆಲವು ಅಧಿಕಾರಿಗಳನ್ನು ತಾತ್ಕಾಲಿಕವಾಗಿ ಬೇರೆ ಇಲಾಖೆಗಳ ಹುದ್ದೆಗಳಿಗೆ ನಿಯೋಜಿಸಲಾಗಿದೆ. ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು, ವಿವಿಧ ಇಲಾಖೆಗಳ ಆಯುಕ್ತರು ಮತ್ತು ಕಾರ್ಯದರ್ಶಿ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಕೊಡಗು ತೊರೆದು ದೀರ್ಘ ರಜೆಗೆ ಡಿಸಿ ಅನ್ನಿಸ್ ಕಣ್ಮಣಿ ಜಾಯ್ ಕೊಡಗು ತೊರೆದು ದೀರ್ಘ ರಜೆಗೆ ಡಿಸಿ ಅನ್ನಿಸ್ ಕಣ್ಮಣಿ ಜಾಯ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ ಜೆ ಮಂಜುನಾಥ್ ಅವರನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ.

ಚಿಕ್ಕಮಗಳೂರು ಡಿಸಿ ಬಗಾದಿ ಗೌತಮ್

ಚಿಕ್ಕಮಗಳೂರು ಡಿಸಿ ಬಗಾದಿ ಗೌತಮ್

* ತುಷಾರ್ ಗಿರಿನಾಥ್: ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ.

* ವಿ. ರಶ್ಮಿ ಮಹೇಶ್: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ.

* ಡಾ. ಜೆ ರವಿಶಂಕರ್: ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿ- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ

* ಡಾ. ಕೆವಿ ತ್ರಿಲೋಕ್ ಚಂದ್ರ: ಉದ್ಯೋಗ ಮತ್ತು ತರಬೇತಿ ಆಯುಕ್ತ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆಗಳ ಆಯುಕ್ತ.

* ಡಾ. ಎಂವಿ ವೆಂಕಟೇಶ್: ಮಂಡ್ಯ ಜಿಲ್ಲಾಧಿಕಾರಿ- ಜಲಾನಯನ ಅಭಿವೃದ್ಧಿ ಆಯುಕ್ತ

* ಡಾ. ಬಗಾದಿ ಗೌತಮ್: ಚಿಕ್ಕಮಗಳೂರು ಜಿಲ್ಲಾಧಿಕಾರಿ- ವಾಣಿಜ್ಯ ತೆರಿಗೆಗಳ (ಜಾರಿ) ಹೆಚ್ಚುವರಿ ಆಯುಕ್ತ.

* ಎಂ. ಕನಗವಲ್ಲಿ: ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕಿ.

* ಡಾ. ವಿ. ರಾಮ್ ಪ್ರಸಾದ್ ಮನೋಹರ್: ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ- ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ.

* ಆರ್. ವೆಂಕಟೇಶ್ ಕುಮಾರ್: ರಾಯಚೂರು ಜಿಲ್ಲಾಧಿಕಾರಿ- ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ಧಿ ಮಂಡಳಿ ಜಂಟಿ ಕಾರ್ಯದರ್ಶಿ.

* ಜಿಎನ್ ಶಿವಮೂರ್ತಿ: ಬೆಂಗಳೂರು ನಗರ ಜಿಲ್ಲಾಧಿಕಾರಿ- ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕ ಆಯುಕ್ತ.

* ಜೆ ಮಂಜುನಾಥ್: ಬಿಬಿಎಂಪಿ ವಿಶೇಷ ಆಯುಕ್ತ- ಬೆಂಗಳೂರು ನಗರ ಜಿಲ್ಲಾಧಿಕಾರಿ.

* ಡಾ. ಬಿಆರ್ ಮಮತಾ: ಸಕಾಲ ಯೋಜನೆ ಹೆಚ್ಚುವರಿ ಯೋಜನಾ ನಿರ್ದೇಶಕಿ- ಕರ್ನಾಟಕ ಸಾರ್ವಜನಿಕ ಭೂ ನಿಗಮದ ವ್ಯವಸ್ಥಾಪಕ ನಿರ್ದೇಶಕಿ.

ಹೆಬ್ಸಿಬಾ ರಾಣಿ ಕೊರ್ಲಪಾಟಿ, ಅಶ್ವಥಿ

ಹೆಬ್ಸಿಬಾ ರಾಣಿ ಕೊರ್ಲಪಾಟಿ, ಅಶ್ವಥಿ

* ಹೆಬ್ಸಿಬಾ ರಾಣಿ ಕೊರ್ಲಪಾಟಿ: ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಜಂಟಿ ವ್ಯವಸ್ಥಾಪಕ ನಿರ್ದೇಶಕಿ.

* ಡಾ. ರಾಕೇಶ್ ಕುಮಾರ್: ತುಮಕೂರು ಜಿಲ್ಲಾಧಿಕಾರಿ- ಪ್ರವಾಸೋದ್ಯಮ ನಿರ್ದೇಶಕ.

* ಡಾ. ಸೆಲ್ವಮಣಿ: ದಕ್ಷಿಣ ಕನ್ನಡ ಜಿಲ್ಲೆ ಜಿಲ್ಲಾ ಪಂಚಾಯತ್ ಸಿಇಒ- ಕೋಲಾರ ಜಿಲ್ಲಾಧಿಕಾರಿ.

* ಅಶ್ವಥಿ ಎಸ್: ಮಂಡ್ಯ ಜಿಲ್ಲಾಧಿಕಾರಿ

* ಮುಲ್ಲೈ ಮುಹಿಲನ್: ಡಿಪಿಎಆರ್ ಉಪ ಕಾರ್ಯದರ್ಶಿ- ಉತ್ತರ ಕನ್ನಡ, ಕಾರವಾರ ಜಿಲ್ಲಾಧಿಕಾರಿ

* ವೆಂಕಟ ರಾಜು: ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ- ರಾಯಚೂರು ಜಿಲ್ಲಾಧಿಕಾರಿ.

* ಗುರುದತ್ತ ಹೆಗ್ಡೆ: ಮೈಸೂರು ನಗರ ಪಾಲಿಕೆ ಆಯುಕ್ತ- ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ.

* ಲಕ್ಷ್ಮಿಕಾಂತ್ ರೆಡ್ಡಿ: ವಿಜಯಪುರ ಜಿಲ್ಲಾ ಪಂಚಾಯತ್ ಸಿಇಒ- ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ.

* ಡಾ. ಆನಂದ್ ಕೆ: ಗದಗ ಜಿಲ್ಲಾಪಂಚಾಯತ್ ಸಿಇಒ- ಡಿಪಿಎಆರ್ ಉಪ ಕಾರ್ಯದರ್ಶಿ.

* ಗ್ಯಾನೇಂದ್ರ ಕುಮಾರ್ ಗಂಗ್ವಾರ್: ಬೀದರ್ ಜಿಲ್ಲಾಪಂಚಾಯತ್ ಸಿಇಒ- ಆಡಳಿತಾತ್ಮಕ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕ-ಮೈಸೂರು.

ಚಾಮರಾಜನಗರ ಡಿಸಿ ರವಿ

ಚಾಮರಾಜನಗರ ಡಿಸಿ ರವಿ

* ಭರತ್ ಎಸ್: ಭಟ್ಕಳ ಉಪ ವಿಭಾಗ ಹಿರಿಯ ಸಹಾಯಕ ಆಯುಕ್ತ- ಗದಗ ಜಿಲ್ಲಾಪಂಚಾಯತ್ ಸಿಇಒ.

* ಡಾ. ಬಿಸಿ ಸತೀಶ: ಜಲಾನಯನ ಅಭಿವೃದ್ಧಿ ಇಲಾಖೆ ಆಯುಕ್ತ- ಚಾಮರಾಜನಗರ ಜಿಲ್ಲಾಧಿಕಾರಿ.

* ಡಾ. ರವಿ- ಚಾಮರಾಜನಗರ ಜಿಲ್ಲಾಧಿಕಾರಿ-ಸಕಾಲ ಯೋಜನೆ ಹೆಚ್ಚುವರಿ ಯೋಜನಾ ನಿರ್ದೇಶಕ.

* ಪಿಎನ್ ರವೀಂದ್ರ: ಬೆಂಗಳೂರು ಗ್ರಾಮೀಣ ಜಿಲ್ಲಾಧಿಕಾರಿ-ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ.

* ಕರೀಗೌಡ: ಕೃಷಿ ಮಾರುಕಟ್ಟೆ ಮಂಡಳಿ ಇಲಾಖೆ- ಆಡಳಿತಾತ್ಮಕ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕ, ಮೈಸೂರು.

* ಡಾ.ಕೆ ಹರೀಶ್ ಕುಮಾರ್: ಉತ್ತರಕನ್ನಡ ಜಿಲ್ಲಾಧಿಕಾರಿ-ಉದ್ಯೋಗ ಮತ್ತು ತರಬೇತಿ ಆಯುಕ್ತ.

* ಕೆಎನ್ ರಮೇಶ್: ಪ್ರವಾಸೋದ್ಯಮ ನಿರ್ದೇಶಕ- ಚಿಕ್ಕಮಗಳೂರು ಜಿಲ್ಲಾಧಿಕಾರಿ.

* ಪಾಟೀಲ್ ಯಲಗೌಡ ಶಿವನಗೌಡ: ಸರ್ವೆ ಒಪ್ಪಂದ ಮತ್ತು ಭೂ ದಾಖಲೆ ಆಯುಕ್ತ- ತುಮಕೂರು ಜಿಲ್ಲಾಧಿಕಾರಿ.

* ಕೆ. ಶ್ರೀನಿವಾಸ್: ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ- ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ.

* ಸಿ ಸತ್ಯಭಾಮಾ: ಕೋಲಾರ ಜಿಲ್ಲಾಧಿಕಾರಿ- ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ.

ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಲಪಾಟಿ ಪರಿಚಯಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಲಪಾಟಿ ಪರಿಚಯ

ಉಳಿದ ವರ್ಗಾವಣೆಗಳು

ಉಳಿದ ವರ್ಗಾವಣೆಗಳು

* ಜೆಹೆರಾ ನಸೀಮ್: ಕಲಬುರಗಿ ವಿಭಾಗೀಯ ಪ್ರಾದೇಶಿಕ ಕಮಿಷನರ್ ಕಚೇರಿಯ ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ- ಬೀದರ್ ಜಿಲ್ಲಾ ಪಂಚಾಯತ್ ಸಿಇಒ.

* ವಿಜಯಮಹಾಂತೇಶ್ ಬಿ. ದಾನಮ್ಮನವರ್: ಮುಖ್ಯಮಂತ್ರಿಗಳ ಒಎಸ್‌ಡಿ-ದಾವಣೆಗೆರೆ ಜಿಲ್ಲಾಪಂಚಾಯತ್ ಸಿಇಒ

* ಗೋವಿಂದ ರೆಡ್ಡಿ: ವಿಜಯಪುರ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ- ವಿಜಯಪುರ ಜಿಲ್ಲಾ ಪಂಚಾಯತ್ ಸಿಇಒ.

* ಭಾರತಿ ಡಿ: ಹಾಸನ ಜಿಲ್ಲಾ ಪಂಚಾಯತ್ ಸಿಇಒ- ಕೃಷಿ ಮಾರುಕಟ್ಟೆ ಮಂಡಳಿ ಇಲಾಖೆ ನಿರ್ದೇಶಕಿ.

* ಪ್ರಭುಲಿಂಗ ಕವಲಿಕಟ್ಟಿ: ಕೆಪಿಸಿಎಲ್ ನಿರ್ದೇಶಕ (ಮಾನವ ಸಂಪನ್ಮೂಲ)- ಹಟ್ಟಿ ಚಿನ್ನದ ಗಣಿ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ.

* ಗಂಗಾಧರ ಸ್ವಾಮಿ ಜಿಎಂ: ಕೆಪಿಟಿಸಿಎಲ್ ನಿರ್ದೇಶಕ- ತುಮಕೂರು ಜಿಲ್ಲಾ ಪಂಚಾಯತ್ ಸಿಇಒ.

* ನಾಗೇಂದ್ರಪ್ರಸಾದ್ ಕೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಖಾಸಗಿ ಕಾರ್ಯದರ್ಶಿ- ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಿಇಒ.

* ಕುಮಾರ: ಚಿಕ್ಕಬಳ್ಳಾಪುರ ಹೆಚ್ಚುವರಿ ಉಪ ಆಯುಕ್ತ- ದಕ್ಷಿಣ ಕನ್ನಡ ಜಿಲ್ಲಾ ಸಿಇಒ.

* ಸಂಗಪ್ಪ: ಪರಿಶಿಷ್ಟ ಪಂಗಡ ಇಲಾಖೆ ನಿರ್ದೇಶಕ- ಬೆಂಗಳೂರು ನಗರ ಜಿಲ್ಲಾ ಸಿಇಒ.

* ಪರಮೇಶ್: ಮೈಸೂರು ಜಿಲ್ಲಾ ಪಂಚಾಯತ್ ಸಿಇಒ, ಆರ್‌ಡಿಪಿಆರ್ ಸೇವೆಗಳು- ಹಾಸನ ಜಿಲ್ಲಾ ಪಂಚಾಯತ್ ಸಿಇಒ.

ಐಎಎಸ್ ಅಧಿಕಾರಿ ಎಸ್. ಎಸ್. ನಕುಲ್ ಪರಿಚಯಐಎಎಸ್ ಅಧಿಕಾರಿ ಎಸ್. ಎಸ್. ನಕುಲ್ ಪರಿಚಯ

English summary
Karnataka government transfers 42 IAS officers today. Here’s the full list in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X