ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದುವರೆದ ವರ್ಗಾವಣೆ ಪರ್ವ: ಹತ್ತು ಐಪಿಎಸ್ ಅಧಿಕಾರಿಗಳು ಎತ್ತಂಗಡಿ

By Manjunatha
|
Google Oneindia Kannada News

ಬೆಂಗಳೂರು, ಆಗಸ್ಟ್‌ 01: ಕುಮಾರಸ್ವಾಮಿ ಅವರ ಅಧಿಕಾರವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು ಇಂದು 10 ಐಪಿಎಸ್‌ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಲಾಗಿದೆ.

ಒಬ್ಬರು ಎಡಿಜಿಪಿ, ಐವರು ಐಜಿಪಿ ಸೇರಿದಂತೆ 10 ಮಂದಿ ಐಪಿಎಸ್ ಅಧಿಕಾರಿಗಳು ವಿವಿಧ ಹುದ್ದೆಗಳಿಗೆ ನೇಮಿಸಿ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

ಖಾತೆ ಹಂಚಿಕೆ ಬೆನ್ನಲ್ಲೇ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆಖಾತೆ ಹಂಚಿಕೆ ಬೆನ್ನಲ್ಲೇ ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಅರಣ್ಯ ಇಲಾಖೆಯಲ್ಲಿದ್ದ ಎಡಿಜಿಪಿ ಮೂರ್ತಿ ಅವರನ್ನು ಮಾನವ ಹಕ್ಕು ಆಯೋಗಕ್ಕೆ ವರ್ಗಾಯಿಸಲಾಗಿದೆ. ಲೋಕಾಯುಕ್ತ ವಿಶೇಷ ತನಿಖಾ ದಳಕ್ಕೆ ಉತ್ತರ ವಲಯದ ಐಜಿಪಿ ಆಗಿದ್ದ ಮುರಗನ್ ಅವರನ್ನು ವರ್ಗ ಮಾಡಲಾಗಿದೆ.

Government transfers 10 IPS officers

ವರ್ಗಾವಣೆಗೊಂಡಿರುವ ಐಪಿಎಸ್‌ ಅಧಿಕಾರಿಗಳ ಪಟ್ಟಿ....

ಹೆಸರು ವರ್ಗಾವಣೆ ಮಾಡಲಾದ ಹುದ್ದೆ
ಎ.ಎಸ್.ಮೂರ್ತಿ ಎಡಿಜಿಪಿ, ರಾಜ್ಯಮಾನವ ಹಕ್ಕು ಆಯೋಗ
ಎಸ್.ಮುರುಗನ್ ಐಜಿಪಿ, ಲೋಕಾಯುಕ್ತ
ಕೆ.ವಿ.ಶರತ್‌ಚಂದ್ರ ಐಜಿಪಿ, ದಕ್ಷಿಣ ವಲಯ, ಮೈಸೂರು
ಮನೀಷ್ ಕರ್ಬಿಕರ್ ಐಜಿಪಿ, ಉತ್ತರ ವಲಯ, ಕಲಬುರಗಿ
ಸೋಮೆಂದು ಮುಖರ್ಜಿ ಐಜಿಪಿ, ಆಂತರಿಕ ಭದ್ರತೆ, ಬೆಂಗಳೂರು
ಎಂ.ಚಂದ್ರಶೇಖರ ಐಜಿಪಿ, ವಿಶೇಷ ತನಿಖಾ ದಳ, ಲೋಕಾಯುಕ್ತ
ಎಚ್‌.ಎಸ್.ರೇವಣ್ಣ ಡಿಐಜಿ, ಪೊಲೀಸ್ ಫೈರ್ ಸರ್ವಿಸ್
ಚಂದ್ರಗುಪ್ತ ಡಿಸಿಪಿ, ಸಂಚಾರಿ, ಪಶ್ಚಿಮ ವಿಭಾಗ
ಡಿ.ದೇವರಾಜ್ ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು
ಟಿ.ಶ್ರೀಧರ್ ಎಸ್‌ಪಿ, ಬೀದರ್‌
English summary
Government transfers 10 IPS officers to different posts. 1 ADGP and 5 IGP's were also been transferred.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X