ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ವರ್ಗಾವಣೆ ತಕ್ಷಣದಿಂದಲೇ ರದ್ದು, ಸರ್ಕಾರದ ನಿರ್ಧಾರಕ್ಕೆ ಸ್ವಾಗತ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 31 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಕರ ಎಲ್ಲಾ ಬಗೆಯ ವರ್ಗಾವಣೆಗಳನ್ನು ತಕ್ಷಣದಿಂದಲೇ ರದ್ದುಗೊಳಿಸಿ, ಮುಂದಿನ ಶೈಕ್ಷಣಿಕ ವರ್ಷದ ಮಾರ್ಚ್ ಅಥವ ಏಪ್ರಿಲ್‌ನಲ್ಲಿ ಆರಂಭಿಸಬೇಕು ಎಂದು ಸೂಚಿಸಿರುವುದನ್ನು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಸ್ವಾಗತಿಸಿದೆ.

ಶಿಕ್ಷಣದ ಮೂಲಭೂತ ಹಕ್ಕುದಾರರಾದ ಮಕ್ಕಳ ಕಲಿಕೆ ಮತ್ತು ಸರ್ಕಾರಿ ಶಾಲೆಗಳ ಬಲವರ್ಧನೆಯ ದೃಷ್ಠಿಯಿಂದ ಸರ್ಕಾರದ ಈ ನಿರ್ಧಾರ ಸೂಕ್ತ ಮತ್ತು ಸಕಾಲಿಕ ಎಂದು ಸಮನ್ವಯ ವೇದಿಕೆ ಅಭಿಪ್ರಾಯಪಟ್ಟಿದೆ.

ಕುಮಾರಸ್ವಾಮಿ ಸರ್ಕಾರಕ್ಕೆ 150 ದಿನ : ಶಿಕ್ಷಣ ಕ್ಷೇತ್ರದಲ್ಲಿ ಆಗಿದ್ದೇನು?ಕುಮಾರಸ್ವಾಮಿ ಸರ್ಕಾರಕ್ಕೆ 150 ದಿನ : ಶಿಕ್ಷಣ ಕ್ಷೇತ್ರದಲ್ಲಿ ಆಗಿದ್ದೇನು?

ಈ ಹಿಂದೆ ಸಮನ್ವಯ ವೇದಿಕೆಯು ವರ್ಗಾವಣೆಗಳನ್ನು ತಕ್ಷಣ ನಿಲ್ಲಿಸುವಂತೆ ಆಗ್ರಹಿಸಿ ಆಗಸ್ಟ್ ತಿಂಗಳ ಕೊನೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿಯನ್ನು ಸಲ್ಲಿಸಿತ್ತು. ಈಗ ಕುಮಾರಸ್ವಾಮಿ ಅವರು ವರ್ಗಾವಣೆಯನ್ನು ರದ್ದುಗೊಳಿಸಿದ್ದಾರೆ.

ಕಲಬುರಗಿಯಲ್ಲಿ ಉರ್ದು ವಿವಿ ಸ್ಥಾಪಿಸುವ ಪ್ರಸ್ತಾವನೆ ತಿರಸ್ಕಾರಕಲಬುರಗಿಯಲ್ಲಿ ಉರ್ದು ವಿವಿ ಸ್ಥಾಪಿಸುವ ಪ್ರಸ್ತಾವನೆ ತಿರಸ್ಕಾರ

ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಕೈಗೊಂಡರೆ ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸಿದಂತಹ ತಪ್ಪು ಸಂದೇಶ ಜನರಿಗೆ ರವಾನೆಯಾಗುತ್ತದೆ. ಆದ್ದರಿಂದ, ವರ್ಗಾವಣೆ ರದ್ದುಗೊಳಿಸಿದ ಕ್ರಮ ಸ್ವಾಗತಾರ್ಹ ಎಂದು ವೇದಿಕೆ ಹೇಳಿದೆ.

ಮತ್ತೊಂದು ಸಾಲ ಮನ್ನಾಕ್ಕೆ ಸಿದ್ಧರಾದ ಎಚ್.ಡಿ.ಕುಮಾರಸ್ವಾಮಿಮತ್ತೊಂದು ಸಾಲ ಮನ್ನಾಕ್ಕೆ ಸಿದ್ಧರಾದ ಎಚ್.ಡಿ.ಕುಮಾರಸ್ವಾಮಿ

ವರ್ಗಾವಣೆಗೆ ಕುರಿತು ಕೆಲವು ಸಲಹೆ

ವರ್ಗಾವಣೆಗೆ ಕುರಿತು ಕೆಲವು ಸಲಹೆ

ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯು ಶಿಕ್ಷಕರ ವರ್ಗಾವಣೆ ಕುರಿತಂತೆ ಧೀರ್ಘಕಾಲಿಕ ಪರಿಹಾರಕ್ಕಾಗಿ ಕೆಲದು ಸಲಹೆಗಳನ್ನು ಸರ್ಕಾರಕ್ಕೆ ನೀಡಿದೆ.

ಸಲಹೆ 1 : ಶಿಕ್ಷಣ ಇಲಾಖೆಯ ಯಾವುದೇ ವರ್ಗಾವಣೆಗಳು ಏಪ್ರಿಲ್ -ಮೇ ತಿಂಗಳಿನಲ್ಲಿ ನಡೆಯಬೇಕು. ಜೂನ್ ತಿಂಗಳಿನಿಂದ ಏಪ್ರಿಲ್‍ವರೆಗೆ ಶೈಕ್ಷಣಿಕ ವರ್ಷದ ಅವಧಿಯಾಗಿದ್ದು ಶಾಲಾ-ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಕಲಿಸುವ-ಬೋಧಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 24ರ ಅನ್ವಯ ಅವರ ಪ್ರಮುಖ ಜವಾಬ್ದಾರಿಯಾಗಿದೆ.

ಸರ್ಕಾರಕ್ಕೆ ಸಲಹೆ - 2

ಸರ್ಕಾರಕ್ಕೆ ಸಲಹೆ - 2

ಶೈಕ್ಷಣಿಕ ವರ್ಷದ ಅವಧಿಯು ಪ್ರಾರಂಭವಾದ ನಂತರ ಅಥವಾ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಮಾಡುವುದರಿಂದ ಕಲಿಕಾ ವ್ಯವಸ್ಥೆ ಸಂಪೂರ್ಣವಾಗಿ ಬುಡಮೇಲಾಗಲಿದ್ದು, ಸರ್ಕಾರಿ ಶಾಲೆಗಳ ಬಗ್ಗೆ ಪಾಲಕರಿಗೆ ಇರುವ ಕನಿಷ್ಠ ನಂಬಿಕೆಯೂ ಕಳೆದು ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ. ಇದರಿಂದ , ಈಗ ಸರ್ಕಾರಿ ಶಾಲೆಯಲ್ಲಿ ಓದಿಸುತ್ತಿರುವ ಪಾಲಕರೂ ಕೂಡ ತಮ್ಮ ಮಕ್ಕಳನ್ನು ಈ ಶಾಲೆಯಿಂದ ಹಿಂತೆಗೆಯುವ ಸಂಭವನೀಯತೆ ಹೆಚ್ಚುತ್ತದೆ.

ಸರ್ಕಾರಕ್ಕೆ ಸಲಹೆ - 3

ಸರ್ಕಾರಕ್ಕೆ ಸಲಹೆ - 3

ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಮಾಡುವುದರಿಂದ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ನಿಗದಿ ಪಡಿಸಿರುವ ಕಿರಿಯ ಪ್ರಾಥಮಿಕ ಶಾಲೆಗಳು 200 ಕಾರ್ಯ ನಿರ್ವಹಣಾ ದಿನಗಳು, ಹಿರಿಯ ಪ್ರಾಥಮಿಕ ಶಾಲೆಗಳು 220 ಕಾರ್ಯ ನಿರ್ವಹಣಾ ದಿನಗಳು, ಕಿರಿಯ ಪ್ರಾಥಮಿಕ ಶಾಲೆಗಳು 800 ಬೋಧನಾ ಅವಧಿಗಳು, ಹಿರಿಯ ಪ್ರಾಥಮಿಕ ಶಾಲೆಗಳು 1000 ಬೋಧನಾ ಅವಧಿಗಳು ಮತ್ತು ಶಿಕ್ಷಕರು ಪ್ರತೀವಾರ ಸಿದ್ಧತಾ ಅವಧಿಯನ್ನೂ ಒಳಗೊಂಡಂತೆ ಕಾರ್ಯನಿರ್ವಹಿಸಬೇಕಾದ 45 ಬೋಧನಾ ಗಂಟೆಗಳಲ್ಲಿ ಎಲ್ಲವೂ ವ್ಯತ್ಯಾಸವಾಗಿ ಸರ್ಕಾರಿ ಶಾಲೆಗಳಲ್ಲಿ ಇಡೀ ಕಲಿಕಾ ವ್ಯವಸ್ಥೆಯೇ ಅಸ್ಥವ್ಯಸ್ಥವಾಗುತ್ತದೆ.

ಸರ್ಕಾರಕ್ಕೆ ಸಲಹೆ - 4

ಸರ್ಕಾರಕ್ಕೆ ಸಲಹೆ - 4

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆ ಮತ್ತು ಸಾಮಾನ್ಯ ಹಾಗು ಕಡ್ಡಾಯ ವರ್ಗಾವಣೆ ಪ್ರಕ್ರಿಯೆಯ ಹಿಂದೆ ದೊಡ್ಡ ಭ್ರಷ್ಟಾಚಾರ ಮತ್ತು ಹಣ ಕೊಡು-ಕೊಳ್ಳುವಿಕೆ ಇರುವುದರಿಂದ, ಶಿಕ್ಷಕರ ನೇಮಕಾತಿಯ ಸಂದರ್ಭದಲ್ಲಿಯೇ ಶಿಕ್ಷಕರನ್ನು ತಾಲ್ಲೂಕು/ಜಿಲ್ಲಾ ಮಟ್ಟದ ವೃಂದವೆಂದು ಪರಿಗಣಿಸಿ ಯಾವುದೇ ವರ್ಗಾವಣೆಗೆ ಅವಕಾಶವಿಲ್ಲದಂತೆ ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಬೇಕು. ಅಗತ್ಯವಿದ್ದಲ್ಲಿ ಮಾತ್ರ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು.

ಸರ್ಕಾರಕ್ಕೆ ಸಲಹೆ - 5

ಸರ್ಕಾರಕ್ಕೆ ಸಲಹೆ - 5

ಶಿಕ್ಷಣ ಇಲಾಖೆಯಲ್ಲಿ ವರ್ಗಾವಣೆಯು ಸೇರಿದಂತೆ ಇಲಾಖೆಯು ಕೈಗೊಳ್ಳುವ ಎಲ್ಲಾ ಕ್ರಮಗಳು ಮಕ್ಕಳ ಗುಣಾತ್ಮಕ ಶಿಕ್ಷಣ, ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರ ನಿರೀಕ್ಷೆಗಳನ್ನು ಮುಟ್ಟುವ ಗುರಿ ಹೊಂದಿರಬೇಕೇ ಹೊರತು ಕೇವಲ ಶಿಕ್ಷಕರ ಹಿತಕಾಯುವ ಕ್ರಮಗಳಾಗಬಾರದು.

ಸರ್ಕಾರಕ್ಕೆ ಸಲಹೆ - 6

ಸರ್ಕಾರಕ್ಕೆ ಸಲಹೆ - 6

ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಲ್ಲದಿದ್ದರೆ ಶಿಕ್ಷಕರು ಅಥವಾ ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಆಸ್ತಿತ್ವವಿರುವುದಿಲ್ಲ ಎಂಬುದನ್ನು ತಿಳಿಯಬೇಕು. ಹೀಗಾಗಿ, ಇಲಾಖೆಯ ಎಲ್ಲಾ ಕ್ರಮಗಳು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಮತ್ತು ಸರ್ಕಾರಿ ಶಾಲೆಗಳನ್ನು ಬಲವರ್ಧಿಸುವ ಕ್ರಮಗಳಾಗಬೇಕು, ಕೇವಲ ಶಿಕ್ಷಕರ ಮತ್ತು ಅಧಿಕಾರಿಗಳ ಹಿತವನ್ನು ಕಾಯುವಂತಾಗಬಾರದು.

English summary
Coordination Forum of Karnataka State School Development and Overseer Committees welcomed the Chief Minister H.D.Kumaraswamy decision of cancelling all teachers transfer with immediate effect.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X