ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 1ರಿಂದ ಸರ್ಕಾರಿ ಶಿಕ್ಷಕರ ಮುಷ್ಕರ, ಬೇಡಿಕೆಗಳೇನೇನು?

|
Google Oneindia Kannada News

ಬೆಂಗಳೂರು, ಜೂನ್ 29: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಶಿಕ್ಷಕರು ಜುಲೈ 1ರಿಂದ ಮುಷ್ಕರ ಆರಂಭಿಸಲಿದ್ದಾರೆ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೂ ಬಡ್ತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ. ಸಿ ಅಂಡ್ ಆರ್ ನಿಯಮಾವಳಿಯಲ್ಲಿ 2017ರ ನಂತರ ನೇಮಕಗೊಂಡ ಪದವೀಧರ ಪ್ರಾಥಮಿಕ ಶಿಕ್ಷಕರು ಮಾತ್ರ 6-8ನೇ ತರಗತಿ ಬೋಧಿಸಬೇಕು.

ಶಿಕ್ಷಕಿಯನ್ನು ಗುಂಡಿಟ್ಟು ತಾನು ಗುಂಡಿಕ್ಕಿಕೊಂಡು ಸತ್ತ ಹಂತಕ ಶಿಕ್ಷಕಿಯನ್ನು ಗುಂಡಿಟ್ಟು ತಾನು ಗುಂಡಿಕ್ಕಿಕೊಂಡು ಸತ್ತ ಹಂತಕ

ಕಳೆದ 14 ವರ್ಷಗಳಿಂದ 6-8ನೇ ತರಗತಿ ವಿಷಯವಾರು ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಕರಿಗೆ ಬಡ್ತಿ ನೀಎಉವ ಬದಲಾಗಿ 6-8ನೇ ರಗತಿಗೆ ಹೊಸದಾಗಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸರ್ಕಾರದ ನೂತನ ನಿಯಮದಿಂದ 10-15 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದವರಿಗೆ ಅನ್ಯಾಯವಾಗಲಿದೆ ಎನ್ನುವುದು ಶಿಕ್ಷಕರ ವಾದವಾಗಿದೆ.

Government teachers strike from July first

2014ಕ್ಕೂ ಹಿಂದೆ ನೇಮಕಗೊಂಡವರು 1-5ನೇ ತರಗತಿಯವರೆಗೆ ಮಾತ್ರ ಬೋಧನೆ ಮಾಡಬೇಕೆಂದು ತಿದ್ದುಪಡಿ ಮಾಡಲಾಗಿದೆ. ಹೀಗಾಗಿ 2014ಕ್ಕಿಂತ ಮೊದಲು ನೇಮಕವಾದ ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಶಾಲಾ ವೃಂದದಿಂದ ಮೂಲ ವೃಂದಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಜುಲೈ 1ರಂದು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.

ರಾಜ್ಯದಲ್ಲಿ ಒಟ್ಟು 82 ಸಾವಿರ ಶಿಕ್ಷಕರು ಪದವಿ ಹಾಗೂ ಉನ್ನತ ಪದವಿಗಳನ್ನು ಹೊಂದಿದ್ದಾರೆ.

English summary
Government teachers are holding statewide strike from July first.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X