ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ ಕ್ಲಾಸ್: ಖಾಸಗಿ ಶಾಲೆಗಳಿಗೆ ಸುರೇಶ್ ಕುಮಾರ್ ಖಡಕ್ ಆದೇಶ!

|
Google Oneindia Kannada News

ಬೆಂಗಳೂರು, ಅ. 28: ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ವಿದ್ಯಾಗಮ ಕಾರ್ಯಕ್ರಮ ಕೊರೊನಾ ವೈರಸ್ ಹರಡುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ವಿದ್ಯಾಗಮ ಕಾರ್ಯಕ್ರಮ ಸ್ಥಗಿತವಾದ ಬಳಿಕ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ತರಗತಿಗಳು ಭರ್ಜರಿಯಾಗಿ ಮುಂದುವರೆದಿವೆ. ಆದರೆ ಅವೈಜ್ಞಾನಿಕವಾಗಿ ನಡೆಯುತ್ತಿರುವ ಆನ್‌ಲೈನ್‌ ತರಗತಿಗಳಿಂದ ಮಕ್ಕಳ ಮಾನಸಿಕ ಹಾಗೂ ದೈಹಿಕ ಆರೋಗ್ಯದ ದೀರ್ಘಕಾಲೀನ ಪರಿಣಾಮಗಳಾಗುತ್ತವೆ ಎಂದು ತಜ್ಞರು ವರದಿಯಲ್ಲಿ ತಿಳಿಸಿದ್ದಾರೆ.

ಹೀಗಾಗಿ ತಜ್ಞರು ನೀಡಿರುವ ಶಿಫಾರಸ್ಸಿನಂತೆ ಮಾತ್ರ ಆನ್‌ಲೈನ್‌ ತರಗತಿಗಳನ್ನು ನಡೆಸುವಂತೆ ಸರ್ಕಾರ ಸೂಚಿಸಿತ್ತು. ಆದರೂ ಸರ್ಕಾರದ ಮಾರ್ಗಸೂಚಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಗಾಳಿಗೆ ತೂರಿವೆ ಎಂಬ ಆರೋಪಗಳು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಶಿಕ್ಷಣ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದ್ದು, ಬೇಕಾಬಿಟ್ಟಿಯಾಗಿ ತರಗತಿ ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆ ಕೊಟ್ಟಿದ್ದಾರೆ.

ತಜ್ಞರ ಶಿಫಾರಸ್ಸಿನಂತೆ ಆನ್‌ಲೈನ್ ಅವಧಿ ನಿಗದಿ

ತಜ್ಞರ ಶಿಫಾರಸ್ಸಿನಂತೆ ಆನ್‌ಲೈನ್ ಅವಧಿ ನಿಗದಿ

ಹೀಗಾಗಿ ಮಕ್ಕಳ ವಯಸ್ಸಿಗೆ ಅನುಗುಣವಾಗಿ ಆನ್‌ಲೈನ್‌ ತರಗತಿಗಳನ್ನು ನಡೆಸಬೇಕು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಆದೇಶ ಮಾಡಿದ್ದಾರೆ. ಅದರಂತೆ ವಯಸ್ಸಿಗೆ ಅನುಗುಣವಾಗಿ ದಿನವೊಂದರಲ್ಲಿ 1 ರಿಂದ 4 ಪಿರಿಯಡ್‌ಗಳನ್ನು ನಡೆಸಲು ಮಾತ್ರ ಅನುಮತಿ ಕೊಡಲಾಗಿದೆ.

'ವಿದ್ಯಾಗಮ' ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ ಸುರೇಶ್ ಕುಮಾರ್!'ವಿದ್ಯಾಗಮ' ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದ ಸುರೇಶ್ ಕುಮಾರ್!

ಜೊತೆಗೆ 1 ರಿಂದ 5ನೇ ತರಗತಿಯ ಮಕ್ಕಳಿಗೆ ಒಂದು ಸಲಕ್ಕೆ ಗರಿಷ್ಠ 30 ನಿಮಿಷಗಳ ಆನ್‌ಲೈನ್ ಕ್ಲಾಸ್ ಮಾತ್ರ ನಡೆಸಬೇಕು. 6ನೇ ತರಗತಿಯ ನಂತರದ ಮಕ್ಕಳಿಗೆ ಒಂದು ಸಲಕ್ಕೆ ಗರಿಷ್ಠ 30-45 ನಿಮಿಷಗಳ ಆನ್‌ಲೈನ್ ತರಗತಿ ಸಡೆಸಬಹುದು ಎಂದು ತಜ್ಞರ ಸಮಿತಿ ಸೂಚಿಸಿದೆ.

ನರ್ಸರಿ ಮಕ್ಕಳಿಗೆ ಆನ್‌ಲೈನ್‌ ತರಗತಿ

ನರ್ಸರಿ ಮಕ್ಕಳಿಗೆ ಆನ್‌ಲೈನ್‌ ತರಗತಿ

3 ರಿಂದ 6 ವರ್ಷಗಳ ಮಕ್ಕಳಿಗೆ ದಿನವೊಂದಕ್ಕೆ ಗರಿಷ್ಠ 30 ನಿಮಿಷಗಳ ಅವಧಿಯ ತರಗತಿಯನ್ನು ತೆಗೆದುಕೊಳ್ಳಲು ಅವಕಾಶವಿದೆ. ದಿನವೊಂದಕ್ಕೆ 30 ನಿಮಿಷಗಳ ಹಾಗೂ ದಿನ ಬಿಟ್ಟು ದಿನದಂತೆ ವಾರಕ್ಕೆ 3 ಆನ್‌ಲೈನ್‌ ತರಗತಿಗಳನ್ನು ನಡೆಸಲು ಅನುಮತಿ ಕೊಡಲಾಗಿದೆ.

1 ಹಾಗೂ 2ನೇ ತರಗತಿ ಮಕ್ಕಳಿಗೆ

1 ಹಾಗೂ 2ನೇ ತರಗತಿ ಮಕ್ಕಳಿಗೆ

ತಜ್ಞರ ವರದಿಯ ಶಿಫಾರಸ್ಸಿನಂತೆ 1 ಹಾಗೂ 2ನೇ ತರಗತಿಯ ಮಕ್ಕಳಿಗೆ ದಿನಕ್ಕೆ ಗರಿಷ್ಠ 30 ನಿಮಿಷಗಳ 2 ಪಿರಿಯಡ್‌ನ್ನು ತೆಗೆದುಕೊಳ್ಳಲು ಅವಕಾಶವಿದೆ. ಅದರಂತೆ ದಿನ ಬಿಟ್ಟು ದಿನ ವಾರಕ್ಕೆ ಮೂರು ದಿನಗಳು ಮಾತ್ರ ಆನ್‌ಲೈನ್‌ ತರಗತಿ ನಡೆಸಬೇಕು. ಜೊತೆಗೆ ಪಾಲಕರ ಉಪಸ್ಥಿತಿ ಕಡ್ಡಾಯ ಎಂದು ತಜ್ಞರು ಶಿಫಾರಸ್ಸು ಮಾಡಿದ್ದಾರೆ.

ಆನ್‌ಲೈನ್‌ ತರಗತಿ ಕುರಿತು ಸುರೇಶ್ ಕುಮಾರ್ ಮಹತ್ವದ ಸೂಚನೆ!ಆನ್‌ಲೈನ್‌ ತರಗತಿ ಕುರಿತು ಸುರೇಶ್ ಕುಮಾರ್ ಮಹತ್ವದ ಸೂಚನೆ!

3 ರಿಂದ 8ನೇ ತರಗತಿಯ ಮಕ್ಕಳಿಗೆ

3 ರಿಂದ 8ನೇ ತರಗತಿಯ ಮಕ್ಕಳಿಗೆ

ಇನ್ನು 3 ರಿಂದ 5ನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಗರಿಷ್ಠ 5 ದಿನಗಳವರೆಗೆ ಆನ್‌ಲೈನ್ ತರಗತಿ ನಡೆಸಲು ಅವಕಾಶವಿದೆ. ದಿನವೊಂದರಲ್ಲಿ 30 ನಿಮಿಷಗಳ 2 ತರಗತಿಗಳನ್ನು ನಡೆಸಬೇಕು. 6 ರಿಂದ 8ನೇ ತರಗತಿಯ ಮಕ್ಕಳಿಗೆ ದಿನವೊಂದಕ್ಕೆ ಗರಿಷ್ಠ 45 ನಿಮಿಷಗಳ 3 ತರಗತಿಗಳನ್ನು, ವಾರಕ್ಕೆ 5 ದಿನ ಆನ್‌ಲೈನ್ ಕ್ಲಾಸ್ ನಡೆಸಲು ಅನುಮತಿ ನೀಡಲಾಗಿದೆ.

9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ

9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ

9 ಹಾಗೂ 10ನೇ ತರಗತಿಯ ಮಕ್ಕಳಿಗೆ ಗರಿಷ್ಠ 45 ನಿಮಿಷಗಳ 4 ತಗರತಿಗಳನ್ನು ವಾರಕ್ಕೆ 5 ದಿನಗಳ ಕಾಲ ತೆಗೆದುಕೊಳ್ಳಲು ಅನುಮತಿಯಿದೆ. ಇದಕ್ಕಿಂತ ಹೆಚ್ಚು ಕಾಲ ಯಾವುದೇ ಆನ್‌ಲೈನ್ ತರಗತಿಯನ್ನು ತೆಗೆದುಕೊಳ್ಳುವಂತಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ತಜ್ಞರ ಶಿಫಾರಸ್ಸು ಆಧರಿಸಿ ಸೂಚಿಸಿದ್ದಾರೆ.

ಶಿಫಾರಸ್ಸು ಮೀರಿದರೆ ಕಾನೂನು ಕ್ರಮ

ಶಿಫಾರಸ್ಸು ಮೀರಿದರೆ ಕಾನೂನು ಕ್ರಮ

ಆದರೂ ಖಾಸಗಿ ಶಾಲೆಗಳು ಸರ್ಕಾರದ ಆನ್‌ಲೈನ್ ಮಾರ್ಗಸೂಚಿ ಪಾಲಿಸದೇ ಹೆಚ್ಚಿನ ಅವಧಿ ಆನ್-ಲೈನ್ ತರಗತಿಗಳನ್ನು ನಡೆಸುತ್ತಿರುವುದರಿಂದ ಮಕ್ಕಳ ಮಾನಸಿಕ, ದೂಹಿತ ಹಾಗೂ ಕಣ್ಣುಗಳ ಮೇಲೆ ಪರಿಣಾಮಗಳು ಆಗುತ್ತಿವೆ ಎಂಬ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಇಲಾಖೆ ಸುತ್ತೋಲೆ ಹೊರಡಿಸಿದ್ದು, ತಜ್ಞರ ವರದಿಯ ಶಿಫಾರಸಿನ ಅವಧಿಯನ್ವಯ ಆನ್-ಲೈನ್ ಬೋಧನೆ ಮಾಡಬೇಕು.

ಈ ಮಾರ್ಗಸೂಚಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983 (1995)ರ ಸೆಕ್ಷನ್ 124(5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಹೆಚ್ಚುವರಿ ಶುಲ್ಕ

ಹೆಚ್ಚುವರಿ ಶುಲ್ಕ

ರಾಜ್ಯದ ಖಾಸಗಿ ಶಾಲೆಗಳು ಆನ್‌ಲೈನ್ ಬೋಧನೆ ಆರಂಭಿಸಿ ಹೆಚ್ಚುವರಿ ಶುಲ್ಕ ಪಾವತಿಸಲು ಒತ್ತಡ ತರುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರ ದೂರಿನನ್ವಯ ಕ್ರಮ ಕೈಗೊಂಡು ಹೆಚ್ಚುವರಿ ಶುಲ್ಕ ಪಡೆಯದೇ ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಏಪ್ರಿಲ್ 2020ರಲ್ಲಿ ಆದೇಶ ನೀಡಲಾಗಿತ್ತು.

ಪೋಷಕರಿಗೆ ಮಕ್ಕಳ ಆನ್-ಲೈನ್ ತರಗತಿಗಳಿಗೆ ಮೊಬೈಲ್‌ನಂತಹ ಸಾಧನಗಳನ್ನು ಕೊಳ್ಳಲು ಸಾಮರ್ಥ್ಯ ಇಲ್ಲದಿರುವ ಮತ್ತು ಎಲ್‍ಕೆಜಿಯಿಂದ ಐದನೇ ತರಗತಿ ಮಕ್ಕಳು ಆನ್‌ಲೈನ್ ಶಿಕ್ಷಣದಲ್ಲಿ ಭಾಗವಹಿಸಲು ತೊಂದರೆಗಳಾಗುತ್ತಿವೆ ಎಂಬ ಪೋಷಕರ ದೂರಿನ ಹಿನ್ನೆಲೆಯಲ್ಲಿ ಜೂ. 15ರಂದು ತಜ್ಞರ ಸಮಿತಿ ರಚಿಸಿ ಆನ್-ಲೈನ್ ಶಿಕ್ಷಣ ಕುರಿತು ವರದಿ ನೀಡಲು ಕೇಳಲಾಗಿತ್ತು.

Recommended Video

ನಿಮ್ ಆಟ ನಡಿಯಲ್ಲಾ!! | NO MORE STUNTS!!! | Oneindia Kannada
ಸಮಿತಿ ರಚಿಸಿದ್ದ ಸರ್ಕಾರ

ಸಮಿತಿ ರಚಿಸಿದ್ದ ಸರ್ಕಾರ

ಅದರಂತೆ ಜೂ. 17ರಂದು ಎಲ್‍ಕೆಜಿಯಿಂದ ಐದನೇ ತರಗತಿವರೆಗೆ ಆನ್-ಲೈನ್ ಶಿಕ್ಷಣ ರದ್ದುಪಡಿಸಲು ಆದೇಶ ಹೊರಡಿಸಲಾಗಿತ್ತು. ತಜ್ಞರ ಸಮಿತಿ ವರದಿ ಬರುವತನಕ ಪ್ರಾಥಮಿಕ ತರಗತಿಗಳಿಂದ 10ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣಕ್ಕೆ ತರಗತಿವಾರು ಆವಧಿ ನಿಗದಿಪಡಿಸಿ ಜೂ. 27ರಂದು ಸುತ್ತೋಲೆ ಹೊರಡಿಸಲಾಗಿತ್ತು. ಇಲಾಖೆಯ ಜೂ. 17ರ ಸುತ್ತೋಲೆ ವಿರುದ್ಧ ಖಾಸಗಿ ಶಿಕ್ಷಣಸಂಸ್ಥೆಗಳು ಉಚ್ಚ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು, ಘನ ನ್ಯಾಯಾಲಯವು ಜೂ. 17 ಮತ್ತು ಜೂ. 27ರ ಆದೇಶಗಳಿಗೆ ತಡೆಯಾಜ್ಞೆ ನೀಡಿದ್ದು, ಆನ್-ಲೈನ್ ಶಿಕ್ಷಣವನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಹೋಗಲು ಅವಕಾಶವಾಗಿತ್ತು.

English summary
The government has suggested that online classes be conducted only on the recommendation of experts. There have been allegations, however, that private education institutions are winding down the government's guidelines. Against this backdrop, the state education department has issued a major directive, warning of stringent legal action against educators who run classrooms in the attic. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X