ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಕಿಂಗ್ ಸುದ್ದಿ: ಸರ್ಕಾರಿ ರಜೆಗಳಿಗೆ ಬ್ರೇಕ್‌ ಹಾಕಲಿದೆ ಸರ್ಕಾರ

|
Google Oneindia Kannada News

Recommended Video

ಕರ್ನಾಟಕ ಸರ್ಕಾರ ಸರ್ಕಾರೀ ರಜೆಗಳನ್ನ ಕಡಿತ ಮಾಡಲು ಮುಂದಾಯ್ತು | Oneindia Kannada

ಬೆಂಗಳೂರು, ನವೆಂಬರ್ 20: ಸರ್ಕಾರಿ ರಜೆಗಳ ಸಂಖ್ಯೆ ಕಡಿತ ಮಾಡಲು ಸರ್ಕಾರ ಚಿಂತಿಸಿದ್ದು, ಇದರ ಬಗ್ಗೆ ಪರಿಶೀಲಿಸಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ.

ಸರ್ಕಾರಿ ರಜೆಗಳು ಹೆಚ್ಚಾಗಿರುವ ಕಾರಣದಿಂದ ಸರ್ಕಾರಿ ಕೆಲಸಗಳು ವೇಗವಾಗಿ ಸಾಗುತ್ತಿಲ್ಲ ಎಂಬ ದೂರು ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರಿ ರಜೆಗಳಲ್ಲಿ ಕಡಿತ ಮಾಡಲು ಸರ್ಕಾರ ಚಿಂತಿಸಿ, ಕಾರ್ಯೋನ್ಮುಕವಾಗಿದೆ.

2019ರ ಸಾರ್ವತ್ರಿಕ ರಜಾದಿನಗಳ ಪಟ್ಟಿ: ಭರಪೂರ ಸರಣಿ ರಜೆಯ ಸಂಭ್ರಮ2019ರ ಸಾರ್ವತ್ರಿಕ ರಜಾದಿನಗಳ ಪಟ್ಟಿ: ಭರಪೂರ ಸರಣಿ ರಜೆಯ ಸಂಭ್ರಮ

2019 ನೇ ವರ್ಷದಲ್ಲಿ 54 ವಾರದ ರಜೆಗಳು, 12 ಎರಡನೇ ಶನಿವಾರ, 21 ಸಾರ್ವತ್ರಿಕ ರಜೆಗಳು, 19 ಸಾಂದರ್ಭಿಕ ರಜೆಗಳು ಇವೆ. ರಜೆಗಳ ಸಂಖ್ಯೆ ಹೆಚ್ಚಾಗಿದೆ ಎಂಬ ಅಭಿಪ್ರಾಯ ಜನರಿಂದ ಕೇಳಿಬರುತ್ತಿದ್ದು, ರಜೆಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಸರ್ಕಾರ ಮುಂದಾಗಿದೆ.

Government planing to cut off government holidays

ಸಚಿವ ಸಂಪುಟ ಉಪಸಮಿತಿಯು ಪರಿಶೀಲನೆ ನಡೆಸಿ ಯಾವ ರಜೆಗಳನ್ನು ತೆಗೆದುಹಾಕಬೇಕು, ಯಾವ ರಜೆಗಳನ್ನು ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತದೆ. ಅದರ ಆಧಾರದಲ್ಲಿ ಸರ್ಕಾರವು ರಜೆಗಳನ್ನು ಕಡಿತಗೊಳಿಸುವ ನಿರ್ಣಯ ತೆಗೆದುಕೊಳ್ಳಲಿದೆ.

ಎರಡನೇ ಶನಿವಾರ ರಜೆ ಬಗ್ಗೆ ಸ್ಪಷ್ಟನೆ ನೀಡಿದ ರಾಜ್ಯ ಸರ್ಕಾರಎರಡನೇ ಶನಿವಾರ ರಜೆ ಬಗ್ಗೆ ಸ್ಪಷ್ಟನೆ ನೀಡಿದ ರಾಜ್ಯ ಸರ್ಕಾರ

ಸರ್ಕಾರದ ಕೆಲಸ ಸರಾಗವಾಗಿ ಸಾಗಲು ರಜೆಗಳಿಗೆ ಕಡಿವಾಣ ಮತ್ತು ಅಧಿಕಾರಿಗಳಿಗೆ ಅನುಕೂಲವಾಗುವಂತೆ ವಾರಾಂತ್ಯದಲ್ಲಿ ರಜೆ ನೀಡುವ ಬಗ್ಗೆಯೂ ಸಂಪುಟ ಉಪಸಮಿತಿ ಪರಿಶೀಲನೆ ನಡೆಸಲಿದೆ.

English summary
Coalition government planing to cut off government holidays. government created a cabinet sub commity to do verification about it and submit a detail report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X