ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವದ ವೇಳೆಗೆ ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ

|
Google Oneindia Kannada News

ಬೆಂಗಳೂರು, ಆಗಸ್ಟ್ 30: ಕನ್ನಡ ರಾಜ್ಯೋತ್ಸವ ಸಮೀಪದಲ್ಲಿದ್ದು ಅಷ್ಟರಲ್ಲಿ ಅಂಗಡಿ, ಖಾಸಗಿ ಸಂಸ್ಥೆಗಳ ಇಂಗ್ಲಿಷ್ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಇರಬೇಕೆಂಬ ನಿಯಮ ತರಲು ಸರ್ಕಾರ ಸಜ್ಜಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರು, ನವೆಂಬರ್ 1 ರ ವೇಳೆಗೆ ಅಂಗಡಿಗಳ ನಾಮಫಲಕದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಕಾನೂನನ್ನು ಜಾರಿಗೆ ತರಲು ಸಿದ್ಧತೆ ನಡೆಸಿದ್ದೇವೆ ಎಂದಿದ್ದಾರೆ.

Government planing to make Kannada language mandatory in name boards

ಅಕ್ಟೋಬರ್ ಅಂತ್ಯ ಅಥವಾ ಸೆಪ್ಟೆಂಬರ್ ವೇಳೆಗೆ ನಾಮಫಲಕದಲ್ಲಿ ಕನ್ನಡ ಕಡ್ಡಾಯದ ಕಾನೂನು ಜಾರಿಯಾಗಲಿದ್ದು. ಅಂಗಡಿಗಳು, ಖಾಸಗಿ ಸಂಸ್ಥೆಗಳು ತಮ್ಮ ನಾಮಫಲಕದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕಾಗುತ್ತದೆ.

ಬೆಂಗಳೂರು ಸೇರಿದಂತೆ ಹಲವೆಡೆ ಹಲವು ಅಂಗಡಿಗಳು, ಖಾಸಗಿ ಸಂಸ್ಥೆಗಳು ಕೇವಲ ಇಂಗ್ಲಿಷ್‌ನಲ್ಲಿ ಅಕ್ಷರಗಳಿರುವ ನಾಮಫಲಕ ಹಾಕಿರುವುದು ಸಾಮಾನ್ಯ ಈ ಬಗ್ಗೆ ಕನ್ನಡ ಹೊರಾಟಗಾರರು ಆಗಾಗ್ಗೆ ತಕರಾರು ತೆಗೆಯುತ್ತಲೇ ಇರುತ್ತಾರೆ ಈಗ ಸರ್ಕಾರವೇ ಈ ಬಗ್ಗೆ ಕಾನೂನು ಜಾರಿಗೊಳಿಸಿದರೆ ಎಲ್ಲ ನಾಮಫಲಕಗಳೂ ಕನ್ನಡ ಮಯವಾಗಲಿವೆ.

ರಾಜ್ಯ ಹಾಗು ದೇಶದಲ್ಲಿ ಕನ್ನಡದ ಸ್ಥಾನಮಾನವನ್ನು ಹೆಚ್ಚಿಸಿ, ಆಡಳಿತದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಪರಮೇಶ್ವರ್ ಅವರು ಹೇಳಿದ್ದಾರೆ.

English summary
Government planing to make Kannada language mandatory in name boards of Shops and private companies. DCM Parameshwar tweeted about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X