ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಕಚೇರಿಗಳಲ್ಲಿ 'ಸಾಹೇಬ್ರು ಇಲ್ಲ ನಾಳೆ ಬನ್ನಿ' ಎಂದು ಹೇಳುವಂತಿಲ್ಲ

By ಅನಿಲ್ ಬಾಸೂರ್
|
Google Oneindia Kannada News

ಬೆಂಗಳೂರು, ಡಿ. 13: "ಸರ್ಕಾರದ ಕೆಲಸ ದೇವರ ಕೆಲಸ" ಎಂದು ವಿಧಾನಸೌಧ ಸೇರಿದಂತೆ ಸರ್ಕಾರದ ಎಲ್ಲ ಕಚೇರಿಗಳ ಮೇಲೆ ಬರೆದಿರುತ್ತದೆ. ಆದರೆ ಕೆಲಸಕ್ಕಾಗಿ ಸಾಮಾನ್ಯರು ಸರ್ಕಾರಿ ಕಚೇರಿಗಳಿಗೆ ಹತ್ತಾರು ಬಾರಿ ಅಲೆದರೂ ಸಕಾಲದಲ್ಲಿ ಸರ್ಕಾರಿ ಕಚೇರಿಗಳಿಗೆ ಪ್ರವೇಶ ಸಿಗುವುದೇ ಇಲ್ಲ, ಪ್ರವೇಶ ಸಿಕ್ಕರೂ 'ಸಾಹೇಬರು ಇಲ್ಲ ನಾಳೆ ಬನ್ನಿ' ಎಂಬ ರೆಡಿಮೇಡ್ ಉತ್ತರವನ್ನ ಅಲ್ಲಿನ ಸಿಬ್ಬಂದಿ ಕೊಡುತ್ತಾರೆ.

ಇದಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಖಡಕ್ ಆದೇಶ ಹೊರಸಿಡಿದ್ದಾರೆ. ಪ್ರತಿ ಮಧ್ಯಾಹ್ನ 3.30 ರಿಂದ ಸಂಜೆ 5.30 ಗಂಟೆವೆರೆಗೆ ಅಧಿಕಾರಿಗಳು ಖಡ್ಡಾಯವಾಗಿ ತಮ್ಮ ಕಚೇರಿಯಲ್ಲಿ ಹಾಜರಿದ್ದು ಸಮಸ್ಯೆ ಹೇಳಿಕೊಂಡು ಬರುವವರನ್ನು ಭೇಟಿ ಮಾಡಬೇಕು ಎಂದು ಕರ್ನಾಟಕ ಸಚಿವಾಲಯ ಕೈಪಿಡಿಯ ಪ್ಯಾರಾ 272 (3)ರನ್ವಯ ಸುತ್ತೋಲೆ ಹೊರಡಿಸಲಾಗಿದೆ. ಅಧಿಕಾರಿಗಳು ಜನಸಮಾನ್ಯರ ಭೇಟಿಗೆ ಸಮಯಾವಕಾಶ ಕೊಡುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ 'ಒನ್ ಇಂಡಿಯಾ'ಕ್ಕೆ ಮಾಹಿತಿ ಕೊಟ್ಟಿದೆ.

ಸರ್ಕಾರಿ ನೌಕರರಿಗೆ 4ನೇ ಶನಿವಾರ ರಜಾ ರದ್ದು, ಆದರೆ ಎಲ್ಲರಿಗೂ ಅಲ್ಲಸರ್ಕಾರಿ ನೌಕರರಿಗೆ 4ನೇ ಶನಿವಾರ ರಜಾ ರದ್ದು, ಆದರೆ ಎಲ್ಲರಿಗೂ ಅಲ್ಲ

ಮಧ್ಯಾಹ್ನ 3.30 ನಂತರ ವಿಧಾನಸೌಧಕ್ಕೆ ಮುಕ್ತ ಪ್ರವೇಶ

Government order about government officers meeting

ಮಧ್ಯಾಹ್ನ 3,30 ರಿಂದ ಸಂಜೆ 5.30ರವೆರೆಗ ಪಾಸ್‌ ಇಲ್ಲದೆಯೆ ವಿಧಾನಸೌಧಕ್ಕೂ ಸಮಾನ್ಯರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಇತರ ಅಧಿಕಾರಿಗಳನ್ನ ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಲು ಅವಕಾಶವಿದೆ. ಇದಲ್ಲದೆ ಅಧಿಕಾರಿಗಳು ಮಧ್ಯಾಹ್ನ ಖಡ್ಡಾಯವಾಗಿ ಯಾವುದೇ ಸಭೆಗಳನ್ನು ನಡೆಸಬಾರದು.

ಸಭೆಗಳನ್ನು ನೆಪ ಹೇಳದೆ ಖಡ್ಡಾಯವಾಗಿ ಜನರನ್ನ ಭೇಟಿ ಮಾಡಲೇ ಬೇಕೆಂದು ಆದೇಶದಲ್ಲಿ ಸೂಚಿಸಲಾಗಿದೆ. ಬಿಬಿಎಂಪಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ ಬಿ ಸೇರಿದಂತೆ ಎಲ್ಲ ನಿಗಮ ಮಂಡಳಿಗಳು, ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳು, ಜಿಲ್ಲಾ ಪಂಚಾಯ್ತಿ ಸಿಇಓಗಳು ಸಾರ್ವಜನಿಕ ರಜಾ ದಿನ ಹೊರತು ಪಡಿಸಿ ಜನರ ಭೇಟಿಗೆ ಅವಕಾಶ ಕೊಡಬೇಕೆಂದು ಕಟ್ಟುನಿಟ್ಟಿನ ಸೂಚನೆ ಕೊಡಲಾಗಿದೆ.

English summary
Know everything about karnataka government office timing, How common man meet officers, common people meeting time, vidhana soudha entry details in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X