ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರಿಗಾಗಿ ದುಬಾರಿ ಕಾರು ಖರೀದಿಸಿದ ಯಡಿಯೂರಪ್ಪ ಸರಕಾರ

|
Google Oneindia Kannada News

ಬೆಂಗಳೂರು, ಸೆ 23: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರಿಗೆ, ಯಡಿಯೂರಪ್ಪನವರ ಸರಕಾರ ದುಬಾರಿ ವೋಲ್ವೋ ಕಾರನ್ನು ಖರೀದಿಸಿದೆ. ರಾಜ್ಯಸಭೆಗೆ ಗೌಡ್ರು ಆಯ್ಕೆಯಾಗಿರುವ ಕಾರಣ ಶಿಷ್ಟಾಚಾರದ ಪ್ರಕಾರ ಕಾರು ನೀಡಬೇಕಿದೆ.

Recommended Video

HD DeveGowda ಅವರ ಬಳಿ ಈಗ ರಾಜಕಾರಣಿಗಳ ಪೈಕಿ ಅತಿ ದುಬಾರಿ ಕಾರು | Oneindia Kannada

ವೋಲ್ವೋ XC60 ಡಿ5 ಸಿರೀಸ್ ಕಾರನ್ನು ದೇವೇಗೌಡರಿಗಾಗಿ, ಮುಖ್ಯ ಕಾರ್ಯದರ್ಶಿಯ ಹೆಸರಿನಲ್ಲಿ ರಾಜ್ಯ ಸರಕಾರ ಖರೀದಿಸಿದೆ. ಈಗಾಗಲೇ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಫಾರ್ಚ್ಯೂನರ್ ಕಾರನ್ನು ಸರಕಾರ ನೀಡಿದೆ.

ಸಂಸತ್ ಸದಸ್ಯರಿಗೆ ಮಾಜಿ ಪ್ರಧಾನಿ ದೇವೇಗೌಡರ ಕಿವಿಮಾತು ಸಂಸತ್ ಸದಸ್ಯರಿಗೆ ಮಾಜಿ ಪ್ರಧಾನಿ ದೇವೇಗೌಡರ ಕಿವಿಮಾತು

ಸರಕಾರ ಕಾರು ಖರೀದಿಸಿದ್ದರೂ, ದೇವೇಗೌಡರಿಗೆ ಇನ್ನೂ ಇದು ಹಸ್ತಾಂತರಗೊಳ್ಲಬೇಕಿದೆ. ಹಾಗಾಗಿ, ವೋಲ್ವೋ ಕಾರು ಇನ್ನೂ ಕುಮಾರಕೃಪ ಅತಿಥಿಗೃಹದಲ್ಲಿದೆ. 15 ದಿನಗಳ ಹಿಂದಷ್ಟೇ ಈ ಕಾರನ್ನು ಖರೀದಿಸಲಾಗಿದೆ.

Government Of Karnataka Purchased Volvo XC60-D5 Series For JDS Supremo Deve Gowda

ಈ ದುಬಾರಿ ಕಾರಿನ ಮೂಲಬೆಲೆ ಅರವತ್ತು ಲಕ್ಷ ರೂಪಾಯಿ. ಸರಕಾರದ ಹೆಸರಿನಲ್ಲಿ ಕಾರನ್ನು ಖರೀದಿಸುತ್ತಿರುವುದರಿಂದ, ಯಾವುದೇ ತೆರಿಗೆ ಈ ಖರೀದಿಗೆ ಅನ್ವಯವಾಗುವುದಿಲ್ಲ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ, ಇದು ಮುಗಿದ ಮೇಲೆ ಗೌಡ್ರು ಸರಕಾರದಿಂದ ಕಾರನ್ನು ತೆಗೆದುಕೊಳ್ಳಬಹುದು.

ಇತ್ತೀಚೆಗೆ ರಾಜ್ಯಸಭಾ ಸದಸ್ಯರಿಗೆ ಕನ್ನಡದಲ್ಲಿ ದೇವೇಗೌಡರು ಪ್ರಮಾಣವಚನ ಸ್ವೀಕರಿಸಿದ್ದರು. ಕೃಷಿ ಸಂಬಂಧಿತ ಕಾಯ್ದೆ ವಿಚಾರದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸಂಸದರು ಒಮ್ಮತದ ತೀರ್ಮಾನಕ್ಕೆ ಬರುವಂತೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಎಲ್ಲಾ ಪಕ್ಷಗಳ ಸಂಸದರಿಗೆ ಕಿವಿಮಾತು ಹೇಳಿದ್ದರು.

ಸಿದ್ದರಾಮಯ್ಯ ಎಂತಹ ಸ್ವಾರ್ಥಿ, ಎಡಬಿಡಂಗಿ ರಾಜಕಾರಣಿ ಎಂದು ಇಡೀ ನಾಡಿಗೆ ಗೊತ್ತಿದೆ ಸಿದ್ದರಾಮಯ್ಯ ಎಂತಹ ಸ್ವಾರ್ಥಿ, ಎಡಬಿಡಂಗಿ ರಾಜಕಾರಣಿ ಎಂದು ಇಡೀ ನಾಡಿಗೆ ಗೊತ್ತಿದೆ

"ಪರಸ್ಪರ ಒಮ್ಮತದ ತೀರ್ಮಾನಕ್ಕೆ ಬರಲು ಸಂಸದರು ಶಾಂತಿಯುತವಾಗಿ ಚರ್ಚೆ ನಡೆಸಬೇಕು. ಸಂಸತ್ ಕಲಾಪಗಳನ್ನು ನಡೆಸುವುದಕ್ಕೆ ಸಂಸದರು ಅವಕಾಶ ಕಲ್ಪಿಸಿ ಕೊಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಕಾರದೊೆಂದಿಗೆ ಎಲ್ಲರೂ ಕೆಲಸ ಮಾಡಬೇಕಿದೆ" ಎಂದು ಸಲಹೆ ನೀಡಿದ್ದರು.

English summary
Government Of Karnataka Purchased Volvo XC60-D5 Series For JDS Supremo Deve Gowda,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X