ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್, ದಿನ 1: ಮಾರ್ಗಸೂಚಿಯಲ್ಲಿ ಬದಲಾವಣೆ 2

|
Google Oneindia Kannada News

ಬೆಂಗಳೂರು, ಮೇ 11: ಕೊರೊನಾ ಮಾರ್ಗಸೂಚಿಯಲ್ಲಿ ಪದೇಪದೇ ಬದಲಾವಣೆಗಳನ್ನು ಮಾಡುತ್ತಾ, ಸಾರ್ವಜನಿಕ ವಲಯದಲ್ಲಿ ನಗೇಪಾಟಲಿಗೆ ಗುರಿಯಾಗುತ್ತಿರುವ ರಾಜ್ಯ ಸರಕಾರ, ಹಾಲೀ ಲಾಕ್‌ಡೌನಿನ ಮೊದಲನೇ ದಿನವೇ ಎರಡು ಬದಲಾವಣೆಗಳನ್ನು ಮಾಡಿದೆ.

Recommended Video

Lockdown ನಿಯಮಗಳಲ್ಲಿ ಮೊದಲನೇ ದಿನವೇ ಬದಲಾವಣೆ | Oneindia Kannada

ಯಾವುದಕ್ಕೆ ನಿರ್ಬಂಧ, ಯಾವುದಕ್ಕೆ ನಿರ್ಬಂಧವಿಲ್ಲ ಎನ್ನುವುದು ಪ್ರತೀ ಮಾರ್ಗಸೂಚಿಯಲ್ಲೂ ಗೊಂದಲದ ಗೂಡಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ, ಸರಕಾರ ಹೊರಡಿಸುವ ಮಾರ್ಗಸೂಚಿ ಬಹುತೇಕ ಕನ್ನಡದಲ್ಲಿ ಇಲ್ಲದೇ ಇರುವುದು.

ಸರ್ಕಾರದ ಲಾಕ್‌ಡೌನ್ ನಿರ್ಧಾರಕ್ಕೆ ಟ್ರೋಲಿಗರು ಏನೆಂದರು?ಸರ್ಕಾರದ ಲಾಕ್‌ಡೌನ್ ನಿರ್ಧಾರಕ್ಕೆ ಟ್ರೋಲಿಗರು ಏನೆಂದರು?

ಈ ಲಾಕ್‌ಡೌನ್, ಜನತಾ ಕರ್ಫ್ಯೂವಿನ ಮುಂದುವರಿದ ಭಾಗ ಎನ್ನುವಂತೆ, ಕೊಂಚ ಬದಲಾವಣೆಗಳನ್ನು ಮಾಡಿ ಮೇ ಎಂಟರಂದು ಪರಿಸ್ಕೃತ ಗೈಡ್ಲೈನ್ಸ್ ಅನ್ನು ರಾಜ್ಯ ಸರಕಾರ ಬಿಡುಗಡೆ ಮಾಡಿತ್ತು. ಹೊಸ ಮಾರ್ಗಸೂಚಿ ಸೋಮವಾರದಿಂದ (ಮೇ 10) ಜಾರಿಗೆ ಬಂದಿತ್ತು.

GoK Made Two Changes In The Guidelines In The First Day Of 14 Days Lock Down

ಮಾರ್ಗಸೂಚಿಯ ಪ್ರಕಾರ, ಹದಿನಾಲ್ಕು ದಿನಗಳ ಲಾಕ್‌ಡೌನ್ ವೇಳೆ, ಪೊಲೀಸರಿಗೆ ಫ್ರೀಹ್ಯಾಂಡ್ ನೀಡಲಾಗಿತ್ತು. ಇನ್ನೊಂದು, ಬೆಳಗ್ಗೆ ಆರರಿಂದ ಹತ್ತರವರೆಗೆ ಅವಶ್ಯಕ ವಸ್ತುಗಳ ಖರೀದಿಗೆ ವಾಹನವನ್ನು ಬಳಸದಂತೆ ನಿರ್ಬಂಧ ಹೇರಲಾಗಿತ್ತು.

ಪೊಲೀಸರಿಗೆ ಫ್ರೀಹ್ಯಾಂಡ್ ಸಿಕ್ಕಿದ್ದೇ ಸಿಕ್ಕಿದ್ದು, ಸಿಕ್ಕಸಿಕ್ಕಲ್ಲಿ ಲಾಠಿ ಬೀಸುವ ದೃಶ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿತ್ತು ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿತ್ತು. ಕೂಡಲೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿಗಳು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕರೆ ಮಾಡಿ ಲಾಠಿ ಬೀಸದಂತೆ ಸೂಚನೆ ಕೊಟ್ಟರು. ಅದರ ಬೆನ್ನಲ್ಲೇ, ಬೆಂಗಳೂರು ಪೊಲೀಸ್ ಆಯುಕ್ತರು ಲಾಠಿ ಬೀಸದಂತೆ ತಮ್ಮ ಸಿಬ್ಬಂದಿಗಳಿಗೆ ಸೂಚಿಸಿದರು. ಅಲ್ಲಿಗೆ, ಮಾರ್ಗಸೂಚಿಯಲ್ಲಿ ಮೊದಲ ಬದಲಾವಣೆಯಾಯಿತು.

ಲಾಕ್‌ಡೌನ್: ಪೊಲೀಸರಿಂದ ತಪ್ಪಿಸಿಕೊಳ್ಳಲು ಏನ್ ಕಥೆ ಕಟ್ತಾರೆ ಗುರು..ಲಾಕ್‌ಡೌನ್: ಪೊಲೀಸರಿಂದ ತಪ್ಪಿಸಿಕೊಳ್ಳಲು ಏನ್ ಕಥೆ ಕಟ್ತಾರೆ ಗುರು..

ಇದಾದ ಸ್ವಲ್ಪ ಹೊತ್ತಿನಲ್ಲೇ ಬೆಳಗ್ಗೆ ಅಗತ್ಯ ವಸ್ತುಗಳನ್ನು ಖರೀದಿಸಲು ವಾಹನವನ್ನು ಬಳಸಬಹುದು. ಆದರೆ, ಇದನ್ನೇ ಲಾಭವಾಗಿ ಪಡೆದುಕೊಂಡು ಅಡ್ಡಾದಿಡ್ಡಿ ಸುತ್ತಬೇಡಿ ಎಂದು ಸರಕಾರ ಆದೇಶ ಹೊರಡಿಸಿತು. ಅಲ್ಲಿಗೆ, ಲಾಕ್ ಡೌನಿನ ಮೊದಲ ದಿನವೇ, ಸರಕಾರ ಮಾರ್ಗಸೂಚಿಯಲ್ಲಿ ಎರಡು ಬದಲಾವಣೆಯನ್ನು ಮಾಡಿತ್ತು.

English summary
GoK Made Two Changes In The Guidelines In The First Day Of 14 Days Lock Down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X