ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈಕ್, ಕಾರುಗಳ ವಾಹನ ವಿಮಾ ಪ್ರೀಮಿಯಂ ಹೆಚ್ಚಳ: ಕೇಂದ್ರ ಸರ್ಕಾರದಿಂದ ಶಾಕ್ !

|
Google Oneindia Kannada News

ಬೆಂಗಳೂರು, ಮೇ 27: ಪೆಟ್ರೋಲ್ - ಡೀಸೆಲ್ ದರ ಏರಿಕೆಯಿಂದ ಕಂಗ್ಗೆಟ್ಟಿರುವ ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಮೂರನೇ ವ್ಯಕ್ತಿಯ ಮೋಟಾರು ವಾಹನ ವಿಮೆ ಪ್ರೀಮಿಯಂ ದರವನ್ನು ಜೂನ್ 01, 2022 ರಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡುವ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಗುರುವಾರ ಅಂತಿಮ ಮುದ್ರೆ ಒತ್ತಿದೆ.

2022 ಜೂ. 1 ರಿಂದ ಪರಿಷ್ಕೃತ ಮೋಟಾರು ವಾಹನ ಮೂರನೇ ವ್ಯಕ್ತಿಯ ವಿಮೆಯ ಮೊತ್ತ ಜಾರಿಗೆ ಬರಲಿದ್ದು, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ಸವಾರರಿಗೆ ವಾಹನ ವಿಮೆ ಪ್ರೀಮಿಯಮ್ ಹೊರೆ ಹೆಚ್ಚಾಗಲಿದೆ. 2019 ರಿಂದಲೇ ವಾಹನ ವಿಮೆ ಪರಿಷ್ಕೃತ ಪ್ರೀಮಿಯಮ್ ದರ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಕೋವಿಡ್ ನಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದರಿಂದ ಈ ಪ್ರಸ್ತಾವನೆಯನ್ನು ಬಾಕಿ ಇಡಲಾಗಿತ್ತು.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಗೆಜೆಟ್ ನೋಟಿಫಿಕೇಷನ್ ಪ್ರಕಾರ, 1000ಸಿಸಿ ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಕಾರುಗಳ ಮೂರನೇ ವ್ಯಕ್ತಿಯ ವಾಹನ ವಿಮೆ ಪ್ರಿಮಿಯಮ್ ದರ ವಾರ್ಷಿಕ 2,094 ಕ್ಕೆ ಹೆಚ್ಚಿಸಿ ಪರಿಷ್ಕರಿಸಲಾಗಿದೆ. ಈ ಹಿಂದೆ ಈ ದರ ಕೇವಲ 2072 ರೂ. ಇತ್ತು. ವಾರ್ಷಿಕ 24 ರೂ. ಹೆಚ್ಚಿಸಲಾಗಿದೆ.

1000 ಸಿಸಿ ಸಾಮರ್ಥ್ಯದ ಕಾರುಗಳ ಪ್ರೀಮಿಯಂ ವಿವರ:

1000 ಸಿಸಿ ಸಾಮರ್ಥ್ಯದ ಕಾರುಗಳ ಪ್ರೀಮಿಯಂ ವಿವರ:

ಕನಿಷ್ಠ 1000 ಸಿಸಿ ಸಾಮರ್ಥ್ಯದಿಂದ 1500 ಸಿಸಿ ಸಾಮರ್ಥ್ಯದ ಕಾರುಗಳ ಮೂರನೇ ವ್ಯಕ್ತಿಯ ವಾಹನ ವಿಮೆ ಪ್ರೀಮಿಯಂ ಪಾವತಿ ಮೊತ್ತವನ್ನು 3,221 ರಿಂದ 3,416 ಕ್ಕೆ ಹೆಚ್ಚಿಸಲಾಗಿದೆ. ಅಂದರೆ ಬರೋಬ್ಬರಿ 200 ರೂ. ಹೆಚ್ಚಳ ಮಾಡಲಾಗಿದೆ. ಅತಿ ದೊಡ್ಡ ಕಾರುಗಳು ಅಂದ್ರೆ 1500 ಸಿಸಿ ಸಾಮರ್ಥ್ಯಕ್ಕಿಂತ ಹೆಚ್ಚಿರುವ ಶ್ರೀಮಂತರ ಕಾರುಗಳ ಮೂರನೇ ವ್ಯಕ್ತಿಯ ವಿಮಾ ಮೊತ್ತವನ್ನು 7897 ಇದ್ದಿದ್ದನ್ನು 7980 ಕ್ಕೆ ಇಳಿಸಲಾಗಿದೆ.

ಭಾರತದಲ್ಲಿ ವಾಹನ ಇಟ್ಟಿಕೊಳ್ಳುವಂತಿಲ್ಲ:

ಭಾರತದಲ್ಲಿ ವಾಹನ ಇಟ್ಟಿಕೊಳ್ಳುವಂತಿಲ್ಲ:

ದ್ವಿಚಕ್ರ ವಾಹನಗಳ ವಿಚಾರಕ್ಕೆ ಬಂದ್ರೆ, 150 ಸಿಸಿ ಸಾಮರ್ಥ್ಯದಿಂದ 350ಸಿಸಿ ಸಾಮರ್ಥ್ಯದ ವಿಮೆ ಪ್ರೀಮಿಯಂ 1366 ರೂ. ನಿಗದಿ ಮಾಡಲಾಗಿದೆ. 350 ಸಿಸಿಗೆ ಮೇಲ್ಪಟ್ಟ ದ್ವಿಚಕ್ರ ವಾಹನಗಳ ವಾಹನ ವಿಮೆ ಪ್ರೀಮಿಯಂ ಮೊತ್ತ 2804 ರೂ. ಪಾವತಿಸಬೇಕು ಎಂದು ಕೇಂದ್ರ ಸಾರಿಗೆ ಮಂತ್ರಾಲಯ ಗೆಜೆಟ್ ನಲ್ಲಿ ಪ್ರಕಟಸಿದೆ.

ವಾಹನ ವಿಮೆ ಪರಿಷ್ಕರಣೆ ದರದ ವಿವರ:

ವಾಹನ ವಿಮೆ ಪರಿಷ್ಕರಣೆ ದರದ ವಿವರ:

ವಾಹನ ವಿಮೆ ಪರಿಷ್ಕರಣೆ ಪ್ರಕಾರ ಮೂರು ವರ್ಷದ ಸಿಂಗಲ್ ಪ್ರೀಮಿಯಂ ಪಾವತಿ ಮಾಡುವುದಿದ್ದರೆ, 1000ಸಿಸಿ ಸಾಮರ್ಥ್ಯದೊಳಗಿನ ಕಾರುಗಳಿಗೆ 6521 ರೂ. ನಿಗದಿ ಮಾಡಲಾಗಿದೆ. 1000ಸಿಸಿ ಮೇಲ್ಪಟ್ಟ ಹಾಗೂ 1500ಸಿಸಿ ನಡುವಿನ ಕಾರುಗಳ ಮೂರು ವರ್ಷದ ಸಿಂಗಲ್ ಪ್ರೀಮಿಯಂ ದರ 10,640 ರೂ. ಆಗಲಿದೆ. 1500 ಕ್ಕೂ ಹೆಚ್ಚು ಸಾಮರ್ಥ್ಯದ ನೂತನ ಖಾಸಗಿ ಕಾರುಗಳಿಗೆ ಮೂರು ವರ್ಷಕ್ಕೆ 24,596 ರೂ. ಪ್ರೀಮಿಯಂ ನಿಗದಿ ಮಾಡಲಾಗಿದೆ.

350 ಸಿಸಿ ಸಾಮರ್ಥ್ಯದ ವಾಹನಗಳಿಗೆ ದುಬಾರಿ ಮೊತ್ತ:

350 ಸಿಸಿ ಸಾಮರ್ಥ್ಯದ ವಾಹನಗಳಿಗೆ ದುಬಾರಿ ಮೊತ್ತ:

ಐದು ವರ್ಷಕ್ಕೆ ಸಿಂಗಲ್ ಪ್ರೀಮಿಯಂ ಪಾವತಿಸುವ 75 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಪ್ರೀಮಿಯಂ ಮೊತ್ತ 2901 ರೂ. ನಿಗದಿ ಮಾಡಲಾಗಿದೆ. ಅದೇ ರೀತಿ 75 ಸಿಸಿಯಿಂದ 150 ಸಿಸಿ ವರೆಗಿನ ದ್ವಿಚಕ್ರ ವಾಹನಗಳಿಗೆ ಐದು ವರ್ಷದ ಸಿಂಗಲ್ ಪ್ರೀಮಿಯಂ ದರ 3851 ರೂ. ನಿಗದಿ ಮಾಡಲಾಗಿದೆ. 150 ರಿಂದ 350 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ 7,365 ರೂ. ಹಾಗೂ 350 ಸಿಸಿಗಿಂತಲೂ ಮೇಲ್ಪಟ್ಟ ದ್ವಿಚಕ್ರ ವಾಹನಗಳ ಐದು ವರ್ಷದ ವಾಹನ ವಿಮೆ ಪ್ರೀಮಿಯಂ ದರ 15,117 ರೂ. ಫಿಕ್ಸ್ ಮಾಡಲಾಗಿದೆ.

ಕಡಿಮೆ ಸಾಮರ್ಥ್ಯದ EV ವಾಹನಗಳಿಗೆ ಕಡಿಮೆ ಶುಲ್ಕ:

ಕಡಿಮೆ ಸಾಮರ್ಥ್ಯದ EV ವಾಹನಗಳಿಗೆ ಕಡಿಮೆ ಶುಲ್ಕ:

ನೂತನವಾಗಿ ಖರೀದಿ ಮಾಡುವ ಎಲೆಕ್ಟ್ರಿಕ್ ವಾಹನಗಳ ಮೂರು ವರ್ಷದ ಪ್ರೀಮಿಯಂ ದರ (30 KW ಸಾಮರ್ಥ್ಯ) 5543 ರೂ. 30 ಕೆವಿ ಸಾಮರ್ಥ್ಯ ಮೀರಿದ ಹಾಗೂ 65 ಕೆವಿ ಸಾಮರ್ಥ್ಯದ ಒಳಗಿನ ಎಲೆಕ್ಟ್ರಿಕ್ ವಾಹನಗಳ ಮೂರು ವರ್ಷದ ಪ್ರೀಮಿಯಂ 9,044 ರೂ. ಆಗಲಿದೆ. 65 ಕೆವಿ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಎಲೆಕ್ಟ್ರಿಕ್ ವಾಹನಗಳ ಮೂರು ವರ್ಷದ ವಿಮಾ ಪ್ರೀಮಿಯಂ ದರ 20,907 ರೂ.ಗೆ ನಿಗದಿ ಮಾಡಲಾಗಿದೆ.

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬಂಪರ್ ಕೊಡುಗೆ:

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬಂಪರ್ ಕೊಡುಗೆ:

ನೂತನ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಐದು ವರ್ಷದ ಮೋಟಾರು ವಾಹನ ಪ್ರೀಮಿಯಂ ದರ (3KV) 2,466 ರೂ. ಫಿಕ್ಸ ಮಾಡಲಾಗಿದೆ. 3 KV ಸಾಮರ್ಥ್ಯಕ್ಕಿಂತಲೂ ಹೆಚ್ಚಿದ, 7KV ಒಳಗಿನ ಸಾಮರ್ಥ್ಯದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ವಿಮಾ ಪ್ರೀಮಿಯಂ ದರ 3,273 ರೂ. ನಿಗದಿ ಮಾಡಲಾಗಿದೆ. 7 ರಿಂದ 16 ಕೆವಿ ಸಾಮರ್ಥ್ಯದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಐದು ವರ್ಷದ ವಾಹನ ಪ್ರೀಮಿಯಂ ದರ 6,260 ರೂ. ಹಾಗೂ ಅದಕ್ಕೂ ಮೇಲ್ಪಟ್ಟ ಸಾಮರ್ಥ್ಯದ ಇವಿ ವಾಹನಗಳಿಗೆ 12,849 ರೂ. ಗೆ ಪರಿಷ್ಕರಿಸಲಾಗಿದೆ. ಈ ಹಿಂದಿನ ಪ್ರೀಮಿಯಂಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ವಾಹನಗಳ ವಿಮಾ ಪ್ರೀಮಿಯಂ ದರ ಕಡಿಮೆ ಮಾಡಲಾಗಿದೆ. ಈ ಮೂಲಕ ವಿಮೆ ಪ್ರೀಮಿಯಂ ಮೂಲಕವೂ ಎಲೆಕ್ಟ್ರಿಕ್ ವಾಹನ ಮಾರಾಟಕ್ಕೆ ಕೇಂದ್ರ ಸರ್ಕಾರ ಪ್ರತ್ಸಾಹಿಸುವ ನಿಟ್ಟಿನಲ್ಲಿ ನಾನಾ ಸಾಹಸ ಮಾಡುತ್ತಲೇ ಇದೆ.

English summary
Government of India given green signal to hike vehicles insurance rates. New vehicle insurance rates combo offer here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X