ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಅಕ್ರಮ-ಸಕ್ರಮ ಗಡುವು ವಿಸ್ತರಣೆ

|
Google Oneindia Kannada News

ಬೆಂಗಳೂರು, ಏ. 24 : ಗ್ರಾಮೀಣ ಪ್ರದೇಶಗಳಲ್ಲಿ ಕಂದಾಯ ಜಮೀನುಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳನ್ನು ಸಕ್ರಮಗೊಳಿಸಲು ಇರುವ ಗಡುವನ್ನು ವಿಸ್ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ತಿಳಿಸಿದ್ದಾರೆ. ಈ ಕುರಿತ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ವಿ.ಶ್ರೀನಿವಾಸ ಪ್ರಸಾದ್, ಅಕ್ರಮ ಮನೆಗಳ ಸಕ್ರಮಕ್ಕೆ ಮಾರ್ಚ್‌ 3ರ ಗಡುವು ನೀಡಲಾಗಿತ್ತು. ಈ ಗಡುವನ್ನು ಇನ್ನೂ ಎರಡು ತಿಂಗಳು ಅವಧಿಗೆ ವಿಸ್ತರಣೆ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದರು.

V Srinivas Prasad

ಅಕ್ರಮ-ಸಕ್ರಮಕ್ಕೆ ವಿಧಿಸಿದ್ದ ಗಡುವು ವಿಸ್ತರಣೆ ಮಾಡುವಂತೆ ಸಾಕಷ್ಟು ಒತ್ತಾಯ ಬಂದಿತ್ತು. ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ವಿಸ್ತರಣೆ ಮಾಡಲು ಅವಕಾಶ ದೊರಕಿರಲಿಲ್ಲ. ಸದ್ಯ ಮೇ 16ರಂದು ನೀತಿ ಸಂಹಿತೆ ಮುಗಿದ ಬಳಿಕ ಗಡುವನ್ನು ವಿಸ್ತರಿಸುವ ಕುರಿತು ಆದೇಶ ಹೊರಡಿಸುವ ಬಗ್ಗೆ ಆಲೋಚನೆ ನಡೆದಿದೆ ಎಂದು ಹೇಳಿದರು. [ಅಕ್ರಮ-ಸಕ್ರಮ ಎಂದರೇನು ತಿಳಿದಿರಲಿ]

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಹಾಗೂ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಅಕ್ರಮವಾಗಿ ಬಡವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಭೂ ಕಂದಾಯ ಕಾಯ್ದೆಯ ನಿಯಮ 94 ಸಿ(ಸಿ) ಅಡಿ ಇವುಗಳನ್ನು ಸಕ್ರಮ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು. [ಮತ್ತೆ ಇಣುಕುತ್ತಿದೆ ಅಕ್ರಮ-ಸಕ್ರಮದ ಭೂತ]

ನಗರ ಪ್ರದೇಶಗಳ ಕಥೆ ಏನು : ಗ್ರಾಮೀಣ ಪ್ರದೇಶದ ಅಕ್ರಮ-ಸಕ್ರಮಕ್ಕೆ ಸರ್ಕಾರ ಅವಕಾಶ ನೀಡಿದೆ. ಆದರೆ, ನಗರ ಪ್ರದೇಶಗಳಲ್ಲಿ ಆಕ್ರಮ ಮನೆಗಳನ್ನು ಸಕ್ರಮಗೊಳಿಸುವ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ. ವಿಧಾನಪರಿಷತ್‌ ನಲ್ಲಿ ಒಪ್ಪಿಗೆ ಪಡೆಯಬೇಕಾಗಿದ್ದು, ಪ್ರತಿಪಕ್ಷಗಳ ಜತೆ ಚರ್ಚಿಸಿ ವಿಧೇಯಕಕ್ಕೆ ಒಪ್ಪಿಗೆ ಪಡೆಯಲಾಗುವುದು ಎಂದು ಸಚಿವರು ಹೇಳಿದರು.

English summary
The Karnataka government proposed to extend the dead line for regularization of unauthorized constructions on government land in rural Karnataka said, Revenue minister V Shrinivas Prasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X