ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಆಸ್ಪತ್ರೆಗಳ ಒತ್ತಾಯಕ್ಕೆ ಮಣಿದು ಸಿಟಿ ಸ್ಕ್ಯಾನ್ ದರ ಹೆಚ್ಚಿಸಿದ ಸರ್ಕಾರ

|
Google Oneindia Kannada News

ಬೆಂಗಳೂರು, ಮೇ 08: ಖಾಸಗಿ ಆಸ್ಪತ್ರೆಗಳ ಒತ್ತಾಯಕ್ಕೆ ಮಣಿದು ರಾಜ್ಯ ಸರ್ಕಾರ ಸಿಟಿ ಸ್ಕ್ಯಾನ್ ದರವನ್ನು ಮತ್ತೆ ಹೆಚ್ಚಳ ಮಾಡಿದೆ.

ಶುಕ್ರವಾರವಷ್ಟೇ ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿಸ್ಕ್ಯಾನ್ ದರವನ್ನು 1500ರೂ.ಗೆ ನಿಗದಿಪಡಿಸಿದ್ದ ಸರ್ಕಾರ, ಇದೀಗ ಖಾಸಗಿ ಆಸ್ಪತ್ರೆಗಳ ಒತ್ತಾಯದಿಂದ ಅದನ್ನು 2500ರೂ.ಗೆ ಏರಿಕೆ ಮಾಡಿದೆ.

ಹೆಚ್ಚುವರಿ ಹಣ ವಸೂಲಿಗೆ ಕಡಿವಾಣ, ಸಿಟಿ ಸ್ಕ್ಯಾನಿಂಗ್‌ಗೆ ದರ ನಿಗದಿ ಮಾಡಿದ ಸರ್ಕಾರ ಹೆಚ್ಚುವರಿ ಹಣ ವಸೂಲಿಗೆ ಕಡಿವಾಣ, ಸಿಟಿ ಸ್ಕ್ಯಾನಿಂಗ್‌ಗೆ ದರ ನಿಗದಿ ಮಾಡಿದ ಸರ್ಕಾರ

ಕೊರೊನಾ ರೋಗಿಗಳಲ್ಲಿ ಶ್ವಾಸಕೋಶ ಸೋಂಕಿನ ಪ್ರಮಾಣ ತಿಳಿಯಲು ಸಿಟಿ ಸ್ಕ್ಯಾನ್ ಮತ್ತು ಎಕ್ಸ್‌ರೇ ಮಾಡಿಸಲಾಗುತ್ತದೆ.ಸಾಮಾನ್ಯ ಸಂದರ್ಭದಲ್ಲಿ 2 ಸಾವಿರ ರೂ.ನಿಂದ 3 ಸಾವಿರ ರೂ. ಇದ್ದ ದರ 6ಸಾವಿರದಿಂದ 8ಸಾವಿರಕ್ಕೆ ಏರಿಕೆಯಾಗಿತ್ತು.

Karnataka Government Increases CT Scan Prices In Private Hospitals

ಈ ರೀತಿ ಪ್ರಯೋಗಾಲಯಗಳು ಜನರನ್ನು ಶೋಷಣೆ ಮಾಡುತ್ತವೆ ಎಂಬ ದೂರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ದರವನ್ನು 1500ರೂ,ಗೆ ಇಳಿಕೆ ಮಾಡಲಾಗಿತ್ತು. ಹಾಗೂ ಸಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು.

Recommended Video

ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ವ್ಯವಸ್ಥೆ ! | Oneindia Kannada

ಬಿಪಿಎಲ್ ಕಾರ್ಡ್‌ದಾರರಿಗೆ 1500ರೂ. ನಿಗದಿಪಡಿಸಿ ಆದೇಶ ಹೊರಡಿಸಿದೆ. ಎದೆಯ ಡಿಜಿಟಲ್ ಅಥವಾ ಸಾಮಾನ್ಯ ಸ್ವರೂಪದ ಎಕ್ಸ್‌ರೇಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಎಕ್ಸ್‌ರೇಗೆ ಗರಿಷ್ಠ 250ರೂ. ದರ ನಿಗದಿಪಡಿಸಲಾಗಿದೆ.

English summary
Karnataka Government Increases CT Scan Prices In Private Hospitals,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X