ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಚರಿಕೆ ಕೊಟ್ಟರೂ ಕೇಳಲಿಲ್ಲ; ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ನಿರ್ಲಕ್ಷಿಸಿತ್ತೇ ಸರ್ಕಾರ?

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಕೊರೊನಾ ಎರಡನೇ ಅಲೆಯ ಬಿಗಿ ಮುಷ್ಟಿಯಲ್ಲೀಗ ಕರ್ನಾಟಕ ರಾಜ್ಯವಿದೆ. ಆದರೆ ಈ ಪರಿಸ್ಥಿತಿಗೆ ಸರ್ಕಾರದ ನಿರ್ಲಕ್ಷ್ಯ ಬಹುಮುಖ್ಯ ಕಾರಣ. ಈ ಮುನ್ನವೇ ಕೊರೊನಾ ಎರಡನೇ ಅಲೆ ಕುರಿತು ಎಚ್ಚರಿಕೆ ನೀಡಿದ್ದೆವು. ಆದರೆ ಸರ್ಕಾರ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ ಎಂದು ತಾಂತ್ರಿಕ ಸಲಹಾ ಸಮಿತಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷದ ನವೆಂಬರ್ 30ರಂದೇ ಕೊರೊನಾ ಎರಡನೇ ಅಲೆ ಬಗ್ಗೆ ತಜ್ಞರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಆಗಲೇ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಆ ಅವಧಿಯನ್ನು ಬಿಟ್ಟುಬಿಟ್ಟಿತು. ಜೊತೆಗೆ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಸೋಂಕು ತನ್ನ ಪರಿಣಾಮ ಬೀರಲು ಆರಂಭಿಸಿತು. ಸರ್ಕಾರಕ್ಕೆ ಕೊರೊನಾ ನಿಯಂತ್ರಣಕ್ಕೆ ಸಿದ್ಧವಾಗಲು ಸಮಯ ಇತ್ತು. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ ಎಂದು ಪಬ್ಲಿಕ್ ಹೆಲ್ತ್‌ ಫೌಂಡೇಷನ್‌ನ ಎಪಿಡೆಮಿಯಾಲಜಿಸ್ಟ್‌ ಡಾ. ಗಿರಿಧರ ಬಾಬು ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ...

"ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಳ್ಳಬೇಡಿ"

"ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಳ್ಳಲಿಲ್ಲ"

ಕೊರೊನಾ ಸ್ಥಿತಿಗತಿ ಕುರಿತು ರಾಜ್ಯ ಸರ್ಕಾರಕ್ಕೆ ಬಾಬು ಅವರು ಸಲಹಾಗಾರರಾಗಿದ್ದಾರೆ. ಕೊರೊನಾ ಇದೀಗ ರಾಜ್ಯದಲ್ಲಿ ಮಿತಿ ಮೀರುತ್ತಿದ್ದು, ಬಾಬು ಅವರಂತೆ ಹಲವು ತಜ್ಞರು ಸರ್ಕಾರದ ಕಾರ್ಯವೈಖರಿ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ಹೀಗೆ ಮಿತಿ ಮೀರಿ ಹೋಗಲು ಸರ್ಕಾರ ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳದಿರುವುದೇ ಕಾರಣ ಎಂದು ಹೇಳಿದ್ದಾರೆ. ಎರಡನೇ ಅಲೆಯಲ್ಲಿ ಕೊರೊನಾ ಹೆಚ್ಚಳವಾಗುವ ಸೂಚನೆ ನೀಡಿ ಅದಕ್ಕಾಗಿ ಹಲವು ಕಠಿಣ ಕ್ರಮಗಳ ಶಿಫಾರಸ್ಸುಗಳನ್ನೂ ತಾಂತ್ರಿಕ ಸಮಿತಿ ನೀಡಿತ್ತು. ಆದರೆ ಸರ್ಕಾರ ಅದನ್ನು ನಿರ್ಲಕ್ಷಿಸಿತು. ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದರೂ ಎಚ್ಚೆತ್ತುಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.

 ಮೊದಲ ಅಲೆಗಿಂತ 100% ಹೆಚ್ಚು ಪ್ರಕರಣಗಳು

ಮೊದಲ ಅಲೆಗಿಂತ 100% ಹೆಚ್ಚು ಪ್ರಕರಣಗಳು

ಈ ಹಿಂದಿನ ಪ್ರಕರಣಗಳ ಅಂಕಿ ಸಂಖ್ಯೆಯನ್ನು ಮುಂದಿಟ್ಟುಕೊಂಡೇ ಕೊರೊನಾ ಎರಡನೇ ಅಲೆ ಬಗ್ಗೆ ಸರ್ಕಾರ ಯೋಚಿಸುತ್ತಿತ್ತು. ಎರಡನೇ ಅಲೆಯ ಎರಡನೇ ದಿನ, ಮೊದಲ ಅಲೆಗಿಂತ ದಾಖಲೆಯ ಮಟ್ಟವನ್ನು ಮೀರಿತು. ಮೊದಲ ಅಲೆಗಿಂತ ಈಗ 100% ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಸರ್ಕಾರ ತಜ್ಞರ ಮಾತನ್ನು ಕೇಳಲೇ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ.

"ರಾಜ್ಯ ಬಜೆಟ್‌ನಲ್ಲಿಯೂ ಆರೋಗ್ಯ ಕ್ಷೇತ್ರಕ್ಕೆ ಪ್ರಾಮುಖ್ಯ ನೀಡಿಲ್ಲ"

ರಾಜ್ಯ ಬಜೆಟ್‌ನಲ್ಲಿಯೂ ಆರೋಗ್ಯ ಕ್ಷೇತ್ರಕ್ಕೆ ನೀಡಿದ ಅನುದಾನ ಸರ್ಕಾರ ಕೊರೊನಾ ಸೋಂಕಿನ ಎರಡನೇ ಅಲೆ ನಿರ್ವಹಣೆಗೆ ಸಿದ್ಧವಿಲ್ಲ ಎಂಬುದನ್ನು ತೋರಿಸಿತ್ತು. ಆರೋಗ್ಯ ಕ್ಷೇತ್ರದಲ್ಲಿನ ಅನುದಾನವು 4% ರಷ್ಟೇ ಉಳಿದಿದೆ. ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಐಸಿಯುಗಳನ್ನು ನಿರ್ಮಿಸುವುದಾಗಿ ತಿಳಿಸಿತ್ತು. ಆದರೆ ಅವೆಲ್ಲವೂ ಶೀಘ್ರ ಆಗುವುದಿಲ್ಲ. ಎರಡನೇ ಅಲೆ ಬರುತ್ತದೆ ಎಂಬುದು ಗೊತ್ತಿದ್ದರೂ ಆಸ್ಪತ್ರೆಗಳ ಸೌಲಭ್ಯವನ್ನು ಏಕೆ ಹೆಚ್ಚಿಸಲಿಲ್ಲ ಎಂದು ಬೆಂಗಳೂರಿನ ಮೆಡಿಕಲ್ ಕಾಲೇಜಿನ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.

"ಬೆಂಗಳೂರಿನಲ್ಲಿ ಲಾಕ್‌ಡೌನ್ ಹೇರಲೇಬೇಕು"

ಬೆಂಗಳೂರಿನಲ್ಲಿ ಲಾಕ್‌ಡೌನ್ ಹೇರಲೇಬೇಕು. ಬೇರೆ ದಾರಿಯೇ ಇಲ್ಲ. ಇನ್ನಷ್ಟು ಪ್ರಕರಣಗಳು ಹೆಚ್ಚುತ್ತಿದ್ದು, ಲಾಕ್‌ಡೌನ್ ಹೇರಿ, ಸರ್ಕಾರ ಇನ್ನಷ್ಟು ಸಿದ್ಧತೆಗಳೆಡೆಗೆ ನೋಡಿಕೊಳ್ಳಬೇಕು ಎಂದು ತಾಂತ್ರಿಕ ಸಮಿತಿಯ ಮತ್ತೊಬ್ಬ ಸದಸ್ಯರು ಹೇಳಿದ್ದಾರೆ.
ಕರ್ನಾಟಕದಲ್ಲಿ ಸೋಮವಾರ 15,785 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿನ ಒಟ್ಟು ಖಚಿತ ಪ್ರಕರಣಗಳ ಸಂಖ್ಯೆ 11,76,850ಕ್ಕೆ ಏರಿಕೆಯಾಗಿದೆ.

Recommended Video

ಸರ್ಕಾರದ ಹೊಸ ಕಟ್ಟು ನಿಟ್ಟಿನ ಕ್ರಮ ! | Oneindia Kannada

English summary
A senior member of the Technical Advisory Committee (TAC) said the government was warned about the second wave, but it has ignored,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X