ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ಸ್ಪಷ್ಟನೆ; ಕನಕ ಜಯಂತಿಗೆ ಸರ್ಕಾರಿ ರಜೆ ಇದೆ

|
Google Oneindia Kannada News

ಬೆಂಗಳೂರು, ನವೆಂಬರ್ 13 : ಕನಕಜಯಂತಿ ರಜೆಯನ್ನು ಕರ್ನಾಟಕ ಸರ್ಕಾರ ರದ್ದುಗೊಳಿಸಿಲ್ಲ. ನವೆಂಬರ್ 15ರಂದು ಸರ್ಕಾರದ ವತಿಯಿಂದ ಕನಕ ಜಯಂತಿ ಆಚರಣೆ ಮಾಡಲಾಗುತ್ತದೆ.

ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ ಈ ಕುರಿತು ಸ್ಪಷ್ಟನೆ ನೀಡಿದರು. "ಕನಕದಾಸ ಜಯಂತಿ ಪ್ರಯುಕ್ತ ಇರುವ ರಜೆಯನ್ನು ಕರ್ನಾಟಕ ಸರ್ಕಾರ ಹಿಂಪಡೆದಿಲ್ಲ. ಆ ದಿನ ಸರ್ಕಾರಿ ರಜೆ ಇದೆ" ಎಂದು ಹೇಳಿದರು.

ಕರ್ನಾಟಕ ಸರ್ಕಾರದ 2020ರ ರಜೆ ದಿನಗಳ ತಾತ್ಕಲಿಕ ಪಟ್ಟಿಕರ್ನಾಟಕ ಸರ್ಕಾರದ 2020ರ ರಜೆ ದಿನಗಳ ತಾತ್ಕಲಿಕ ಪಟ್ಟಿ

"ನವೆಂಬರ್ 15ರ ಶುಕ್ರವಾರ ಕನಕದಾಸ ಜಯಂತಿ ಆಚರಣೆ ಮಾಡಲಾಗುತ್ತದೆ. ರಜೆ ಬಗ್ಗೆ ಖಾಸಗಿ ಕಂಪನಿ/ಶಿಕ್ಷಣ ಸಂಸ್ಥೆಗಳು ಬೇರೆ ತೀರ್ಮಾನ ಕೈಗೊಂಡಿದ್ದರೆ ಅದು ಆಯಾ ಸಂಸ್ಥೆಯ ನಿರ್ಧಾರವಾಗಿರುತ್ತದೆ" ಎಂದರು.

‌ಅಮಾವಾಸ್ಯೆ ರಜೆ ಸಿಕ್ಕಿ, ಹೊತ್ತು ಹೋಗದೆ ಬ್ರಹ್ಮ ಕಿರುಬೆರಳಲಿ ಕೆತ್ತಿದ್ದೇ ಮಾತಂಗಿ‌ಅಮಾವಾಸ್ಯೆ ರಜೆ ಸಿಕ್ಕಿ, ಹೊತ್ತು ಹೋಗದೆ ಬ್ರಹ್ಮ ಕಿರುಬೆರಳಲಿ ಕೆತ್ತಿದ್ದೇ ಮಾತಂಗಿ

Government Holiday On Kanaka Jayanthi November 15

ಕರ್ನಾಟಕ ಸರ್ಕಾರ ಹಲವು ಜಯಂತಿಗಳ ರಜೆಗಳನ್ನು ರದ್ದುಪಡಿಸಲು ಹೊರಟಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಆದರೂ ಸರ್ಕಾರಿ ರಜೆ ದಿನಗಳನ್ನು ಕಡಿತಗೊಳಿಸಿತ್ತು. ಆದ್ದರಿಂದ, ಕನಕಜಯಂತಿ ರಜೆ ಬಗ್ಗೆ ಗೊಂದಲ ಉಂಟಾಗಿತ್ತು.

2020ನೇ ಸಾಲಿನ ಸರ್ಕಾರಿ ರಜೆ ದಿನಗಳ ಪಟ್ಟಿಯನ್ನು ನವೆಂಬರ್ ಅಂತ್ಯದಲ್ಲಿ ಸರ್ಕಾರ ಬಿಡುಗಡೆ ಮಾಡಲಿದೆ. ಮುಂದಿನ ವರ್ಷದಲ್ಲಿ ಎಷ್ಟು ರಜೆಗಳು ಸಿಗಲಿವೆ? ಎಂದು ಕಾದು ನೋಡಬೇಕಿದೆ.

English summary
Karnataka Deputy Chief minister Dr. Ashwath Narayan clarified that govt not cancelled Kanaka Jayanthi holiday. Government holiday on November 15, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X