ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸದ್ಗುರು ಹೆಸರಿನ ವ್ಯಕ್ತಿಗೂ ದೇವನಹಳ್ಳಿ ಸಮೀಪ ಹತ್ತಾರು ಎಕರೆ ಭೂಮಿ'

By ಡಾ. ಎಚ್.ಸಿ.ಮಹದೇವಪ್ಪ
|
Google Oneindia Kannada News

ದೇಶದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣದ ನಂತರದಲ್ಲಿ ಇಲ್ಲಿ ಆಡಳಿತ ನಡೆಸಿದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು "ಉಳುವವನೇ ಭೂಮಿ ಒಡೆಯ" ಹಾಗೂ ಭೂ ಸುಧಾರಣಾ ಕಾಯ್ದೆಗಳನ್ನು ಜಾರಿಗೊಳಿಸಿ ಭೂಮಿಯೇ ಇಲ್ಲದೇ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಭೂಮಿಯನ್ನು ನೀಡುವ ಕೆಲಸ ಮಾಡಿದೆ.

ಈ ಕೆಲಸ ಪರಿಣಾಮವೇ ಭಾರತದಲ್ಲಿ ಕ್ರಮೇಣ ಆಹಾರ ಧಾನ್ಯಗಳ ಉತ್ಪಾದನೆ ಮತ್ತು ರೈತರ ಸ್ವಾವಲಂಬನೆಯ ಬದುಕೂ ಕೂಡಾ ಸಾಧ್ಯವಾಗಿದೆ ಎಂಬುದು ಭೂಮಿಯನ್ನು ಪಡೆದು ಬದುಕುತ್ತಿರುವ ಬಹಳಷ್ಟು ಜನರಿಗೆ ತಿಳಿದಿರುವ ಸಂಗತಿ.

'ಕಾವೇರಿ ಕೂಗು' ಯೋಜನೆಗೆ ಹಣ ಸಂಗ್ರಹ: ಸದ್ಗುರು ಫೌಂಡೇಷನ್‌ಗೆ ಹೈಕೋರ್ಟ್ ತರಾಟೆ'ಕಾವೇರಿ ಕೂಗು' ಯೋಜನೆಗೆ ಹಣ ಸಂಗ್ರಹ: ಸದ್ಗುರು ಫೌಂಡೇಷನ್‌ಗೆ ಹೈಕೋರ್ಟ್ ತರಾಟೆ

ಆದರೆ ಇದೀಗ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗರು ಕೋಟಿಗಟ್ಟಲೇ ಬೆಲೆ ಬಾಳುವ ಸರ್ಕಾರಿ ಜಮೀನು, ಗೋಮಾಳ ಇತ್ಯಾದಿಗಳನ್ನು RSS ಪ್ರೇರಿತ ವಿವಿಧ ಸಂಘ ಸಂಸ್ಥೆಗಳಿಗೆ ನಿರಂತರವಾಗಿ ನೀಡುತ್ತಿದ್ದು ಅವುಗಳ ಜಿಲ್ಲಾವಾರು ಶಾಖೆಗಳ ಮೂಲ ಸೌಕರ್ಯ ಹೆಚ್ಚಿಸುವ ಕೆಲಸಕ್ಕೆ ಮುಂದಾಗಿದೆ.

Government Has Reportedly Allotted To Land To Isha Foundation, Said Dr. H C Mahadeppa

ಇದೀಗ ತಮಿಳುನಾಡಿನಲ್ಲಿ ನೂರಾರು ಎಕರೆಯಲ್ಲಿ ಇಶಾ ಎಂಬ ಧಾರ್ಮಿಕ ಕೇಂದ್ರವನ್ನು ಹೊಂದಿರುವ ಸದ್ಗುರು ಹೆಸರಿನ ವ್ಯಕ್ತಿಗೂ ಕೂಡಾ ದೇವನಹಳ್ಳಿ ಸಮೀಪ ಹತ್ತಾರು ಎಕರೆ ಭೂಮಿಯನ್ನು ನೀಡಿರುವ ಬಗ್ಗೆ ಮಾಹಿತಿ ಇದೆ.

ಭೂ ರಹಿತ ರೈತರು, ದಲಿತರು ಹಾಗೂ ಅಲೆಮಾರಿ ಸಮುದಾಯದ ಎಷ್ಟೋ ಮಂದಿ ತುಂಡು ಭೂಮಿಗಾಗಿ ಅರ್ಜಿ ಸಲ್ಲಿಸಿ ಇನ್ನೂ ಕಾಯುತ್ತಾ ಇದ್ದರೂ ಕೂಡಾ ಅವರ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದೇ ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಟ್ಟು ಕೈಚೆಲ್ಲಿರುವ ಸರ್ಕಾರ RSS ಪ್ರೇರಿತ ಸಂಸ್ಥೆಗಳಿಗೆ ಮಾತ್ರ ಬೇಕಾಬಿಟ್ಟಿಯಾಗಿ ಭೂಮಿಯನ್ನು ಹಂಚಿಕೆ ಮಾಡುತ್ತಿದೆ.

Government Has Reportedly Allotted To Land To Isha Foundation, Said Dr. H C Mahadeppa

ಇನ್ನು ಅರಣ್ಯ ಹಾಗೂ ಮಣ್ಣು ರಕ್ಷಣೆಯ ಅಭಿಯಾನ ಮಾಡುವ ಸದ್ಗುರು ಎಂಬ ಹೆಸರಿನ ಈತ ಅದೇ ಭೂಮಿಯನ್ನು ಪಡೆದುಕೊಂಡಿರುವುದು ಹಾಸ್ಯಾಸ್ಪದ ಸಂಗತಿ ಆಗಿದೆ. ಬಾಬಾ ಸಾಹೇಬರು ಹೇಳಿದಂತೆ ಸರ್ಕಾರದ ಜಮೀನು ಆದಷ್ಟು ಸರ್ಕಾರದ ಬಳಿಯೇ ಇದ್ದಾಗ ಮಾತ್ರ ಸರ್ಕಾರವೂ ಸುಭದ್ರವಾಗಿರುತ್ತದೆ ಮತ್ತು ಅದರಿಂದ ಬಡವರಿಗೂ ಸಹಾಯ ಮಾಡಲು ಸಾಧ್ಯವಾಗುತ್ತದೆ!

English summary
Government Has Reportedly Allotted To Land To Isha Foundation, Said Dr. H C Mahadeppa. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X