ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ 19: ಖಾಸಗಿ ಆ್ಯಂಬುಲೆನ್ಸ್‌ಗಳು ಇನ್ನು ಬೇಕಾಬಿಟ್ಟಿ ಬಾಡಿಗೆ ಹೇಳುವಂತಿಲ್ಲ!

|
Google Oneindia Kannada News

ಬೆಂಗಳೂರು, ಮೇ 21: ಕೊರೊನಾ ವೈರಸ್‌ನ ಎರಡನೇ ಅಲೆಯಲ್ಲಿ ನಲುಗಿರುವ ಸಂದರ್ಭದಲ್ಲಿ ಕೆಲ ಖಾಸಗೀ ಆ್ಯಂಬುಲೆನ್ಸ್‌ಗಳು ಅಕ್ಷರಶಃ ಸುಲಿಗೆಗೆ ಇಳಿದಿವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಖಾಸಗೀ ಆ್ಯಂಬುಲೆನ್ಸ್‌ಗಳಿಗೆ ರಾಜ್ಯಸರ್ಕಾರ ದರವನ್ನು ನಿಗದಿಪಡಿಸಿ ಆದೇಶವನ್ನು ಹೊರಡಿಸಿದೆ.

ಎರಡು ವಿಭಾಗದಲ್ಲಿ ಆ್ಯಂಬುಲೆನ್ಸ್‌ಗಳಿಗೆ ದರವನ್ನು ನಿಗದಿ ಪಡಿಸಲಾಗಿದೆ. ಸಾಮಾನ್ಯ ಆ್ಯಂಬುಲೆನ್ಸ್‌ಗಳಿಗೆ (ಪೇಶೆಂಟ್ ಟ್ರಾನ್ಸ್‌ಪೋರ್ಟ್ ಆ್ಯಂಬುಲೆನ್ಸ್)ಮೊದಲ 10 ಕಿ.ಮೀಟರ್‌ಗಳಿಗೆ 1500 ರೂಪಾಯಿ ಗರಿಷ್ಟದರವನ್ನು ನಿಗದಿಗೊಳಿಸಲಾಗಿದೆ. 10 ನಂತರದ ಪ್ರಯಾಣಕ್ಕೆ ಪ್ರತಿ ಕಿ.ಮೀಗೆ 120 ರೂಪಾಯಿ ನಿಗದಿಗೊಳಿಸಲಾಗಿದೆ. ಇದು ಆಮ್ಲಜನಕ, ಪಿಪಿಇ ಕಿಟ್, ಗ್ಲೌಸ್, ಮಾಸ್ಕ್, ಶೀಲ್ಡ್, ಸ್ಯಾನಿಟೈಸರ್, ಡ್ರೈವರ್ ಈ ಎಲ್ಲವನ್ನೂ ಒಳಗೊಂಡಿರುತ್ತದೆ. ಗಂಟೆಗೆ 200 ರೂಪಾಯಿ ವೈಟಿಂಗ್ ಚಾರ್ಜ್ ಎಂದು ನಿಗದಿಗೊಳಿಸಲಾಗಿದೆ.

ಗಾಳಿಯಲ್ಲಿ ವೈರಸ್ 10 ಮೀಟರ್‌ವರೆಗೂ ಹರಡುತ್ತದೆ; ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?ಗಾಳಿಯಲ್ಲಿ ವೈರಸ್ 10 ಮೀಟರ್‌ವರೆಗೂ ಹರಡುತ್ತದೆ; ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?

ಇನ್ನು ಬೇಸಿಕ್ ಲೈಫ್ ಸಪೋರ್ಟ್ ಆ್ಯಂಬುಲೆನ್ಸ್‌(ಬಿಎಲ್‌ಎಸ್)ಗಳಿಗೆ ಮೊದಲ 10 ಕಿಮೀಗಳಿಗೆ 2000 ರೂಪಾಯಿ ನಿಗದಿಗೊಳಿಸಿದ್ದು 10 ಕಿಮೀ ನಂತರದ ಪ್ರಯಾಣಕ್ಕೆ ಪ್ರತಿ ಕಿಮೀಗೆ ಗರಿಷ್ಟ 120 ರೂಪಾಯಿ ವಿಧಿಸಲು ಅವಕಾಶ ನೀಡಲಾಗಿದೆ. ಇದು ಕೂಡ ದು ಆಮ್ಲಜನಕ, ಪಿಪಿಇ ಕಿಟ್, ಗ್ಲೌಸ್, ಮಾಸ್ಕ್, ಶೀಲ್ಡ್, ಸ್ಯಾನಿಟೈಸರ್, ಡ್ರೈವರ್ ಈ ಎಲ್ಲವನ್ನೂ ಒಳಗೊಂಡಿರುತ್ತದೆ. ವೈಟಿಂಗ್ ಚಾರ್ಚ್ ಗಂಟೆಗೆ 250 ರೂ ನಿಗದಿಗೊಳಿಸಿದೆ.

Karnataka Government Fixes Ambulance Charges For Covid Patients. Check Rates Here

Recommended Video

ಕೊರೋನಾ ರೋಗಿಗಳ ಮುಂದೆ ಆಸ್ಪತ್ರೆ ಸಿಬ್ಬಂದಿಗಳ ಮಸ್ತ್‌ ಡ್ಯಾನ್ಸ್ | Oneindia Kannada

ಈ ದರ ನಿಗದಿಪಡಿಸಲು ನೋಂದಣಿ ವೆಚ್ಚ, ವಿಮಾ ವೆಚ್ಚ, ಸಿಬ್ಬಂದಿಗಳ ವೆಚ್ಚ, ಟೈರ್‌ಗಳ ವೆಚ್ಚ ಹಾಗೂ ಇತರೆ ವೆಚ್ಚಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಆದೇಶ ಪ್ರತಿಯಲ್ಲಿ ವಿವರಿಸಲಾಗಿದೆ. ಉಪಮುಖ್ಯಮಂತ್ರಿ, ಸಾರಿಗೆ ಸಚಿವರು, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಈ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಈಗ ಅಧಿಕೃತವಾಗಿ ಆದೇಶ ಹೊರಬಿದ್ದಿದೆ.

English summary
Karnataka Government Fixes Ambulance Charges For Coronavirus Patients. Check Rates Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X