ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 62ಕ್ಕೆ ಹೆಚ್ಚಿಸಲು ಆಗ್ರಹ

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 18: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯನ್ನು 60 ರಿಂದ 62ಕ್ಕೆ ಏರಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಹಿತ ರಕ್ಷಣಾ ಸಮಿತಿ ಒತ್ತಾಯಿಸಿದೆ.

ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಪದಾಧಿಕಾರಿಗಳು, ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಇತರೆ ಬೇಡಿಕೆಗಳ ಬಗ್ಗೆ ವರದಿ ನೀಡುವಂತೆ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಮೂರ್ತಿ ನೇತೃತ್ವದ ಆರನೇ ವೇತನ ಆಯೋಗದ ಸಮಿತಿ ನೀಡಿರುವ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ನಿವೃತ್ತಿ ವಯಸ್ಸನ್ನು ಹೆಚ್ಚಿಸದಂತೆ ಶಿಫಾರಸು ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಕೆಂಪರಾಜು ತಿಳಿಸಿದರು.

ಬಜೆಟ್ 2018: ಸಿದ್ದು ಕೊಡುಗೆ, ಸರ್ಕಾರಿ ನೌಕರರಿಗೆ ವೇತನ ಹೆಚ್ಚಳಬಜೆಟ್ 2018: ಸಿದ್ದು ಕೊಡುಗೆ, ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ

ರಾಜ್ಯದಲ್ಲಿ ಈ ಹಿಂದೆ ಮೂರುವರೆ ಕೋಟಿ ಜನಸಂಖ್ಯೆ ಇದ್ದಾಗ 7,73,454 ಲಕ್ಷ ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ಆದರೆ ಈಗ ಜನಸಂಖ್ಯೆ ದ್ವಿಗುಣಗೊಂಡಿದೆ. ಆರು ಕೋಟಿ ಗೂ ಹೆಚ್ಚಾಗಿದೆ. ಇದರನ್ವಯ ಈಗಿರುವ ನೌಕರರ ಸಂಖ್ಯೆ ಕಾರ್ಯ ನಿರ್ವಹಿಸಲು ಕಡಿಮೆಯಾಗಿದೆ. ನೌಕರರ ಮೇಲೆ ಒತ್ತಡ ಕೂಡ ಹೆಚ್ಚಾಗುತ್ತಿದೆ ಎಂದು ಅವರು ತಿಳಿಸಿದರು.

ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ

ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ

ಕಳೆದ ಮಾರ್ಚ್ ವೇಳೆಗೆ ರಾಜ್ಯದಲ್ಲಿ ಎರಡೂವರೆ ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದೆ ಎಂಬ ವರದಿಗಳು ಬಂದಿವೆ. ಇದರ ಜತೆಗೆ 2017-18 ಮತ್ತು 2019 ರಲ್ಲಿ ವಿವಿಧ ಕಾರಣಗಳಿಂದ 40 ಸಾವಿರಕ್ಕೂ ಹೆಚ್ಚು ಮಂದಿ ನಿವೃತ್ತಿ ಹೊಂದಲಿದ್ದಾರೆ.

ಅಂದರೆ ಶೇ.40 ಕ್ಕೂ ಹೆಚ್ಚು ಖಾಲಿ ಹುದ್ದೆಗಳು ಉದ್ಭವಿಸುತ್ತವೆ. ಹೀಗಾದರೆ ಒಟ್ಟಾರೆ ಮೂರು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಾಗುತ್ತಿವೆ. ಇದರಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಂತಾಗುತ್ತದೆ ಎಂದು ಕೆಂಪರಾಜು ವಿವರಿಸಿದರು.

ನೌಕರರಿಗೆ ವಯೋ ನಿವೃತ್ತಿಯಲ್ಲಿ ತಾರತಮ್ಯ

ನೌಕರರಿಗೆ ವಯೋ ನಿವೃತ್ತಿಯಲ್ಲಿ ತಾರತಮ್ಯ

ಈಗಾಗಲೇ ಸರ್ಕಾರವು ವಿವಿಧ ಇಲಾಖೆಯ ನೌಕರರ ವಯೋನಿವೃತ್ತಿ ವಯಸ್ಸನ್ನು 60 ರಿಂದ 62 ಮತ್ತು 65 ವರ್ಷಗಳವರೆಗೆ ಹೆಚ್ಚಿಸಿರುವುದು ಸರ್ಕಾರಿ ಆದೇಶಗಳಿಂದ ದೃಢಪಟ್ಟಿದೆ (ಪ್ರತಿ ಲಗತ್ತಿಸಿದೆ.) ಈ ರೀತಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರಲ್ಲಿ 1.5 ಲಕ್ಷದಷ್ಟು ಸರ್ಕಾರಿ ನೌಕರರು 60 ರಿಂದ 65 ವರ್ಷಗಳ ಅವಧಿಯಲ್ಲಿ ವಯೋನಿವೃತ್ತಿ ಹೊಂದುತ್ತಿರುವುದು ಸರ್ಕಾರಿ ಆದೇಶದಲ್ಲಿ ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಕೇವಲ 2.5 ಲಕ್ಷದಷ್ಟು ಮಾತ್ರ ಸಿಬ್ಬಂದಿಗಳು 60 ವರ್ಷಕ್ಕೆ ನಿವೃತ್ತಿ ಹೊಂದುತ್ತಿರುವುದರಿಂದ ಒಂದೇ ಸರ್ಕಾರದಲ್ಲಿ ವಿವಿಧ ಹಂತದ ನೌಕರರಿಗೆ ವಯೋ ನಿವೃತ್ತಿಯಲ್ಲಿ ತಾರತಮ್ಯ ಉಂಟಾಗುತ್ತದೆ.

ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ

ನಿರುದ್ಯೋಗ ಸಮಸ್ಯೆ ಬಗೆಹರಿಯಲಿದೆ

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದರಿಂದ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಿಕೆಯಲ್ಲಿ ಯಾವುದೇ ರೀತಿಯಲ್ಲೂ ಅಡ್ಡಿಪಡಿಸಿದಂತಾಗುವುದಿಲ್ಲ.

ಕಾರಣ, ಈಗಾಗಲೇ ಖಾಲಿ ಇರುವ 3 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಿದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಅಲ್ಪಮಟ್ಟಿಗೆ ಬಗೆಹರಿಸಬಹುದಾಗಿದೆ. ಖಾಲಿ ಇರುವ ಹುದ್ದೆಗಳನ್ನು ತಕ್ಷಣವೇ ತುಂಬಲು ಕ್ರಮ ಕೈಗೊಂಡರೂ ಸಹ ನೇಮಕಾತಿ ಪ್ರಕ್ರಿಯೆ ಮುಗಿಯಲು 2 ರಿಂದ 3 ವರ್ಷಗಳ ಕಾಲ ಅವಕಾಶ ಬೇಕಾಗಿದೆ.

ಅನುಭವಿ ಸಿಬ್ಬಂದಿಗಳು ಸರ್ಕಾರಕ್ಕೆ ಆಸ್ತಿ

ಅನುಭವಿ ಸಿಬ್ಬಂದಿಗಳು ಸರ್ಕಾರಕ್ಕೆ ಆಸ್ತಿ

ಈ ವೈದ್ಯಕೀಯ ವರದಿಯ ಆಧಾರದಲ್ಲಿ ಹಾಗೂ ಅನುಭವಿ ಸಿಬ್ಬಂದಿಗಳು ಸರ್ಕಾರಕ್ಕೆ ಆಸ್ತಿಯಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರನ ವಯೋನಿವೃತ್ತಿ ವಯಸ್ಸನ್ನು 58 ರಿಂದ 60 ವರ್ಷಕ್ಕೆ ಜುಲೈ 17 ರಂದು 2008 ರಿಂದ ಜಾರಿಗೆ ಬರುವಂತೆ ಜುಲೈ 28 ರಂದು 2008 ರಂದು ಹೆಚ್ಚಿಸಿ ಆದೇಶಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62 ಕ್ಕೆ ಹೆಚ್ಚಿಸುವ ಬಗ್ಗೆ ವೇತನ ಆಯೋಗವು ನೀಡಿರುವ ಅಭಿಪ್ರಾಯವು ವೈಜ್ಞಾನಿಕ ಮತ್ತು ವಾಸ್ತವಿಕ ಅಂಕಿ ಅಂಶಗಳಿಂದ ಕೂಡಿರುವುದಿಲ್ಲ.

ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ಸೀಮಿತ ಸರಿಯಿಲ್ಲ

ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ಸೀಮಿತ ಸರಿಯಿಲ್ಲ

ಈ ಅಂಶಗಳ ಹಿನ್ನೆಲೆಯಲ್ಲಿ 6ನೇ ವೇತನ ಆಯೋಗವು ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ಸೀಮಿತಗೊಳಿಸುವಂತೆ ಮಾಡಿರುವ ಶಿಫಾರಸ್ಸು ತಾರತಮ್ಯ ಮತ್ತು ಅವೈಜ್ಞಾನಿಕವಾಗಿರುತ್ತದೆ.

ಖಾಲಿ ಇರುವ ಹುದ್ದೆಗಳ ಭರ್ತಿ ಮಾಡದೇ ಇದ್ದರೆ ಲಭ್ಯವಿರುವ ಸಿಬ್ಬಂದಿಗಳು ತಮ್ಮ ಕರ್ತವ್ಯದ ಜತೆಗೆ ಹೆಚ್ಚುವರಿ ಒತ್ತಡದಲ್ಲಿ ಸಿಲುಕಬೇಕಾಗುತ್ತದೆ. ಒತ್ತಡದಿಂದ ಸಿಬ್ಬಂದಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಅವರು ಹೇಳಿದರು. ಅನುಭವಿ ಸಿಬ್ಬಂದಿಗಳು ಸರ್ಕಾರಕ್ಕೆ ಆಸ್ತಿಯಾಗಿರುತ್ತಾರೆ.

 2008ರಲ್ಲಿ 58 ರಿಂದ 60 ಕ್ಕೆ ಹೆಚ್ಚಿಸಲಾಗಿತ್ತು

2008ರಲ್ಲಿ 58 ರಿಂದ 60 ಕ್ಕೆ ಹೆಚ್ಚಿಸಲಾಗಿತ್ತು

ಈ ಹಿನ್ನೆಲೆಯಲ್ಲಿ ಸರ್ಕಾರವು ಸರ್ಕಾರಿ ವಯೋನಿವೃತ್ತಿ ವಯಸ್ಸನ್ನು 2008ರಲ್ಲಿ 58 ರಿಂದ 60 ಕ್ಕೆ ಹೆಚ್ಚಿಸಲಾಗಿತ್ತು. ಖಾಲಿ ಇರುವ ಅಂದಾಜು ಮೂರು ಲಕ್ಷಕ್ಕೂ ಹೆಚ್ಚು ಹುದ್ದೆಗಳನ್ನು ಏಕಕಾಲಕ್ಕೆ ನೇಮಿಸಲಾಗುವುದು ಸಾಧ್ಯವಾಗಬಹುದು. ಆದರೂ ಅನುಭವಿ ಸಿಬ್ಬಂದಿ ಕೊರತೆ ಉಂಟಾಗುತ್ತದೆ ಎಂದು ಪದಾಧಿಕಾರಿಗಳು ವಿವರಿಸಿದ್ದಾರೆ.

ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 62ಕ್ಕೆ ಹೆಚ್ಚಿಸಬಾರದು ಎಂಬ ವೇತನ ಆಯೋಗದ ಅಭಿಪ್ರಾಯವು ವೈಜ್ಞಾನಿಕ ಮತ್ತು ವಾಸ್ತವಿಕ ಅಂಶಗಳಿಂದ ಕೂಡಿರುವುದಿಲ್ಲ. ಅನುಭವಿ ನೌಕರರ ಕೊರತೆ ಉಂಟಾಗಿದೆ.

ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ

ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ

ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮ ಮಂಡಳಿಗಳು, ಇತರೆಡೆ ನಿವೃತ್ತಿ ಹೊಂದಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ಮರು ನೇಮಕ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60 ರಿಂದ 62ಕ್ಕೆ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರವನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಹಿತ ರಕ್ಷಣಾ ಸಮಿತಿ ಒತ್ತಾಯಿಸುತ್ತದೆ ಈ ಕುರಿತು ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಲಾಗುವುದು ಎಂದು ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

English summary
Karnataka state State Government employees welfare association has demanded Government of Karnataka to increase retirement age to 62 as per 6th Pay Commission recommendations
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X