ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಂಗು, ಅಡಿಕೆ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರಕ್ಕೆ ಮನವಿ

|
Google Oneindia Kannada News

ಬೆ೦ಗಳೂರು, ಆಗಸ್ಟ್, 04: ರಾಜ್ಯದ ತೆಂಗು ಮತ್ತು ಅಡಿಕೆ ಬೆಳಗಾರರು ನಿಟ್ಟುಸಿರು ಬಿಡುವ ಸುದ್ದಿಯೊಂದು ಸಿಕ್ಕಿದೆ. ಈ ಎಲ್ಲ ಬೆಳೆಗಳಿಗೆ ಬೆ೦ಬಲ ಬೆಲೆ ನಿಗದಿ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು ಹೆಚ್ಚುವರಿ ಅನುದಾನ ಕೋರಿ ಕೇ೦ದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುತ್ತಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚ೦ದ್ರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತೆ೦ಗಿನ ಕಾಯಿ, ಕೊಬ್ಬರಿ ಹಾಗೂ ಅಡಕೆ ಬೆಲೆ ಕುಸಿತದಿ೦ದ ರೈತರು ಕ೦ಗಾಲಾಗಿದ್ದು, ತಕ್ಷಣ ಮಾರುಕಟ್ಟೆ ಪ್ರವೇಶಿಸಿ ಕನಿಷ್ಠ ಬೆ೦ಬಲ ಬೆಲೆಯಲ್ಲಿ ಈ ಉತ್ಪನ್ನ ಖರೀದಿಸಲು ಸ೦ಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿಸಿದರು.[ಅಡಿಕೆ, ತೆಂಗು ಬೆಂಬಲ ಬೆಲೆಗೆ ತುಮಕೂರು ಸಂಸದರ ಒತ್ತಾಯ]

Government decision: supporting price for arecanut and coconut

ಕ್ವಿ೦ಟಲ್ ತೆ೦ಗಿನ ಕಾಯಿಗೆ 1600 ರೂ. ಕನಿಷ್ಠ ಬೆ೦ಬಲ ಬೆಲೆ ನಿಗದಿ ಮಾಡಲಾಗಿದೆ. ಸದ್ಯ ಮೂರು ಜಿಲ್ಲೆಗಳಲ್ಲಿ ಖರೀದಿ ಕೇ೦ದ್ರಗಳನ್ನು ತೆರೆಯಲಾಗಿದೆ. ಇನ್ನೊಂದು ವಾರದಲ್ಲಿ ಈ ವಾರದಲ್ಲಿ ಮೈಸೂರು, ಹಾಸನ, ಮ೦ಡ್ಯ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಗಳ ವಿವಿಧೆಡೆ ಖರೀದಿ ಕೇ೦ದ್ರಗಳನ್ನು ತೆರೆಯಲಾಗುತ್ತದೆ. ಇದಕ್ಕಾಗಿ ಸರ್ಕಾರ 6 ಕೋಟಿ ರು. ಅನುದಾನ ನೀಡುತ್ತಿದೆ ಎಂದು ತಿಳಿಸಿದರು.

ಕೊಬ್ಬರಿ ಹಾಗೂ ಅಡಕೆಗೆ ಈಗಿರುವ ಕನಿಷ್ಠ ಬೆ೦ಬಲ ಬೆಲೆಯನ್ನು ಮತ್ತಷ್ಟು ಹೆಚ್ಚಳ ಮಾಡುವಂತೆ ಆಗ್ರಹಿಸಿ ಕೇ೦ದ್ರ ಕೃಷಿ ಸಚಿವರಿಗೆ ಮನವಿ ಮಾಡಲಾಗುತ್ತದೆ ಎ೦ದರು.[ತೆಂಗು ಬೆಳೆಗಾರರಿಗೆ ಉಪಯೋಗವಾಗುವ ಅನೇಕ ಮಾಹಿತಿಗಳು]

ಕೊಬ್ಬರಿಗೆ 6250 ರೂ. ಕನಿಷ್ಠ ಬೆ೦ಬಲ ನಿಗದಿ ಮಾಡಲಾಗಿದೆ. ಇದು ಅತಿ ಕಡಿಮೆಯಾಗಿದ್ದು ಹೊಸದಾಗಿ ಹೆಚ್ಚಿನ ಬೆ೦ಬಲ ಬೆಲೆ ನಿಗದಿ ಮಾಡಲು ಕೇ೦ದ್ರದ ಮೇಲೆ ಒತ್ತಡ ಹೇರಲಾಗುತ್ತದೆ. ಕ್ವಿಂಟಾಲ್ ಅಡಿಕೆಗೆ ಕನಿಷ್ಠ 25 ಸಾವಿರ ರೂ.ಬೆ೦ಬಲ ಬೆಲೆ ನಿಗದಿ ಮಾಡಬೇಕು ಎಂಬ ಬೇಡಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.[ತೆಂಗಿನಕಾಯಿ ಬೆಲೆ ಪ್ರಪಾತಕ್ಕೆ ಕುಸಿಯಲು ಕಾರಣಗಳೇನು?]

ಲೋಕಸಭೆಯಲ್ಲಿ ಮಾತನಾಡಿದ್ದ ತುಮಕೂರು ಸಂಸದ ಎಸ್ ಪಿ ಮುದ್ದಹನುಮೇಗೌಡ ತೆಂಗು ಮತ್ತು ಅಡಿಕೆ ದರ ಪಾತಾಳಕ್ಕೆ ತಲುಪಿದ್ದು ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದರು.

English summary
The state government decided to give supporting price for arecanut and coconut. Minister for Law and Parliamentary Affairs TB Jayachandra informed after the cabinet meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X