ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರೀ ನೌಕರರಿಗೆ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಎಚ್ಡಿಕೆ

|
Google Oneindia Kannada News

Recommended Video

ರಾಜ್ಯ ಸರ್ಕಾರೀ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಎಚ್ ಡಿ ಕುಮಾರಸ್ವಾಮಿ | Oneindia Kannada

ಬೆಂಗಳೂರು, ಅ 8: ಬಹುಷಃ ಕರ್ನಾಟಕದ ಇತಿಹಾಸದಲ್ಲಿ, ಸರಕಾರ ತೆಗೆದುಕೊಂಡ ಅಪರೂಪದ ನಿರ್ಧಾರವಿದು ಎಂದರೆ ಅತಿಶಯೋಕ್ತಿಯಾಗಲಾರದು. ಸರಕಾರೀ ನೌಕರರಿಗೆ ಬೋನಸ್, ವೇತನ ಹೆಚ್ಚಳ, ಭತ್ಯೆ ಮುಂತಾದ ವಿಚಾರದ ಬಗ್ಗೆ ಕೇಳಿದ್ದೇವೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ, ಹೀಗೂ ಒಂದು ಕ್ರಮ ತೆಗೆದುಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಇದೊಂದು ರಜೆಗೆ ಸಂಬಂಧಪಟ್ಟ ವಿಚಾರವಾದರೂ, ಲಕ್ಷಾಂತರ ಸರಕಾರೀ ನೌಕರರು ಸಂತೋಷ ಪಡುವಂತಹ ವಿಚಾರ. ದಸರಾ/ನವರಾತ್ರಿ ಪ್ರಯುಕ್ತ ಸಾಲುಸಾಲು ರಜೆ ಬರುತ್ತಿರುವ ಹಿನ್ನಲೆಯಲ್ಲಿ, ರಜೆಯ ಖುಷಿಯನ್ನು ಇನ್ನಷ್ಟು ಸವಿಯಲು, ಕುಟುಂಬದ ಜೊತೆ ಕಾಲಕಳೆಯಲು ಸರಕಾರ ಅನುವು ಮಾಡಿಕೊಡುವ ಸಾಧ್ಯತೆಯಿದೆ.

ಅಬ್ಬಬ್ಬಾ.. ಅಕ್ಟೋಬರ್ ತಿಂಗಳಲ್ಲಿ ಒಟ್ಟು ಹನ್ನೊಂದು ದಿನ ರಜೆಅಬ್ಬಬ್ಬಾ.. ಅಕ್ಟೋಬರ್ ತಿಂಗಳಲ್ಲಿ ಒಟ್ಟು ಹನ್ನೊಂದು ದಿನ ರಜೆ

ಇದೇ ಶನಿವಾರ (ಅ 13) ಸೆಕೆಂಡ್ ಸಾಟರ್ಡೇ ರಜೆಯನ್ನು ರದ್ದು ಮಾಡಲು ರಾಜ್ಯ ಸರಕಾರ ಮುಂದಾಗಿದೆ. ಅಂದು ಕೆಲಸ ನಿರ್ವಹಿಸಿ, ಅದಕ್ಕೆ ಪರ್ಯಾಯವಾಗಿ ಅಕ್ಟೋಬರ್ 20ಕ್ಕೆ (ಮೂರನೇ ಶನಿವಾರ) ರಜೆ ನೀಡುವ ನಿರ್ಧಾರಕ್ಕೆ ಸರಕಾರ ಬಂದಿದೆ. ಹಾಗಾಗಿ, ಒಟ್ಟು ನಾಲ್ಕು ದಿನಗಳ ರಜೆಯ ಮಜಾವನ್ನು ಸರಕಾರೀ ನೌಕರರು ಪಡೆಯುವಂತಾಗುತ್ತದೆ.

Government decided to announce Third Saturday holiday to avail continous leave on Dasara for government staff

ಗುರುವಾರ (ಅ 18) ಆಯುಧಪೂಜೆ, ಶುಕ್ರವಾರ (ಅ 19) ವಿಜಯದಶಮಿ, ಶನಿವಾರ (ಅ 20) ಮತ್ತು ಭಾನುವಾರ (ಅ 21), ಹೀಗೆ ಒಟ್ಟು ನಾಲ್ಕು ದಿನಗಳ ಸಾಲುಸಾಲು ರಜೆಯನ್ನು ನೌಕರರು ಪಡೆಯಬಹುದಾಗಿದೆ. ಇದು ಈ ತಿಂಗಳಿಗೆ ಮಾತ್ರ ಮಾಡಿರುವಂತಹ ಬದಲಾವಣೆ.

ವಾರಕ್ಕೆ 5 ದಿನಗಳ ಕೆಲಸ: ಗೊಂದಲಕ್ಕೆ ತೆರೆ ಎಳೆದ ಸಚಿವ ಪ್ರಿಯಾಂಕ್ ವಾರಕ್ಕೆ 5 ದಿನಗಳ ಕೆಲಸ: ಗೊಂದಲಕ್ಕೆ ತೆರೆ ಎಳೆದ ಸಚಿವ ಪ್ರಿಯಾಂಕ್

ಒಂದು ವೇಳೆ ಮೂರನೇ ಶನಿವಾರ ರಜೆ ನೀಡದಿದ್ದರೂ, ಸಿಬ್ಬಂದಿಗಳು ರಜೆ ಹಾಕುವ ಸಾಧ್ಯತೆಯಿದೆ, ಅದರ ಬದಲು ಸೆಕೆಂಡ್ ಸಾಟರ್ಡೇಯನ್ನು ಕೆಲಸದ ದಿನವನ್ನಾಗಿ ಮಾಡಿದರೆ ಸರಕಾರೀ ಕೆಲಸಗಳು ನಡೆಯುತ್ತದೆ ಎನ್ನುವ ಕಾರಣಕ್ಕಾಗಿ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ನೆರಡು ದಿನದಲ್ಲಿ ರಜೆಯ ಸಂಬಂಧ ಸುತ್ತೋಲೆ ಹೊರಡಿಸುವುದಾಗಿ ಡಿಪಿಎಆರ್ (ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ) ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನಗಳ ಕೆಲಸ: ಎಚ್ಡಿಕೆಗೆ ಪ್ರಿಯಾಂಕ್ ಶಿಫಾರಸುಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನಗಳ ಕೆಲಸ: ಎಚ್ಡಿಕೆಗೆ ಪ್ರಿಯಾಂಕ್ ಶಿಫಾರಸು

ಇನ್ನೊಂದು ಗಮನಿಸಬೇಕಾದ ಅಂಶವೇನಂದರೆ, ರಾಜ್ಯ ಸರಕಾರೀ ನೌಕರರಿಗೆ ಮಾತ್ರ ಇದು ಸಂಬಂಧಪಟ್ಟದ್ದು. ರಾಜ್ಯದ, ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನ ನೆಗೋಶಿಯೇಬಲ್ instruments ಆಕ್ಟ್ -1881 ಪ್ರಕಾರ ಕೆಲಸ ನಿರ್ವಹಿಸಲಿದೆ. ಅಂದರೆ, ಎರಡನೇ ಶನಿವಾರ ರಜೆ, ಮೂರನೇ ಶನಿವಾರ ಕೆಲಸ ನಿರ್ವಹಿಸಲಿದೆ.

ಕರ್ನಾಟಕದಲ್ಲಿ 1994 ಮತ್ತು 2018ರ ರಾಜಕೀಯ ದಂಗೆಯ ಕಥೆ!ಕರ್ನಾಟಕದಲ್ಲಿ 1994 ಮತ್ತು 2018ರ ರಾಜಕೀಯ ದಂಗೆಯ ಕಥೆ!

ಎರಡನೇ ಶನಿವಾರ ರಜೆ ನೀಡುವ ಪದ್ದತಿ 1986ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದ ಅವಧಿಯಿಂದ ಆರಂಭವಾಗಿತ್ತು.

English summary
Government of Karnataka decided to announce Third Saturday as holiday to avail continous Dasara holiday for government staff. Instead they have to work on Second Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X