ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಳಮೀಸಲಾತಿ ನೀಡಲು ತಯಾರು, ಸ್ವಲ್ಪ ಕಾಲಾವಕಾಶ ಕೊಡಿ: ಕುಮಾರಸ್ವಾಮಿ

|
Google Oneindia Kannada News

ಬೆಂಗಳೂರು, ಜನವರಿ 18: ಎಡಗೈ ಸಮುದಾಯಗಳ ಪ್ರಮುಖ ಬೇಡಿಕೆ ಆದ ಒಳಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ ಆದರೆ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು, ಒಳಮೀಸಲಾತಿಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಒಳಮೀಸಲಾತಿಗೆ ಬೇಡಿಕೆ ಇಡುತ್ತಿರುವವ ಮನಸ್ಸನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದರು.

Government committed to give inner reservation: Kumaraswamy

ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್.ಮುನಿಯಪ್ಪ ಅವರು ಎರಡು ಶಕ್ತಿಗಳು, ಅವರು ಸಹೋದರರಂತೆ ಇದ್ದಾರೆ, ಸಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ. ಆದರೆ ಒಳಮೀಸಲಾತಿ ವಿಚಾರದಲ್ಲಿ ಅವರಿಬ್ಬರ ನಡುವೆ ಕಂದಕ ಉಂಟಾಗುವುದು ಬೇಡ ಎಂದು ಕುಮಾರಸ್ವಾಮಿ ಹೇಳಿದರು.

ವದಂತಿಗಳ ನಡುವೆ ಸರ್ಕಸ್‌ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದೇನೆ: ಎಚ್‌ಡಿಕೆ ವದಂತಿಗಳ ನಡುವೆ ಸರ್ಕಸ್‌ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದೇನೆ: ಎಚ್‌ಡಿಕೆ

ಮಲ್ಲಿಕಾರ್ಜುನ ಖರ್ಗೆ ಅವರು ಯಾವುದೇ ಸಭೆ-ಸಮಾರಂಭದಲ್ಲಿ ಒಳೀಸಲಾತಿ ಬೇಡ ಎಂದಿಲ್ಲ. ಸರ್ಕಾರ ಎಲ್ಲ ವಿಷಯಗಳನ್ನು ಸೂಕ್ಷ್ಮವಾಗಿ ಗಮಿಸಿದೆ. ಎರಡೂ ಬಣದವರೊಂದಿಗೆ ಮಾತನಾಡಿ ಕಾನೂನಾತ್ಮಕವಾಗಿಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದರು.

ಬಿಜೆಪಿ ಶಾಸಕರು ಹೋಟೆಲ್‌ನಲ್ಲಿ ಬರ ವೀಕ್ಷಣೆ ಮಾಡುತ್ತಿದ್ದಾರಾ? ಸಿಎಂ ಪ್ರಶ್ನೆ ಬಿಜೆಪಿ ಶಾಸಕರು ಹೋಟೆಲ್‌ನಲ್ಲಿ ಬರ ವೀಕ್ಷಣೆ ಮಾಡುತ್ತಿದ್ದಾರಾ? ಸಿಎಂ ಪ್ರಶ್ನೆ

ಸರ್ವರಿಗೂ ಸಮಪಾಲು-ಸಮಬಾಳು ಎಂಬ ಧ್ಯೇಯವನ್ನು ನಾವು ಹೊಂದಿದ್ದೇವೆ. ದನಿ ಇಲ್ಲದವರಿಗೆ ದನಿ ನೀಡುವ ಕಾರ್ಯವನ್ನು ನಾವು ಮಾಡುತ್ತೇವೆ. ಹಲವು ಅಡರು-ತೊಡರುಗಳನ್ನು ನಿವಾರಿಸಿಕೊಂಡು ನಡೆಯುತ್ತಿದ್ದೇವೆ ನಮಗೆ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಸಿಎಂ ಮನವಿ ಮಾಡಿದರು.

English summary
CM Kumaraswamy said government committed to give inner reservation to micro minority communities but government need some time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X