ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಳ್ಳೆಸುದ್ದಿ: ಸರ್ಕಾರವೇ ಭರಿಸಲಿದೆ ಕಾಲೇಜು ವಿದ್ಯಾರ್ಥಿನಿಯರ ಶುಲ್ಕ

|
Google Oneindia Kannada News

ಬೆಂಗಳೂರು, ನವೆಂಬರ್ 05: ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರ ಶುಲ್ಕವನ್ನು ಇನ್ನು ಮುಂದೆ ಸರ್ಕಾರವೇ ಭರಿಸಲಿದೆ. ಹೀಗೊಂದು ಉತ್ತಮ ನಿರ್ಧಾರವನ್ನು ಮೈತ್ರಿ ಸರ್ಕಾರ ತೆಗೆದುಕೊಂಡಿದೆ.

ಟೈಮ್ಸ್ ಸಮೀಕ್ಷೆ ವಿಶ್ವದ ಟಾಪ್ 100 ವಿವಿಗಳಲ್ಲಿ ಬೆಂಗಳೂರಿನ ಐಐಎಸ್ಸಿ ಟೈಮ್ಸ್ ಸಮೀಕ್ಷೆ ವಿಶ್ವದ ಟಾಪ್ 100 ವಿವಿಗಳಲ್ಲಿ ಬೆಂಗಳೂರಿನ ಐಐಎಸ್ಸಿ

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ಯೋಜನೆಯು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ.

ಸಮವಸ್ತ್ರ ಹಂಚಿಕೆ ತಡ ಆಗಲು ಕೇಂದ್ರದ ಅನುದಾನ ವಿಳಂಬ ಕಾರಣ: ಸಿಎಂಸಮವಸ್ತ್ರ ಹಂಚಿಕೆ ತಡ ಆಗಲು ಕೇಂದ್ರದ ಅನುದಾನ ವಿಳಂಬ ಕಾರಣ: ಸಿಎಂ

ಇದಕ್ಕಾಗಿ ಸರ್ಕಾರವು ಪ್ರತಿ ವರ್ಷ 95 ಕೋಟಿಯನ್ನು ಮೀಸಲಿಡುವುದಾಗಿ ಹೇಳಿದ್ದು, ಸಚಿವರೆಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ಯೋಜನೆಯಿಂದ ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎರಡು ಲಕ್ಷಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ಅನುಕೂಲ ಆಗಲಿದೆ.

Government college girl students no need to pay fees

ಈ ಯೋಜನೆಯು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಜೊತೆಗೆ, ಸರ್ಕಾರಿ ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಾಗುವಂತೆ ಮಾಡುವ ಆಶಾಭಾವ ಇದೆ. ಈ ಯೋಜನೆಯನ್ನು ಸಿದ್ದರಾಮಯ್ಯ ಅವರ ಕೊನೆಯ ಬಜೆಟ್‌ನಲ್ಲಿ ಮಂಡಿಸಿದ್ದರು ಆದರೆ ಅದು ಈಗ ಜಾರಿಗೆ ಬರುತ್ತಿದೆ.

English summary
Government college girl students no need to pay fees to college from this year. Karnataka government took decision of paying girl students fees to government colleges from this academic year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X