ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಧನಿ ಬಳಿ ಹಳಿ ತಪ್ಪಿದ ಗೂಡ್ಸ್ ರೈಲು, ಹಲವು ರೈಲು ಸಂಚಾರ ಬದಲಾವಣೆ

|
Google Oneindia Kannada News

ಸೊಲ್ಲಾಪುರ, ಮೇ 01 : ನೈರುತ್ಯ ರೈಲ್ವೆ ಸೊಲ್ಲಾಪುರ ವಿಭಾಗದಲ್ಲಿ ದುಧನಿ-ಕುಳಲಿ ಗೂಡ್ಸ್ ರೈಲಿನ ಐದು ಬೋಗಿಗಳು ದುಧನಿ ನಿಲ್ದಾಣದಲ್ಲಿ ಭಾನುವಾರ ಮಧ್ಯರಾತ್ರಿ ಹಳಿ ತಪ್ಪಿದ್ದರಿಂದ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಇದರಿಂದ ಸುಮಾರು 12 ರೈಲುಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಗಿದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ವಿಜಯಪುರ-ಗುಂತಕಲ್ ಮತ್ತು ವಾಡಿ-ವಿಕಾರಬಾದ್‌-ಲಾತೂರ್-ಮನ್ಮಾಡ್ ಮಾರ್ಗವಾಗಿ ಸಂಚರಿಸಲಿವೆ.

Goods train derail near Dudhani, 12 trains diverted

ಜೈಪುರ ಯಶವಂತಪುರ ಸುವಿಧಾ ವಿಶೇಷ ರೈಲು (82654) ಹುಟಗಿ-ವಿಜಯಪುರ-ಯಶವಂತಪುರ ಮಾರ್ಗವಾಗಿ ಸಂಚರಿಸಲಿದೆ.

ಅದೇ ರೀತಿ, ರಾಜಕೋಟ್-ಕೊಯಿಮತ್ತೂರ ಎಕ್ಸ್‌ಪ್ರೆಸ್‌ ರೈಲು (16613), ಮುಂಬೈ-ಭುವನೇಶ್ವರ ಕೊನಾರ್ಕ್‌ ಎಕ್ಸ್‌ಪ್ರೆಸ್‌ (11019), ಹುಟಗಿ-ಗದಗ-ಗುಂತಕಲ್, ಗುಂಟೂರು -ವಿಜಯವಾಡ ಮಾರ್ಗದಲ್ಲಿ ಸಂಚರಿಸಲಿವೆ.

ಇನ್ನು ಮುಂಬೈ-ಕನ್ಯಾಕುಮಾರಿ ಎಕ್ಸ್‌ಪ್ರೆಸ್‌ (16381), ನವದೆಹಲಿ-ಬೆಂಗಳೂರು ಎಕ್ಸ್‌ಪ್ರೆಸ್‌ (12628), ಮುಂಬೈ-ಚೆನ್ನೈ ಎಕ್ಸ್‌ಪ್ರೆಸ್‌ (11041), ದಾದರ್-ಚೆನ್ನೈ ಎಕ್ಸ್‌ಪ್ರೆಸ್‌ (12163),ವಾರಾಣಸಿ-ಮೈಸೂರು ಎಕ್ಸ್‌ಪ್ರೆಸ್‌ (16230)ಹುಟಗಿ-ಗದಗ-ವಿಜಯಪುರ-ಗುಂತಕಲ್ ಮಾರ್ಗವಾಗಿ ಸಾಗಲಿವೆ.

ಬೆಂಗಳೂರು-ಅಹ್ಮದಾಬಾದ್‌ ಎಕ್ಸ್‌ಪ್ರೆಸ್‌ (16502), ಕೊಯಿಮತ್ತೂರು-ಲೋಕಮಾನ್ಯ ತಿಲಕ್‌ ಟರ್ಮಿನಲ್‌ ಎಕ್ಸ್‌ಪ್ರೆಸ್‌(11014), ಬೆಂಗಳೂರು - ನವದೆಹಲಿ ಎಕ್ಸ್‌ಪ್ರೆಸ್‌ (12627) ವಾಡಿ-ವಿಕಾರಬಾದ್‌-ಲಾತೂರ್-ಮನ್ಮಾಡ್ ಮಾರ್ಗವಾಗಿ ಸಂಚರಿಸಲಿವೆ.

ಸಹಾಯವಾಣಿ ಸಂಖ್ಯೆ - CST Mumbai - 22694040; LTT Mumbai - 25280005; Thane - 25334840; Kalyan - 0251 2311499.

English summary
At least five wagons of a goods train derailed in the early hours on Monday near Dudhani railway station in Maharashtra coming under Solapur Wadi division. According to official sources, at least 12 trains were diverted towards Hotagi-Guntakal, Wadi-Latur-Manmad line after the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X