ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ಡೋಸ್ ಕೋವ್ಯಾಕ್ಸಿನ್ ಗಾಗಿ ಕಾಯುತ್ತಿದ್ದರೆ ಈ ಸುದ್ದಿ ತಪ್ಪದೇ ಓದಿ !

|
Google Oneindia Kannada News

ಬೆಂಗಳೂರು, ಮೇ. 15: ಕೋವ್ಯಾಕ್ಸಿನ್ ಹಾಕಿಸಿಕೊಂಡು ಎರಡನೇ ಡೋಸ್ ಗಾಗಿ ಕಾಯುತ್ತಿರುವರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಒಂದು ವಾರದಿಂದ "ಔಟ್ ಆಫ್ ಸ್ಟಾಕ್ " ಆಗಿದ್ದ ಕೋ ವ್ಯಾಕ್ಸಿನ್ ಲಸಿಕೆ ಶನಿವಾರದಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಾಗಲಿದೆ. ಆದರೆ ಈ ಲಸಿಕೆಯನ್ನು 2 ನೇ ಡೋಸ್ ಗಾಗಿ ಕಾಯುತ್ತಿರುವರಿಗೆ ಮೀಸಲಿಡಲಾಗಿದೆ.

ಕೇಂದ್ರ ಸರ್ಕಾರ ಶುಕ್ರವಾರ 75 ಸಾವಿರ ಕೋವ್ಯಾಕ್ಸಿನ್ ಡೋಸ್ ನ್ನು ರಾಜ್ಯಕ್ಕೆ ರವಾನಿಸಿದೆ. ಕಳೆದ ಒಂದು ವಾರದಿಂದ ಕೋ ವ್ಯಾಕ್ಸಿನ್ ಲಸಿಕೆ ಸಿಗುತ್ತಿರಲಿಲ್ಲ. ಮೊದಲನೇ ಡೋಸ್ ಕೋ ವ್ಯಾಕ್ಸಿನ್ ಪಡೆದಿದ್ದ ಹಿರಿಯ ನಾಗರಿಕರು ಎರಡನೇ ಡೋಸ್ ಇಲ್ಲದೇ ಕಂಗಾಲಾಗಿದ್ದರು. ಈ ವಿಚಾರ ಹೈಕೋರ್ಟ್ ಮೆಟ್ಟಿಲೇರಿತ್ತು.

ಕೋಲಾರದಲ್ಲಿ ಕೊವ್ಯಾಕ್ಸಿನ್ ಉತ್ಪಾದನಾ ಘಟಕ ಸ್ಥಾಪನೆಕೋಲಾರದಲ್ಲಿ ಕೊವ್ಯಾಕ್ಸಿನ್ ಉತ್ಪಾದನಾ ಘಟಕ ಸ್ಥಾಪನೆ

ಕಾಲಮಿತಿಯಲ್ಲಿ ಎರಡನೇ ಡೋಸ್ ಕೊಟ್ಟಿಲ್ಲ ಎಂದರೆ ಮೊದಲನೇ ಡೋಸ್ ನಿರುಪಯುಕ್ತವಾಗಲಿದೆ. ಹೀಗಾಗಿ ಎರಡನೇ ಡೋಸ್ ಗಾಗಿ ಕಾಯುತ್ತಿರುವರಿಗೆ ಆದ್ಯತೆ ಮೇರೆಗೆ ಕಾಲಮಿತಿಯಲ್ಲಿ ಲಸಿಕೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತರಾಟೆಗೆ ತೆಗೆದುಕೊಂಡಿತ್ತು. ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ರಾಜ್ಯಕ್ಕೆ ತುರ್ತು ಬಳಕೆಗಾಗಿ 75 ಸಾವಿರ ಕೋ ವ್ಯಾಕ್ಸಿನ್ ಡೋಸ್ ಬಂದಿದೆ. ಇದರಿಂದ ಎರಡನೇ ಡೋಸ್ ಕೋ ವ್ಯಾಕ್ಸಿನ್ ಗಾಗಿ ಕಾಯುತ್ತಿರುವರು ನಿಟ್ಟುಸಿರು ಬಿಡುವಂತಾಗಿದೆ.

Good news for who are waiting for 2nd dose Covaxin

ಎರಡನೇ ಡೋಸ್ ಗೆ ಮೀಸಲು: ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಿದ್ದ ಎಡವಟ್ಟಿನಿಂದ ರಾಜ್ಯದಲ್ಲಿ ಲಸಿಕೆ ಅಭಿಯಾನ ಹಾದಿ ತಪ್ಪಿತ್ತು. ಇದ್ದ ಲಸಿಕೆಯನ್ನು ಸಿಕ್ಕ ಸಿಕ್ಕವರಿಗೆ ಹಾಕಿ ಕೈ ತೊಳೆದುಕೊಂಡದ್ದರು. ಕೋ ವ್ಯಾಕ್ಸಿನ್ ಮೊದಲ ಡೋಸ್ ಪಡೆದವರ ಬಗ್ಗೆ ಕನಸಲ್ಲೂ ಆಲೋಚಿಸಿರಲಿಲ್ಲ. ಹೀಗಾಗಿ ಎರಡನೇ ಡೋಸ್ ಪಡೆಯಲಾಗದೇ ಜನರು ಕಂಗಾಲಾಗಿದ್ದರು. ಸದ್ಯಕ್ಕೆ 75 ಸಾವಿರ ಕೋ ವ್ಯಾಕ್ಸಿನ್ ರಾಜ್ಯಕ್ಕೆ ಬಂದಿದ್ದು, ಅದನ್ನು ಎರಡನೇ ಡೋಸ್ ಗಾಗಿ ಮೀಸಲಿಡಲಾಗುತ್ತಿದೆ. ಎರಡನೇ ಡೋಸ್ ಗಾಗಿ ಕಾಯುತ್ತಿರುವರು ಸದ್ಯದ ಮಟ್ಟಿಗೆ ನಿರಾಳ ಆದಂತಾಗಿದೆ.

Recommended Video

Covid Centreನಲ್ಲಿ ಹುಡುಗಿಯ Love you Zindagi ಹಾಡು ವೈರಲ್ | Oneindia Kannada

English summary
The central government has shipped 75,000 Covaxin doses to the state know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X