ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರೆ ಪೀಡಿತ ಪ್ರದೇಶಗಳಲ್ಲಿರುವ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ

|
Google Oneindia Kannada News

Recommended Video

ನೆರೆ ಪೀಡಿತ ಪ್ರದೇಶಗಳ ಮಕ್ಕಳಿಗೆ ಶಾಲೆಗಳು ದಾಖಲೆ ಕೇಳವಂತಿಲ್ಲ

ಬೆಂಗಳೂರು, ಸೆಪ್ಟೆಂಬರ್ 6: ನೆರೆ ಪೀಡಿತ ಪ್ರದೇಶದಲ್ಲಿರುವ ಮಕ್ಕಳಿಗೆ ಶಾಲೆಗಳು ದಾಖಲೆ ಕೇಳುವಂತಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಆಧಾರ್, ರೇಷನ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆ ಕೇಳಕೂಡದು, ಈ ಕುರಿತು ಡಿಸಿಗಳಿಗೆ ಸರ್ಕಾರ ಖಡಕ್ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನೆರೆ ಪ್ರದೇಶಗಳಿಗೆ ನೀಡಲು ಹಣದ ಕೊರತೆ ಇಲ್ಲ: ಆರ್.ಅಶೋಕ್ನೆರೆ ಪ್ರದೇಶಗಳಿಗೆ ನೀಡಲು ಹಣದ ಕೊರತೆ ಇಲ್ಲ: ಆರ್.ಅಶೋಕ್

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಮೂಲ ದಾಖಲಾತಿ ಕೇಳುತ್ತಿರುವ ವಿಚಾರ ಮಾತನಾಡಿದ ಅವರು ಬೆಳಗಾವಿ, ಚಿಕ್ಕೋಡಿ ಸೇರಿದಂತೆ ಎಲ್ಲಾ ನೆರಪೀಡಿತ ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಯಾವುದೇ ದಾಖಲಾತಿಗಳನ್ನು ಕೇಳದಂತೆ ಸೂಚನೆ ನೀಡಿದೆ.

Good News For School Children In Flood affected Areas

ಇನ್ನು ನೆರೆ ಪೀಡಿತ ಪ್ರದೇಶಗಳಲ್ಲಿ ಶಿಥಿಲವಾಗಿರುವ ಶಾಲಾ ಕಟ್ಟಡಗಳ ದುರಸ್ಥಿ, ಹೊಸ ಕಟ್ಟಗಳ ನಿರ್ಮಾಣದ ಕುರಿತು ಗಮನ ನೀಡಲಾಗಿದೆ. ಸಂತ್ರಸ್ತರಿಂದ ದಾಖಲೆಗಳನ್ನು ಕೇಳಬಾರದು, ಸಂಬಂಧಪಟ್ಟ ಏಜೆನ್ಸಿಗಳಿಂದ ಇವರೇ ನೇರವಾಗಿ ಮಾಹಿತಿ ಪಡೆದುಕೊಳ್ಳಬೇಕು.

ಆ ಭಾಗದಲ್ಲಿ ಮಕ್ಕಳು ತಮ್ಮ ಪಠ್ಯಪುಸ್ತಕಗಳನ್ನು ಕಳೆದುಕೊಂಡಿದ್ದಾರೆ. ಎರಡನೇ ಸೆಟ್ ಪಠ್ಯಪುಸ್ತಕಗಳನ್ನು ಆದಷ್ಟು ಬೇಗ ತಲುಪಿಸುವ ಪ್ರಯತ್ನವಾಗಲಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

English summary
Education Minister Suresh Kumar said schools in the Flood affected areas should not ask for a record.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X