ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆ‌ಎಸ್‌ಆರ್‌ಟಿಸಿ, ಬಿಎಂಟಿಸಿ ಸಿಬ್ಬಂದಿಗಳಿಗೆ ಭರ್ಜರಿ ಗುಡ್ ನ್ಯೂಸ್

|
Google Oneindia Kannada News

ಬೆಂಗಳೂರು, ಜುಲೈ 24: ಲಾಕ್ ಡೌನ್ ಹಿನ್ನಲೆಯಲ್ಲಿ ವೇತನ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದ, ನಾಲ್ಕೂ ಸಾರಿಗೆ ಸಂಸ್ಥೆಯ ನೌಕರರು, ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ. ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳ ವೇತನ ಪಾವತಿಗಾಗಿ, ಸರಕಾರ ಹಣ ಬಿಡುಗಡೆ ಮಾಡಲು ನಿರ್ಧರಿಸಿದೆ.

Recommended Video

The Indian Premier League (IPL) 2020 is all set to kick-off | Oneindia Kannada

ಈ ಬಗ್ಗೆ ಖುದ್ದು ಟ್ವೀಟ್ ಮಾಡಿರುವ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ, ಸಿಎಂ ಯಡಿಯೂರಪ್ಪನವರಿಗೆ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿದ್ದಾರೆ.

ಲಾಕ್‌ಡೌನ್‌ ನೆಪ: NWKRTC ಸಿಬ್ಬಂದಿಗೆ ಇನ್ನೂ ಆಗಿಲ್ಲ ಮೇ ತಿಂಗಳ ಸಂಬಳಲಾಕ್‌ಡೌನ್‌ ನೆಪ: NWKRTC ಸಿಬ್ಬಂದಿಗೆ ಇನ್ನೂ ಆಗಿಲ್ಲ ಮೇ ತಿಂಗಳ ಸಂಬಳ

"ಕೆ‌ಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳ ಸಂಬಳ ಭರಿಸಲು ರಾಜ್ಯ ಸರ್ಕಾರ 961 ಕೋಟಿ ರೂಪಾಯಿಗಳನ್ನು ನೀಡಲು ನಿರ್ಧರಿಸಿದೆ. ಇದಕ್ಕಾಗಿ ಮಾನ್ಯ‌ ಮುಖ್ಯಮಂತ್ರಿ @BSYBJP ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ" ಎಂದು ಸಚಿವ ಸವದಿ ಟ್ವೀಟ್ ಮಾಡಿದ್ದಾರೆ.

Good News For All Four State Government Owned Transport Corporation: Salary Will Be Released

"ಜೂನ್ ಮತ್ತು ಜುಲೈ ತಿಂಗಳ ಸಂಬಳಕ್ಕಾಗಿ 426 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಲಾಗಿದೆ. ಈ ನಿರ್ಧಾರದಿಂದ, ಒಟ್ಟು ನಾಲ್ಕು ತಿಂಗಳ ವೇತನ ಭರಿಸಲು ಅನುಕೂಲವಾಗಲಿದೆ"ಎಂದು ಸವದಿ, ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.

"ಸಾರಿಗೆ ಸಂಸ್ಥೆ ಉದ್ಯೋಗಿಗಳ ಕಷ್ಟಕ್ಕೆ ಸ್ಪಂದಿಸಿ, ಅವರಿಗೆ ಕೂಡಲೇ ಅಗತ್ಯ ವೇತನ ಬಿಡುಗಡೆ ಮಾಡಬೇಕೆಂಬ ನಮ್ಮ ಕೋರಿಕೆಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ"ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಕೊರೊನಾ ವೈರಸ್ ಭಯದಿಂದ ಜನರು ಬಸ್‌ಗಳಲ್ಲಿ ಪ್ರಯಾಣಿಸಲು ಮುಂದಾಗುತ್ತಿಲ್ಲ. ಆದರೂ ಈ ಪರಿಸ್ಥಿತಿಯಲ್ಲಿ ಕೆಎಸ್ಆರ್‌ಟಿಸಿ ಸಿಬ್ಬಂದಿಗೆ ಆದಾಯ ತರುವ ಒತ್ತಡ ಹಾಕಲಾಗುತ್ತಿದೆ ಎನ್ನುವ ಮಾತೂ ಕೇಳಿ ಬರುತ್ತಿದೆ. ಸರಕಾರ ಈ ವಿಚಾರದ ಬಗ್ಗೆಯೂ ಗಮನ ಹರಿಸಬೇಕಿದೆ.

English summary
Good News For All Four State Government Owned Transport Corporation: Salary Will Be Released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X