ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಗೋಲ್ಡನ್ ಚಾರಿಯಟ್ ರೈಲು ಸಂಚಾರ; ಬುಕ್ಕಿಂಗ್ ಆರಂಭ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21: ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ಪುನಃ ಸಂಚಾರವನ್ನು ಆರಂಭಿಸಲಿದೆ. ಜನವರಿಯಲ್ಲಿ ಸಂಚಾರ ಆರಂಭವಾಗಲಿದ್ದು, ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದೆ.

ಕಳೆದ 9 ತಿಂಗಳಿನಿಂದ ಐಷಾರಾಮಿ ರೈಲು ಗೋಲ್ಡನ್ ಚಾರಿಯಟ್ ರೈಲು ಸಂಚಾರ ಸ್ಥಗಿತವಾಗಿತ್ತು. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹೊಸ ವಿನ್ಯಾಸ, ಸೇವೆಗಳ ಜೊತೆ ರೈಲು ಸಂಚಾರಕ್ಕೆ ಪುನಃ ಚಾಲನೆ ನೀಡಲಾಗುತ್ತಿದೆ.

ಪುನಃ ಸಂಚಾರ ಆರಂಭಿಸಲಿದೆ ಐಷಾರಾಮಿ ಗೋಲ್ಡನ್ ಚಾರಿಯಟ್ಪುನಃ ಸಂಚಾರ ಆರಂಭಿಸಲಿದೆ ಐಷಾರಾಮಿ ಗೋಲ್ಡನ್ ಚಾರಿಯಟ್

ಬೆಂಗಳೂರು ನಗರದಿಂದ ಮೂರು ಪ್ರವಾಸಿ ಪ್ಯಾಕೇಜ್‌ಗಳಲ್ಲಿ ರೈಲು ಸಂಚಾರ ನಡೆಸಲಿದೆ. ಎರಡು ಪ್ಯಾಕೇಜ್‌ಗಳು ಕರ್ನಾಟಕದ ಪ್ರವಾಸಿತಾಣಗಳ ದರ್ಶನ ಮಾಡಿಸಲಿವೆ. ಮತ್ತೊಂದು ಪ್ಯಾಕೇಜ್ ತಮಿಳುನಾಡು ಮತ್ತು ಕೇರಳ ರಾಜ್ಯದ ಸಂಚಾರವನ್ನು ಒಳಗೊಂಡಿದೆ.

ಮತ್ತೆ ಹಳಿ ಮೇಲೆ ಐಷಾರಾಮಿ ಗೋಲ್ಡನ್ ಚಾರಿಯಟ್ ಸಂಚಾರಮತ್ತೆ ಹಳಿ ಮೇಲೆ ಐಷಾರಾಮಿ ಗೋಲ್ಡನ್ ಚಾರಿಯಟ್ ಸಂಚಾರ

2018ರಲ್ಲಿ ಗೋಲ್ಡನ್ ಚಾರಿಯಟ್ ರೈಲನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಐಆರ್‌ಸಿಟಿಸಿಗೆ ಹಸ್ತಾಂತರ ಮಾಡಿತ್ತು. ಯೋಜನೆಯಂತೆ 2020ರ ಜನವರಿಂದ ರೈಲು ಸಂಚಾರ ನಡೆಸಬೇಕಿತ್ತು. ಈಗ ರೈಲು ಸಂಚಾರಕ್ಕೆ ದಿನಾಂಕ ನಿಗದಿಯಾಗಿದೆ.

ಹಬ್ಬದ ವಿಶೇಷ ರೈಲು; ಮೈಸೂರಿನಿಂದ ಸಂಚರಿಸುವ ರೈಲುಗಳ ಪಟ್ಟಿ ಹಬ್ಬದ ವಿಶೇಷ ರೈಲು; ಮೈಸೂರಿನಿಂದ ಸಂಚರಿಸುವ ರೈಲುಗಳ ಪಟ್ಟಿ

ಗೋಲ್ಡನ್ ಚಾರಿಯಟ್ ಸಂಚಾರ

ಗೋಲ್ಡನ್ ಚಾರಿಯಟ್ ಸಂಚಾರ

ಐಆರ್‌ಸಿಟಿಸಿಗೆ 2021ರ ಜನವರಿಯಿಂದ ಮಾರ್ಚ್ ತನಕ ಗೋಲ್ಡನ್ ಚಾರಿಯಟ್ ರೈಲನ್ನು ಓಡಿಸಲಿದೆ. ಹೊಸ ಮಾದರಿಯಲ್ಲಿ, ನೂತನ ವಿನ್ಯಾಸ, ಸೇವೆಗಳ ಜೊತೆ ರೈಲು ಸಂಚಾರ ನಡೆಸಲಿದ್ದು, ಬುಕ್ಕಿಂಗ್ ಆರಂಭವಾಗಿದೆ.

ಒಪ್ಪಂದವಾಗಿತ್ತು

ಒಪ್ಪಂದವಾಗಿತ್ತು

ಬೆಳಗಾವಿ ಸಂಸದ ದಿ. ಸುರೇಶ್ ಅಂಗಡಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದಾಗ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಆರಂಭಿಸುವ ಕುರಿತು ಪ್ರಕ್ರಿಯೆ ಆರಂಭವಾಗಿತ್ತು. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಜೊತೆಗೆ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಒಪ್ಫಂದ ಮಾಡಿಕೊಂಡಿತ್ತು.

ಹೊಸ ವಿನ್ಯಾಸ, ಸೇವೆ

ಹೊಸ ವಿನ್ಯಾಸ, ಸೇವೆ

ಗೋಲ್ಡನ್ ಚಾರಿಯಟ್ ರೈಲಿನ ವಿನ್ಯಾಸವನ್ನು ಬದಲಾವಣೆ ಮಾಡಲಾಗಿದೆ. ಪ್ರವಾಸಿ ಪ್ಯಾಕೇಜ್‌ಗಳ ದರ ಸಹ ಕಡಿಮೆ ಇದೆ. ಸ್ಮಾರ್ಟ್ ಟಿವಿ, ಸಿಸಿಟಿವಿ, ಫೈರ್ ಅಲಾರಾಂ ಸೇರಿವಂತೆ ಹಲವು ಹೊಸ ಸೇವೆಗಳನ್ನು ಸಹ ಪರಿಚಯಿಸಲಾಗಿದೆ. ಗೋಲ್ಡನ್ ಚಾರಿಯಟ್ ವೆಬ್‌ಸೈಟ್‌ನಲ್ಲಿ ಪ್ಯಾಕೇಜ್ ವಿವರ ಲಭ್ಯವಿದೆ, ಮುಂಗಡ ಬುಕ್ಕಿಂಗ್ ಸಹ ಆರಂಭವಾಗಿದೆ.

Recommended Video

ಪರಿಹಾರ ಕೊಡ್ತಾರಾ?? ನೋಡ್ಕೊಂಡು ಸುಮ್ನೆ ಹೋಗ್ತಾರಾ?? | Oneindia Kannada
ನಷ್ಟವೇ ಹೆಚ್ಚಾಗಿತ್ತು

ನಷ್ಟವೇ ಹೆಚ್ಚಾಗಿತ್ತು

ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ನಿರ್ವಹಣೆಯನ್ನು 10 ವರ್ಷಗಳ ಕಾಲ ಮಲ್ಪೆ ಗ್ರೂಪ್ ಆಫ್ ಹೋಟೆಲ್‌ಗೆ ನೀಡಲಾಗಿತ್ತು. 18 ಬೋಗಿಗಳ ರೈಲು ಸಂಚಾರದಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿತ್ತು. 2018ರ ಸೆಪ್ಟೆಂಬರ್‌ನಲ್ಲಿ ಒಪ್ಪಂದ ಅಂತ್ಯಗೊಂಡಿತ್ತು. ಬಳಿಕ ಐಆರ್‌ಸಿಟಿಸಿಗೆ ನಿರ್ವಹಣೆಯನ್ನು ನೀಡಲಾಗಿದೆ.

English summary
Golden Chariot train will resume the service in 2021 January. Indian Railways Catering and Tourism Corporation (IRCTC) will run train with 3 package of from Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X