ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿ.ಎ.ಶರವಣ ಸಂದರ್ಶನ : ಎಚ್ಡಿಕೆ ಸಿಎಂ ಆಗುವುದನ್ನು ಯಾರೂ ತಪ್ಪಿಸಲಾರರು

By ಸಂದರ್ಶನ : ಪ್ರಸಾದ್ ನಾಯಕ್, ಗುರುರಾಜ
|
Google Oneindia Kannada News

Recommended Video

ಕರ್ನಾಟಕ ಚುನಾವಣೆ 2018 : ಜೆಡಿಎಸ್ ಪಕ್ಷಕ್ಕೆ ಮತ ಹಾಕಿದ್ರೆ ಆಗೋ ಲಾಭಗಳು ? | Oneindia Kannada

ಬೆಂಗಳೂರು, ಡಿಸೆಂಬರ್ 01 : ಚಿನ್ನದ ವ್ಯಾಪಾರಿಯಾಗಿ, ಸಮಾಜಸೇವಕನಾಗಿ, ಜೆಡಿಎಸ್ ವಕ್ತಾರನಾಗಿ, ದೇವೇಗೌಡರ ಆತ್ಮೀಯನಾಗಿ ಗುರುತಿಸಿಕೊಂಡಿರುವ ಕುಳ್ಳದೇಹದ ಟಿಎ ಶರವಣ ಅವರಲ್ಲಿ ಬೆಟ್ಟದಷ್ಟು ಆಕಾಂಕ್ಷೆಗಳಿವೆ. ಅವುಗಳಲ್ಲಿ ಕುಮಾರಣ್ಣನನ್ನು ಮುಖ್ಯಮಂತ್ರಿ ಪಟ್ಟದ ಮೇಲೆ ಕೂಡಿಸುವುದು ಮತ್ತು ತಾವೇ ಸ್ವತಃ ವಿಧಾನಸೌಧದ ಮೆಟ್ಟಿಲೇರುವುದೂ ಒಂದು.

ಕುಮಾರಪರ್ವ ಯಾತ್ರೆಯಿಂದ ಜೆಡಿಎಸ್‌ಗೆ ಆಗುವ 6 ಲಾಭಗಳು!ಕುಮಾರಪರ್ವ ಯಾತ್ರೆಯಿಂದ ಜೆಡಿಎಸ್‌ಗೆ ಆಗುವ 6 ಲಾಭಗಳು!

ದೇವೇಗೌಡರಿಗಾಗಿ ಮತ್ತು ಕುಮಾರಣ್ಣನಿಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲಿಕ, ಆರ್ಯ ವೈಶ್ಯ ಸಮಾಜದ ಧುರೀಣ ಶರವಣ ಅವರು ಒನ್ಇಂಡಿಯಾ ಕನ್ನಡ ಕಚೇರಿಗೆ ಆಗಮಿಸಿ, ಮುಂದಿನ ಚುನಾವಣೆ, ಜೆಡಿಎಸ್ ಸಾಮರ್ಥ್ಯದ ಬಗ್ಗೆ ನಿರರ್ಗಳವಾಗಿ ಮಾತನಾಡಿದ್ದಾರೆ.

ಕರ್ನಾಟಕ ಚುನಾವಣೆ: ಕೇದಾರನಾಥ್ ನಿಂದ ನಾಗಸಾಧು ನುಡಿದ ಭವಿಷ್ಯಕರ್ನಾಟಕ ಚುನಾವಣೆ: ಕೇದಾರನಾಥ್ ನಿಂದ ನಾಗಸಾಧು ನುಡಿದ ಭವಿಷ್ಯ

ಬಡವರಿಗಾಗಿ ಹಗಲಿರುಳೂ ಶ್ರಮಿಸುತ್ತಿರುವ 'ಟೈಗರ್' ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯಾವುದೇ ಪಕ್ಷಗಳ ಹಂಗಿಲ್ಲದೆ ಜಾತ್ಯತೀತ ಜನತಾದಳ ಸ್ವಸಾಮರ್ಥ್ಯದಿಂದ ಸ್ಪಷ್ಟ ಬಹುಮತ ಪಡೆಯಲಿದೆ. ಇದು ನನ್ನ ಮಾತಲ್ಲ, ಇಡೀ ರಾಜ್ಯದ ಜನತೆಯ ಇಚ್ಛೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪ ಮುಖ್ಯಮಂತ್ರಿ ಪಟ್ಟದ ಬಗ್ಗೆ ಎಚ್ಡಿಕೆ ಹೇಳಿದ್ದೇನು?ಉಪ ಮುಖ್ಯಮಂತ್ರಿ ಪಟ್ಟದ ಬಗ್ಗೆ ಎಚ್ಡಿಕೆ ಹೇಳಿದ್ದೇನು?

ದೇವೇಗೌಡರ ಇಚ್ಛೆಯಂತೆ ಆರಂಭಿಸಿರುವ 'ನಮ್ಮ ಅಪ್ಪಾಜಿ' ಕ್ಯಾಂಟೀನ್, ಜಮೀರ್ ಅಹ್ಮದ್ ವಿರುದ್ಧದ ಜಿದ್ದು, ಸಿದ್ದರಾಮಯ್ಯನವರನ್ನು ಅವರ ಗರಡಿಯಲ್ಲಿಯೇ ಸೋಲಿಸುವುದು, ಕುಮಾರಣ್ಣನ ಕನಸಾದ ನಮ್ಮ ಟೈಗರ್ ಕ್ಯಾಬ್ ಆರಂಭಿಸಿರುವುದು... ಇತ್ಯಾದಿಗಳ ಬಗ್ಗೆ ಅನಿಸಿಕೆ ಹಂಚಿಕೊಂಡಿರುವ 46 ವರ್ಷದ 'ಪಕ್ಕಾ ಕಸಬುಗಾರ' ಶರವಣ ಅವರ ಯೋಜನೆಗಳು, ಕನಸುಗಳು ಮುಂದಿವೆ ಓದಿರಿ...

ನಮ್ಮ ಅಪ್ಪಾಜಿ ಕ್ಯಾಂಟೀನ್‌ ಯಶಸ್ವಿಯಾಗಿದೆಯೇ?

ನಮ್ಮ ಅಪ್ಪಾಜಿ ಕ್ಯಾಂಟೀನ್‌ ಯಶಸ್ವಿಯಾಗಿದೆಯೇ?

'ನಮ್ಮ ಅಪ್ಪಾಜಿ ಕ್ಯಾಂಟೀನ್‌ ಯೋಜನೆ 100 ದಿನಗಳನ್ನು ಪೂರೈಸಿದೆ. ಪ್ರತಿದಿನ 2,500 ರಿಂದ 3000 ಜನರು ಕ್ಯಾಂಟೀನ್‌ನಲ್ಲಿ ಉಟ, ಉಪಹಾರ ಸೇವಿಸುತ್ತಿದ್ದಾರೆ. ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಯೋಜನೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.'

'ನಮ್ಮ ಅಪ್ಪಾಜಿ ಕ್ಯಾಂಟೀನ್‌ ಆರಂಭಿಸಲು ದೇವೇಗೌಡರೇ ಸ್ಫೂರ್ತಿ. ವೈಕುಂಠ ಏಕಾದಶಿ ದಿನ ತಿರುಪತಿ ಲಾಡುಗಳನ್ನು ನಾನು ದೇವಾಲಯಗಳಲ್ಲಿ ಹಂಚುತ್ತಿದ್ದೆ. ಇದನ್ನು ನೋಡಿದ ದೇವೇಗೌಡರು ಬಡವರಿಗೆ ಅನ್ನ ಹಾಕುವ ಯೋಜನೆ ಏಕೆ ಮಾಡಬಾರದು? ಚಿಂತಿಸು ಎಂದರು. ಅವರ ಮಾತಿನಿಂದ ಸ್ಪೂರ್ತಿ ಪಡೆದು 'ನಮ್ಮ ಅಪ್ಪಾಜಿ ಕ್ಯಾಂಟೀನ್' ಘೋಷಣೆ ಮಾಡಿದೆ.

ಅಪ್ಪಾಜಿ ಕ್ಯಾಂಟೀನ್‌ ಯೋಜನೆ ಬೆಂಗಳೂರಿಗೆ ಸೀಮಿತವೇ?

ಅಪ್ಪಾಜಿ ಕ್ಯಾಂಟೀನ್‌ ಯೋಜನೆ ಬೆಂಗಳೂರಿಗೆ ಸೀಮಿತವೇ?

'ನಮ್ಮ ಅಪ್ಪಾಜಿ ಕ್ಯಾಂಟೀನ್ ಯೋಜನೆ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ. ಜೆಡಿಎಸ್ ಮುಖ್ಯ ಕಚೇರಿಯಲ್ಲಿ ಡಿಸೆಂಬರ್ 16ರಂದು ಕ್ಯಾಂಟೀನ್ ಆರಂಭವಾಗಲಿದೆ. ರಾಯಚೂರಿನಲ್ಲಿ ಜನವರಿಯಲ್ಲಿ ಕ್ಯಾಂಟೀನ್ ಆರಂಭಿಸಲಾಗುತ್ತದೆ' ಎಂದು ಟಿ.ಎ.ಶರವಣ ಹೇಳಿದರು.

'ಚನ್ನಪಟ್ಟಣದಲ್ಲಿ ಕಾರ್ಯಕರ್ತರು ಕ್ಯಾಂಟೀನ್ ಆರಂಭ ಮಾಡುತ್ತೇವೆ ಎಂದು ಒತ್ತಾಯ ಮಾಡುತ್ತಿದ್ದಾರೆ. ಮಂಡ್ಯದಲ್ಲಿ ಕ್ಯಾಂಟೀನ್ ತೆರೆದಿದ್ದೇವೆ. 2018ರಲ್ಲಿ ನಮ್ಮ ಸರ್ಕಾರ ಬಂದ ನಂತರ ರಾಜ್ಯದ ಎಲ್ಲಾ ತಾಲೂಕುಗಳಿಗೆ ಯೋಜನೆಯನ್ನು ವಿಸ್ತರಣೆ ಮಾಡಲಾಗುತ್ತದೆ' ಎಂದು ಶರವಣ ಹೇಳಿದರು.

ವಿಧಾನಸಭೆ ಚುನಾವಣೆಗೆ ಶರವಣ ಸ್ಪರ್ಧಿಸಲಿದ್ದಾರೆಯೇ?

ವಿಧಾನಸಭೆ ಚುನಾವಣೆಗೆ ಶರವಣ ಸ್ಪರ್ಧಿಸಲಿದ್ದಾರೆಯೇ?

'ಸಮಾಜ ಸೇವೆ ಮಾಡುವಾಗ ರಾಜಕೀಯಕ್ಕೆ ಬಂದರೆ ಅನುಕೂಲ ಎಂದು ಜನರು ಅಭಿಪ್ರಾಯಪಟ್ಟರು. ಕಷ್ಟ ಹೇಳಿಕೊಂಡು ಬಂದ ಜನರಿಗೆ ಅಳಿಲು ಸೇವೆಯನ್ನು ಮಾಡುತ್ತಿದ್ದೇನೆ. ಎರಡು ಬಾರಿ ಬಸವನಗುಡಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದೆ. ಆದರೆ, ದೇವೇಗೌಡರು ಎಂಎಲ್‌ಸಿ ಮಾಡಿದರು. ವಿಧಾನಸಭೆ ಶಾಸಕರು ಪರಿಷತ್ತಿಗೆ ಆರಿಸಿ ಕಳಿಸಿದರು'.

'ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಹಿರಿಯೂರು, ಚಿಕ್ಕಪೇಟೆ, ಬಸವನಗುಡಿ ಕ್ಷೇತ್ರದಿಂದ ಆಹ್ವಾನ ಬಂದಿದೆ. ಪಕ್ಷದ ನಾಯಕರ ತೀರ್ಮಾನ, ದೇವೇಗೌಡರ ಸಲಹೆಯಂತೆ ಮುಂದೆ ಹೋಗುವೆ. ನಾನು ಟಿಕೆಟ್ ಆಕಾಂಕ್ಷಿಯಲ್ಲ. ಕಾರ್ಯರ್ತರು ಹಿತೈಷಿಗಳ ಜೊತೆ ಚರ್ಚಿಸಿ ಸ್ಪರ್ಧೆ ಬಗ್ಗೆ ನಿರ್ಧಾರ ಕೈಗೊಳ್ಳುವೆ'.

ಬಂಡಾಯ ಶಾಸಕರನ್ನು ಸೋಲಿಸಲು ತಂತ್ರ ಸಿದ್ಧವಾಗಿದೆಯೇ?

ಬಂಡಾಯ ಶಾಸಕರನ್ನು ಸೋಲಿಸಲು ತಂತ್ರ ಸಿದ್ಧವಾಗಿದೆಯೇ?

'ಚಾಮರಾಜಪೇಟೆ ಸೇರಿದಂತೆ ಬಂಡಾಯ ಶಾಸಕರು ಇರುವ ಕಡೆ ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ. ಯಾವುದೇ ಕ್ಷೇತ್ರವನ್ನು ಪಕ್ಷ ಕಳೆದುಕೊಳ್ಳುವುದಿಲ್ಲ. ಕ್ಷೇತ್ರದ ಜನರೇ ಅವರ ವಿರುದ್ಧ ನಿಂತಿದ್ದಾರೆ. ಪಕ್ಷಕ್ಕೆ ಮೋಸ ಮಾಡಿದ್ದಾರೆ, ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ' ಎಂದು ಜನರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

'ಚಾಮರಾಜಪೇಟೆ, ಮಾಗಡಿ, ನಾಗಮಂಗಲ, ಪುಲಿಕೇಶಿ ನಗರ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಬಲಿಷ್ಠ ಅಭ್ಯರ್ಥಿಯನ್ನು ಹಾಕುತ್ತೇವೆ. ಕಾರ್ಯಕರ್ತರ ಪಡೆ ಜೊತೆ ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಕ್ಷೇತ್ರವನ್ನು ಉಳಿಸಿಕೊಳ್ಳುತ್ತೇವೆ' ಎಂದು ಶರವಣ ಹೇಳಿದರು.

ದೇವೇಗೌಡರ ಕುಟುಂಬದಿಂದ ಎಷ್ಟು ಜನ ಸ್ಪರ್ಧಿಸುತ್ತಾರೆ?

ದೇವೇಗೌಡರ ಕುಟುಂಬದಿಂದ ಎಷ್ಟು ಜನ ಸ್ಪರ್ಧಿಸುತ್ತಾರೆ?

'ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆಗಬಾರದು ಎಂಬ ನಿಯಮವಿಲ್ಲ. ಉತ್ತರ ಪ್ರದೇಶ ಸೇರಿದಂತೆ ಬೇರೆ-ಬೇರೆ ರಾಜ್ಯಗಳಲ್ಲಿಯೂ ಇಂತಹ ಬೆಳವಣಿಗೆ ನಡೆದಿವೆ. ನಾನು ಅದರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ. ವರಿಷ್ಠರು ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳುತ್ತಾರೆ'


'ಪ್ರಜ್ವಲ್ ರೇವಣ್ಣ ಅವರಿಗೆ ದೇವೇಗೌಡರು ಸಲಹೆ ಕೊಟ್ಟು, ಹುದ್ದೆ ನೀಡಿ ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ಸಂಚಾರ ಮಾಡು, ಯುವಕರನ್ನು ಸಂಘಟನೆ ಮಾಡು ಎಂದು ಸೂಚಿಸಿದ್ದಾರೆ. ಪ್ರಜ್ವಲ್ ಅದೇ ಹದಿಯಲ್ಲಿ ಹೋಗುತ್ತಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು ಚುನಾವಣೆಗೆ ನಿಲ್ಲುತ್ತಿಲ್ಲ. ಚನ್ನಪಟ್ಟಣದಲ್ಲಿ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ಕುಮಾರಸ್ವಾಮಿ ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ'.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಲು ವಿಶೇಷ ತಂತ್ರ ಮಾಡಿದ್ದೀರಾ?

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲ್ಲಲು ವಿಶೇಷ ತಂತ್ರ ಮಾಡಿದ್ದೀರಾ?

'ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ. ಚಾಂಮುಂಡೇಶ್ವರಿ ಕ್ಷೇತ್ರದಲ್ಲಿ ಅವರು ಸ್ಪರ್ಧೆ ಮಾಡಿದರೆ ನಮಗೆ ಯಾವುದೇ ಆತಂಕವಿಲ್ಲ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾದ ಬಳಿಕ ಜಿಲ್ಲಾ ಪಂಚಾಯಿತಿ, ಮಹಾ ನಗರ ಪಾಲಿಕೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಿದೆ'.

'ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ವಿಕಾಸ ಯಾತ್ರೆಯನ್ನು ಆರಂಭಿಸಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ ಒಂದು ಲಕ್ಷ ಜನರು ಭಾಗವಹಿಸಿದ್ದರು. ವರುಣಾ ಕ್ಷೇತ್ರದಲ್ಲಿ ಮಗನನ್ನು ನಿಲ್ಲಿಸಲು ಅವರು ಚಾಮುಂಡೇಶ್ವರಿಗೆ ಬರುತ್ತಿದ್ದಾರೆ. 2018ರ ಚುನಾವಣೆಯಲ್ಲಿಯೂ ಕ್ಷೇತ್ರ ಜೆಡಿಎಸ್ ಪಾಲಾಗಲಿದೆ' ಎಂದು ಶರವಣ ವಿಶ್ವಾ ವ್ಯಕ್ತಪಡಿಸಿದರು.

ಬಿಜೆಪಿ ಜೊತೆ ಒಳ ಒಪ್ಪಂದ ನಡೆದಿದೆಯೇ?

ಬಿಜೆಪಿ ಜೊತೆ ಒಳ ಒಪ್ಪಂದ ನಡೆದಿದೆಯೇ?

'ಚುನಾವಣೆಗಾಗಿ ಯಾವುದೇ ಒಳ-ಹೊರ ಒಪ್ಪಂದ ಮಾಡಿಕೊಂಡಿಲ್ಲ. ಗಾಳಿ ಸುದ್ದಿಯನ್ನು ಹಬ್ಬಿಸುವುದರಲ್ಲಿ ಬಿಜೆಪಿ ಎತ್ತಿದ ಕೈ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸಮಾನ ದೂರದಲ್ಲಿಟ್ಟು, ಹೋರಾಟ ಮಾಡುತ್ತೇವೆ. ಕಾಂಗ್ರೆಸ್, ಬಿಜೆಪಿ ಆಡಳಿತ ನೋಡಿದ ಜನರು ಈ ಬಾರಿ ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಮತ ಹಾಕುತ್ತಾರೆ' ಎಂದು ಶರವಣ ಹೇಳಿದರು.

ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳ ಬಳಕೆ ಹೇಗೆ?

ಪ್ರಚಾರಕ್ಕೆ ಸಾಮಾಜಿಕ ಜಾಲತಾಣಗಳ ಬಳಕೆ ಹೇಗೆ?

'ಚುನಾವಣಾ ಪ್ರಚಾರಕ್ಕೆ ಸಾಮಾಜಿಕ ಜಾಲ ತಾಣಗಳನ್ನು ಬಳಕೆ ಮಾಡಿಕೊಳ್ಳುತ್ತೇವೆ. 100 ಜನರ ತಂಡ ಪಕ್ಷದ ಕೇಂದ್ರ ಕಚೇರಿಯಲ್ಲಿ ಕೆಲಸ ಮಾಡುತ್ತಿದೆ. ಹಳ್ಳಿ-ಹಳ್ಳಿಯಲ್ಲಿರುವ ಜನರ ಅಂಗೈಗೆ ಕುಮಾರಸ್ವಾಮಿ ಅವರ ವಿಚಾರಗಳನ್ನು ತಲುಪಿಸುತ್ತೇವೆ'.

ಎಚ್ಡಿಕೆ ಕ್ಯಾಬ್ಸ್, ಟೈಗರ್ ಕ್ಯಾಬ್ ಆಗಿ ಬದಲಾಗಿದ್ದು ಏಕೆ?

ಎಚ್ಡಿಕೆ ಕ್ಯಾಬ್ಸ್, ಟೈಗರ್ ಕ್ಯಾಬ್ ಆಗಿ ಬದಲಾಗಿದ್ದು ಏಕೆ?

'ಮೊದಲು ಎಚ್ಡಿಕೆ ಕ್ಯಾಬ್ ಸರ್ವೀಸ್ ಎಂದೇ ನಾಮಕರಣ ಮಾಡಲು ಚಿಂತಿಸಿದ್ದೆವು. ಆದರೆ, ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಟೈಗರ್ ಎಂದು ಬದಲಾವಣೆ ಮಾಡಿದೆವು. ಕುಮಾರಸ್ವಾಮಿ ಅವರನ್ನು ಕಾರ್ಯಕರ್ತರು ಪ್ರೀತಿಯಿಂದ ಹುಲಿ ಎನ್ನುತ್ತಾರೆ. ಅದಕ್ಕಾಗಿ ಹೆಸರು ಸೂಕ್ತವಾಗಿದೆ'.

'ಚಿರತೆ ಬಂದರೆ ವೇಗ ಇರುತ್ತದೆ. ಸಿಂಹ ಬಂದರೆ ಗರ್ಜನೆ ಇರುತ್ತದೆ. ಹುಲಿ ಬಂದರೆ ಗಾಂಭೀರ್ಯತೆ ಇರುತ್ತದೆ. ಕುಮಾರಸ್ವಾಮಿ ಅವರು ಬಂದರೆ ಎಲ್ಲವೂ ಇರುತ್ತದೆ. ಈಗ ಯೋಜನೆಯನ್ನು ಆರಂಭಿಸಿದ್ದೇವೆ. ಕೆಲವರು ಇದರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಚಿಕ್ಕಪುಟ್ಟ ಅಡೆತಡೆಗಳಿವೆ. ಅದನ್ನು ಬಗೆಹರಿಸಲು ತನ್ವೀರ್ರ್ ಬಾಷಾ ಅವರ ತಂಡ ಕೆಲಸ ಮಾಡುತ್ತಿದೆ.

ಜೆಡಿಎಸ್ ಪಕ್ಷಕ್ಕೆ ಜನರು ಏಕೆ ಮತ ನೀಡಬೇಕು?

ಜೆಡಿಎಸ್ ಪಕ್ಷಕ್ಕೆ ಜನರು ಏಕೆ ಮತ ನೀಡಬೇಕು?

'ಎಲ್ಲಾ ಜಾತಿ/ಧರ್ಮದವರನ್ನು ಸಮಾನವಾಗಿ ಕಾಣುವ ಏಕೈಕ ಪಕ್ಷ ಜೆಡಿಎಸ್. ಅಲ್ಪ ಸಂಖ್ಯಾತರಿಗೆ ಅವಕಾಶ ಕೊಟ್ಟ ಪಕ್ಷ ನಮ್ಮದು. ಆರ್ಯವೈಶ್ಯ ಸಮುದಾಯಕ್ಕೆ ಸೇರಿದ ನನಗೆ ರಾಜಕಾರಣ ಮಾಡಲು ಅವಕಾಶ ಕೊಟ್ಟಿದ್ದಾರೆ. ವಕ್ತಾರನ್ನಾಗಿ ಮಾಡಿದ್ದಾರೆ. ಕೋರ್ ಕಮಿಟಿಯಲ್ಲಿ ಸ್ಥಾನ ನೀಡಿದ್ದಾರೆ'.

'ಎಲ್ಲರನ್ನು ಸಮಾನರಾಗಿ ಕಾಣುವ ಕುಮಾರಸ್ವಾಮಿ ಅವರ ಕನಸನ್ನು ನನಸು ಮಾಡಲು ಪಕ್ಷಕ್ಕೆ ಮತ ನೀಡಬೇಕು. ರಾಜ್ಯದ ಅಭಿವೃದ್ಧಿಗಾಗಿ ಪಕ್ಷದ ಪ್ರಣಾಳಿಕೆ ಸಿದ್ಧವಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿಗಾಗಿ ಮತ್ತೊಂದು ಪ್ರಣಾಳಿಕೆ ಮಾಡುತ್ತೇವೆ' ಎಂದು ಶರವಣ ಹೇಳಿದರು.

ಜನತಾ ಪರಿವಾರ ಮತ್ತೆ ಒಗ್ಗೂಡಲಿದೆಯೇ?

ಜನತಾ ಪರಿವಾರ ಮತ್ತೆ ಒಗ್ಗೂಡಲಿದೆಯೇ?

'ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ವಿರುದ್ಧ ಹಲವು ನಾಯಕರು ಮುನಿಸಿಕೊಂಡಿದ್ದಾರೆ. 40 ವರ್ಷ ರಾಜಕಾರಣ ಮಾಡಿದ ಎಚ್.ವಿಶ್ವನಾಥ್ ನೊಂದು ಜೆಡಿಎಸ್ ಸೇರಿದರು. ಸಿದ್ದರಾಮಯ್ಯ ಮುಕ್ತ ಕಾಂಗ್ರೆಸ್ ಮಾಡಬೇಕು ಎಂಬ ಕೂಗು ಜೋರಾಗಿದೆ. ಜನತಾ ಪರಿವಾರದ ನಾಯಕರು ಪಕ್ಷಕ್ಕೆ ವಾಪಸ್ ಬರಲಿದ್ದಾರೆ. ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದಲ್ಲಿ ಕ್ರಾಂತಿಯಾಗಲಿದೆ. ಬಿಜೆಪಿ, ಕಾಂಗ್ರೆಸ್‌ನ ಹಲವು ನಾಯಕರು ಪಕ್ಷಕ್ಕೆ ವಾಪಸ್ ಬರಲಿದ್ದಾರೆ'.

ರಾಷ್ಟ್ರೀಯ ಪಕ್ಷಗಳು ಕನ್ನಡಿಗರಿಗೆ ಅನ್ಯಾಯ ಮಾಡಿವೆಯೇ?

ರಾಷ್ಟ್ರೀಯ ಪಕ್ಷಗಳು ಕನ್ನಡಿಗರಿಗೆ ಅನ್ಯಾಯ ಮಾಡಿವೆಯೇ?

'ಕನ್ನಡಿಗರು ಸ್ವಾಭಿಮಾನಿಗಳು, ಕೈ ಜೋಡಿಸಿ ಸ್ವಾಗತ ಮಾಡುತ್ತಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಎಲ್ಲದಕ್ಕೂ ಹೈಕಮಾಂಡ್ ಬಳಿ ಹೋಗುತ್ತವೆ. ಮಹದಾಯಿ ವಿಚಾರದಲ್ಲಿ ಬಿಜೆಪಿಯ 17 ಸಂಸದರು ಏನು ಮಾಡಿದ್ದಾರೆ?. ರಾಜ್ಯದ ಎಲ್ಲಾ ಸಮಸ್ಯೆಗಳಿಗೂ ದೇವೇಗೌಡರು, ಕುಮಾರಸ್ವಾಮಿ ಅವರು ಹೋರಾಟ ಮಾಡಬೇಕೆ?. ಕನ್ನಡಿಗರಿಗೆ ಪ್ರಾದೇಶಿಕ ಪಕ್ಷ ಬೇಕು'.

ಹೊಸ ಪ್ರಾದೇಶಿಕ ಪಕ್ಷಗಳ ಬಗ್ಗೆ ನಿಮ್ಮ ಅಭಿಪ್ರಾಯ?

ಹೊಸ ಪ್ರಾದೇಶಿಕ ಪಕ್ಷಗಳ ಬಗ್ಗೆ ನಿಮ್ಮ ಅಭಿಪ್ರಾಯ?

'ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ ಯಾರು ಬೇಕಾದರು ಪಕ್ಷ ಕಟ್ಟಬಹುದು. ಆಲೋಚನೆ, ಚಿಂತನೆ ಇರಬೇಕು. ಉಪೇಂದ್ರ ಅವರು ಪಕ್ಷ ಕಟ್ಟುತ್ತಿದ್ದಾರೆ. ಇದು ಚಿತ್ರರಂಗವಲ್ಲ, ರಾಜಕೀಯ ಎಂಬುದು ತಿಳಿದಿರಲಿ. ರಾಜ್ಯದ ಜನರಿಗೆ ಒಳ್ಳೆಯದನ್ನು ಮಾಡಲು ಯಾರು ಪಕ್ಷ ಕಟ್ಟಿದರೂ ಸ್ವಾಗತ. ಈ ಪಕ್ಷಗಳಿಂದ ನಮ್ಮ ಪಕ್ಷಕ್ಕೆ ಯಾವುದೇ ಹಾನಿ ಆಗುವುದಿಲ್ಲ'.

English summary
T.A. Sharavana, the right hand of H D Deve Gowda and the man behind Appaji Canteen, is not just the gold merchant or part time politician. The short man has tall ambitions. He has no doubt that H D Kumaraswamy will rule the Karnataka after assembly elections in 2018. Sharavana has clearly set his eyes on assembly election and serve the poor people of Karnataka. An interview with T A Sharavana, MLC and spokes person of JDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X