ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟ್ ಕಾಯಿನ್; ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಒತ್ತಾಯವೇನು?

|
Google Oneindia Kannada News

ಬೆಂಗಳೂರು, ನವೆಂಬರ್ 15; " ಬಿಟ್ ಕಾಯಿನ್ ಹಗರಣದ ಸೂತ್ರಧಾರನೆನ್ನಲಾದ ಶ್ರೀಕೃಷ್ಣ/ ಶ್ರೀಕಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕೆಂದು‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಟ್ ಕಾಯಿನ್ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಹಗರಣದ ಸೂತ್ರಧಾರ ಎಂಬ ಆರೋಪ ಹೊಂದಿರುವ ಶ್ರೀಕಿ ಕಳೆದ ವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ.

ಬಿಟ್ ಕಾಯಿನ್ ಹಗರಣ ಹೊರ ಬಂದ ಬಳಿಕ ಬೊಮ್ಮಾಯಿ 'ಮಂದಹಾಸ' ಮರೆ ಆಯಿತೇ?ಬಿಟ್ ಕಾಯಿನ್ ಹಗರಣ ಹೊರ ಬಂದ ಬಳಿಕ ಬೊಮ್ಮಾಯಿ 'ಮಂದಹಾಸ' ಮರೆ ಆಯಿತೇ?

ಸೋಮವಾರ ಸಿದ್ದರಾಮಯ್ಯ ಈ ಕುರಿತು ಮಾತನಾಡಿದ್ದಾರೆ, "ವಿಶ್ವದಾದ್ಯಂತ ಗಮನ ಸೆಳೆದಿರುವ ಈ ಹಗರಣದಲ್ಲಿ ಬಹಳಷ್ಟು ಪ್ರಭಾವಶಾಲಿಗಳು ಷಾಮೀಲಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಭದ್ರತೆ ಅಗತ್ಯವಾಗಿದೆ" ಎಂದು ಹೇಳಿದ್ದಾರೆ.

ಬಿಟ್ ಕಾಯಿನ್; ಪ್ರತಾಪ್ ಸಿಂಹ ಬಾಯಲ್ಲಿ ಇದೆಂಥ ಮಾತು? ಬಿಟ್ ಕಾಯಿನ್; ಪ್ರತಾಪ್ ಸಿಂಹ ಬಾಯಲ್ಲಿ ಇದೆಂಥ ಮಾತು?

 Give Police Protection To Sriki Siddaramaiah Urges CM

"ಬಿಟ್ ಕಾಯಿನ್ ಹಗರಣ ಸ್ಪೋಟಗೊಂಡ ನಂತರ ಸಣ್ಣ ಮಟ್ಟದ ಆರೋಪದ ಮೇಲೆ ನಾಟಕೀಯ ರೀತಿಯಲ್ಲಿ ನಡೆದಿರುವ ಶ್ರೀಕೃಷ್ಣನ ಬಂಧನ, ಅಷ್ಟೇ ನಾಟಕೀಯವಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದು, ಪೊಲೀಸರ ನಡವಳಿಕೆ ಸಂಶಯಗಳಿಗೆ ಕಾರಣವಾಗಿದೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಿಟ್ ಕಾಯಿನ್ ವಿಚಾರ; ಮೌನ ಮುರಿದ ಮುಖ್ಯಮಂತ್ರಿಗಳು! ಬಿಟ್ ಕಾಯಿನ್ ವಿಚಾರ; ಮೌನ ಮುರಿದ ಮುಖ್ಯಮಂತ್ರಿಗಳು!

"ಕಳೆದ ವರ್ಷ ರಾಜ್ಯ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಶ್ರೀಕಿಗೆ ಮಾದಕ ವಸ್ತು ಚಟ ಇದ್ದುದನ್ನು ಹೇಳಲಾಗಿದೆ. ಆ ಸಮಯದಲ್ಲಿ ಶ್ರೀಕಿ ತಂದೆಯೇ ಪತ್ರ ಬರೆದು ತಮ್ಮ ಮಗನಿಗೆ ಪೊಲೀಸರು ಡ್ರಗ್ಸ್ ನೀಡಿದ್ದರು ಎಂದು ಆರೋಪಿಸಿದ್ದರು ಎನ್ನುವುದು ಗಮನಾರ್ಹ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

"ಶ್ರೀಕಿ ಈಗಲೂ ಡ್ರಗ್ ವ್ಯಸನಿಯೇ?, ವ್ಯಸನಿಯಾಗಿದ್ದರೆ ಪೊಲೀಸರು ಈ ಬಾರಿ ಬಂಧಿಸಿದಾಗ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆಯೇ?. ಡ್ರಗ್ಸ್ ವ್ಯಸನಿ ಎನ್ನುವುದು ಪರೀಕ್ಷೆಯಿಂದ ದೃಡಪಟ್ಟಿದ್ದರೆ ಸೂಕ್ತ ಚಿಕಿತ್ಸೆ ನೀಡಲಾಗಿದೆಯೇ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

"ಈ ಬಗ್ಗೆ ಮುಖ್ಯಮಂತ್ರಿಗಳು ಮತ್ತು ರಾಜ್ಯ ಗೃಹ ಸಚಿವರು ಮಾಹಿತಿ‌ ನೀಡಬೇಕು. ಬಿಟ್ ಕಾಯಿನ್ ಹಗರಣ ತಂತ್ರಜ್ಞಾನ ಅವಲಂಬಿಸಿರುವ 'ಬಿಳಿಕಾಲರ್ ಅಪರಾಧ'. ಇದಕ್ಕೆ ಸಂಬಂಧಿಸಿದ ಖಾತೆಗಳ ಪಾಸ್ ವರ್ಡ್ ಸೇರಿದಂತೆ ಬಹಳಷ್ಟು ಮಾಹಿತಿಗಳು ಶ್ರೀಕಿಯ ನೆನಪಲ್ಲಿ ಮಾತ್ರ ಇದೆ, ಲಿಖಿತ ದಾಖಲೆಗಳಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕಿಯ ಪ್ರಾಣಕ್ಕೆ ಅಪಾಯದ ಸಾಧ್ಯತೆ ಇದೆ" ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್, ಬಿಜೆಪಿ ರಾಜಕೀಯ; ಬಿಟ್ ಕಾಯಿನ್ ಹಗರಣದ ವಿಚಾರ ಈಗಾಗಲೇ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ರಾಜಕೀಯ ಆರೋಪಗಳಿಗೆ ವೇದಿಕೆಯಾಗಿದೆ. ಹಗರಣದ ತನಿಖೆ ಬಗ್ಗೆ ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ.

ಮಾಜಿ ಸಚಿವ, ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್, "ಬಿಟ್ ಕಾಯಿನ್ ಹಗರಣದ ತನಿಖೆಯನ್ನು ಕೇಂದ್ರ ಹಾಗೂ ರಾಜ್ಯದ ತನಿಖಾ ಸಂಸ್ಥೆಗಳು ನಡೆಸುತ್ತಿವೆ. ಈ ಹಗರಣದಲ್ಲಿ ಬಿಜೆಪಿ ನಾಯಕರ ಹೆಸರು ಕೇಳಿಬರುತ್ತಿದೆ. ಹೀಗಿರುವಾಗ ಆರೋಪ ನಿರ್ಲಕ್ಷಿಸಿದರೆ ಹಗರಣ ಮುಚ್ಚಿ ಹಾಕುವ ಯತ್ನವಲ್ಲವೇ.?" ಎಂದು ಪ್ರಶ್ನಿಸಿದ್ದಾರೆ.

"ಪ್ರಧಾನಿಯಾದವರು ಸರಿಯಾದ ತನಿಖೆ ನಡೆಸಿ ಆರೋಪಮುಕ್ತರಾಗಿ ಎಂಬ ಸಲಹೆ ನೀಡಬೇಕು. ನಿರ್ಲಕ್ಷಿಸಿ ಎಂದರೆ ಅರ್ಥವೇನು.? ಬಿಟ್ ಕಾಯಿನ್ ಹಗರಣದ ಆರೋಪ ನಿರ್ಲಕ್ಷಿಸುವುದು‌ ವ್ಯವಸ್ಥಿತ ತಂತ್ರ" ಎಂದು ಹೇಳಿದ್ದಾರೆ.

"ಈ ಹಗರಣ ಈಗಾಗಲೇ ದೇಶಾದ್ಯಾಂತ ಸದ್ದು ಮಾಡುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ನಾಯಕರು ಪಾರದರ್ಶಕ ತನಿಖೆ ನಡೆಸಲು ಬೊಮ್ಮಾಯಿಯವರಿಗೆ ಆಗ್ರಹಿಸಬೇಕು. ಅದರ ಬದಲು ನಿರ್ಲಕ್ಷಿಸಿ ಎಂದು ಸಲಹೆ ಕೊಟ್ಟರೆ ತನಿಖೆ ಹಳ್ಳ ಹಿಡಿಯುವುದು. ಈ ಹಗರಣದ ತನಿಖೆ ಪಾರದರ್ಶಕವಾಗಿ ನಡೆಯಲಿ" ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳ ಹೇಳಿಕೆ; ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ಬಿಟ್ ಕಾಯಿನ್ ಹಗರಣದ ಹಿಂದೆ ಯಾರು ಇದ್ದರೂ ಕೂಡಾ ಬಿಡುವುದಿಲ್ಲ, ಖಂಡಿತವಾಗಿಯೂ ಬಲಿ ಹಾಕುತ್ತೇವೆ" ಎಂದು ಹೇಳಿದ್ದರು.

"ಬಿಟ್ ಕಾಯಿನ್ ಹಗರಣ 2016ರಿಂದ ನಡೆಯುತ್ತಿದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. 2016ರಿಂದ ಇದ್ದಿದ್ದರೆ ನಿಮ್ಮ ಸರ್ಕಾರ ಏಕೆ ತನಿಖೆ ಮಾಡಲಿಲ್ಲ. ರಂದೀಪ್ ಸರ್ಜೇವಾಲ ಅಧಿಕಾರದಲ್ಲಿದ್ದ ಸಚಿವರು, ಮುಖ್ಯಮಂತ್ರಿಗಳಿಗೆ ಪ್ರಶ್ನಿಸಬೇಕಿತ್ತು. 2016ರಲ್ಲಿ ಶ್ರೀಕಿಯನ್ನು ಬಂಧಿಸಿ ಬಿಡುಗಡೆ ಮಾಡಿದಿರಿ?" ಎಂದು ಪ್ರಶ್ನಿಸಿದ್ದರು.

Recommended Video

ವರಿಷ್ಟರಿಂದ ಬಸವರಾಜ್ ಬೊಮ್ಮಾಯಿ ಭೇಟೆ! | Oneindia Kannada

English summary
Leader of opposition Siddaramaiah urged the chief minister of Karnataka to give police protection to Srikrishna alias Sriki in bitcoin case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X