ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿಥಿ ಉಪನ್ಯಾಸಕರಿಗೆ ಸಿಹಿಸುದ್ದಿ, ವೇತನ ಹೆಚ್ಚಳ, ಎಷ್ಟು?

|
Google Oneindia Kannada News

ಬೆಂಗಳೂರು, ಜನವರಿ 30: ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೊಂದು ಸಿಹಿಸುದ್ದಿ, ಉಪನ್ಯಾಸಕರ ಗೌರವ ಧನ ಹೆಚ್ಚಿಸಲು ಯುಜಿಸಿ ನಿರ್ಧರಿಸಿದೆ.

ಪದವಿ, ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಬೋಧನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಗೌರವ ಧನ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಕುಲಪತಿಗಳಿಗೆ ಸೂಚನೆ ನೀಡಿದೆ. ಅದರ ಪ್ರಕಾರ ಮಾಸಿಕ ಗರಿಷ್ಠ 50 ಸಾವಿರ ರೂವರೆಗೆ ವೇತನ ನೀಡಬೇಕಾಗುತ್ತದೆ.

2,997 ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರದ ತಯಾರಿ 2,997 ಅತಿಥಿ ಉಪನ್ಯಾಸಕರ ನೇಮಕಕ್ಕೆ ಸರ್ಕಾರದ ತಯಾರಿ

ಅತಿಥಿ ಉಪನ್ಯಾಸಕರನ್ನು ಬೇಕಾಬಿಟ್ಟಿ ನೇಮಕ ಮಾಡುವಂತಿಲ್ಲ, ವಿವಿಗಳು ಪ್ರತ್ಯೇಕ ಸಮಿತಿ ರಚಿಸಬೇಕು. ಕುಲಪತಿ ಅಥವಾ ಅವರು ಸೂಚಿಸಿದ್ದ ವ್ಯಕ್ತಿಯು ಆಯ್ಕೆ ಸಮಿತಿ ಸದಸ್ಯರಾಗಿರುತ್ತಾರೆ. ವಿಷಯ ತಜ್ಞ, ಆಯಾ ವಿಷಯ ಹಿರಿಯ ಡೀನ್, ವಿಭಾಗದ ಮುಖ್ಯಸ್ಥ, ಶೈಕ್ಷಣಿಕ ತಜ್ಞರು ಸಮಿತಿಯಲ್ಲಿರಬೇಕು.

Give guest faculty Rs 50 thousand instead of Rs 9k

ಅತಿಥಿ ಉಪನ್ಯಾಸಕರಿಗೂ ಏಳನೇ ವೇತನ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಗೌರವ ಧನ ನೀಡಬೇಕೆಂದು ವಿವಿ ಧನ ಸಹಾಯ ಆಯೋಗ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ತಿಳಿಸಿತ್ತು.

ರಾಜ್ಯದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, 14 ಸಾವಿರ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಜ್ಯ ಸರ್ಕಾರ 11-14 ಸಾವಿರ ರೂ ಮಾಸಿಕ ಗೌರವ ಧನ ನೀಡುತ್ತಿದೆ.ಈ ಎಲ್ಲಾ ನಿಯಮಗಳು ಜನವರಿ 28ರಿಂದಲೇ ಅನ್ವಯವಾಗಲಿವೆ.

English summary
The University grants commission(UGC) has asked the state government to fix a minimum salary for guest faculty working in government degree colleges and various universities in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X