ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಹೊರತುಪಡಿಸಿ, ದಕ್ಷಿಣದಲ್ಲಿ ಹೆಣ್ಣುಶಿಶು ಜನನ ಇಳಿಕೆ : ಸಮೀಕ್ಷೆ

|
Google Oneindia Kannada News

ನವದೆಹಲಿ, ಜನವರಿ 29: ರಾಜ್ಯದಲ್ಲಿ ಲಿಂಗಾನುಪಾತದಲ್ಲಿ ದಿಢೀರ್ ಕುಸಿತ ಕಂಡಿದೆ, 2007ರಿಂದ 2016ರ ಅವಧಿಯಲ್ಲಿ ಲಿಂಗಾನುಪಾತದ ವರದಿಯಲ್ಲಿ ಕೇರಳ ಹೊರತುಪಡಿಸಿ ದಕ್ಷಿಣದಲ್ಲಿ ಹೆಣ್ಣು ಮಕ್ಕಳ ಜನನ ಪ್ರಮಾಣ ಇಳಿಕೆಯಾಗಿದೆ.

ಪಂಜಾಬ್, ಹರ್ಯಾಣಾದಂತಹ ರಾಜ್ಯಗಳಲ್ಲಿ ಸಾಮಾನ್ಯವಾಗಿ ಲಿಂಗಾನುಪಾತದಲ್ಲಿ ಭಾರಿ ವ್ಯತ್ಯಾಸ ಇರುತ್ತದೆ. ಆದರೆ ಅಚ್ಚರಿ ಎಂಬಂತೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಗಂಡು ಮತ್ತು ಹೆಣ್ಣಿನ ಲಿಂಗಾನುಪಾತ ಭಾರಿ ಪ್ರಮಾಣದಲ್ಲಿ ಕುಸಿದಿದೆ ಎಂಬ ಅಂಶವನ್ನು ಕೇಂದ್ರ ಸರ್ಕಾರದ ವರದಿಯೊಂದು ತಿಳಿಸಿದೆ.

ಮೈಸೂರಿನಲ್ಲಿ ಇಳಿಮುಖವಾಗಿದೆ ಹೆಣ್ಣು ಮಕ್ಕಳ ಜನನ ಪ್ರಮಾಣ ಮೈಸೂರಿನಲ್ಲಿ ಇಳಿಮುಖವಾಗಿದೆ ಹೆಣ್ಣು ಮಕ್ಕಳ ಜನನ ಪ್ರಮಾಣ

2007ರಿಂದ 2016ರ ನಡುವೆ ದಕ್ಷಿಣ ಭಾರತದ ಕೇರಳ ಹೊರತುಪಡಿಸಿ, ಉಳಿದೆಲ್ಲಾ ರಾಜ್ಯಗಳಲ್ಲಿ ಲಿಂಗಾನುಪಾತ ಭಾರೀ ಪ್ರಮಾಣದಲ್ಲಿ ಕುಸಿದಿದೆ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Girl birth ratio decreased in the state

ಕರ್ನಾಟಕದಲ್ಲಿ ಗಂಡು ಮತ್ತು ಹೆಣ್ಣಿನ ಲಿಂಗಾನುಪಾತವು 1004ರಿಂದ 896ಕ್ಕೆ ಕುಸಿದಿದೆ. ಇನ್ನು 2013ರಲ್ಲಿ ಆಂಧ್ರಪ್ರದೇಶದಿಂದ ಪ್ರತ್ಯೇಕವಾಗಿ ಹೊರಹೊಮ್ಮಿದ ತೆಲಂಗಾಣದಲ್ಲಿ 954ರಷ್ಟಿದ್ದ ಹೆಣ್ಣುಮಕ್ಕಳ ಜನನ ಪ್ರಮಾಣ 881ಕ್ಕೆ ಕುಸಿದಿದೆ. ಅಲ್ಲದೆ ಆಂಧ್ರ ಪ್ರದೇಶದಲ್ಲಿಯೂ 971 ರಷ್ಟಿದ್ದ ಹೆಣ್ಣು ಮಕ್ಕಳ ಜನನವು 2016ರಲ್ಲಿ 806ಕ್ಕೆ ಕುಸಿದಿದೆ.

English summary
According to on decade data, girl child ratio of karnataka is decreasing dramatically.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X