ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಜಯಪುರದ ಜವಾರಿ ಕನ್ನಡಿಗನ ಮೆಚ್ಚುವಂತ ಸಾಧನೆ

ಆತ್ಮವಿಶ್ವಾಸವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು, ಇಡೀ ಜಗತ್ತನ್ನೇ ಗೆಲ್ಲಬಹುದು ಎಂಬುದಕ್ಕೆ ವಿಜಯಪುರದ ಗಿರೀಶ್ ಬದ್ರಗೊಂಡ ಅವರೇ ಜ್ವಲಂತ ಉದಾಹರಣೆ. ಗಿರೀಶ್ ಇಂದು ಹಲವಾರು ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.

By ಶ್ರೀಕಾಂತ್ ಶೇಷಗಿರಿ
|
Google Oneindia Kannada News

ಸಾಧಕರು ಎಂದೂ ತಮ್ಮ ಸಾಧನೆಯನ್ನು ತೋರಿಸಿಕೊಳ್ಳಲು ಇಚ್ಛಿಸುವುದಿಲ್ಲ. ಎಲೆಮರೆ ಕಾಯಿಗಳಂತೆ ತಮ್ಮಷ್ಟಕ್ಕೆ ತಾವು ಕರ್ಮಯೋಗಿಗಳಾಗಿ ಕೈಂಕರ್ಯದಲ್ಲಿ ಮುಳುಗಿರುತ್ತಾರೆ. ಅಂಥ ಅಪರೂಪದ ವ್ಯಕ್ತಿ, ವಿಜಯಪುರದ ರೈತನ ಮಗ ಗಿರೀಶ್ ಬದ್ರಗೊಂಡ.

ಕೈಯಲ್ಲಿ ಕಿಲುಬು ಕಾಸಿಲ್ಲದಿದ್ದರೂ ಸಾಧನೆಯೊಂದನ್ನೇ ಕನಸಾಗಿಸಿಕೊಂಡು 11 ವರ್ಷಗಳ ಹಿಂದೆ, ಒಂದು ಲ್ಯಾಪ್ಟಾಪ್ ಮತ್ತು ರೂಟರ್ ಹಿಡಿದುಕೊಂಡು ಬೆಂಗಳೂರು ಮಹಾನಗರಗೆ ಬಂದು ರೈತರಿಗೆ ಅನುಕೂಲವಾಗುವಂಥ ಹಲವಾರು ಸಲಕರಣೆಗಳನ್ನು ಆವಿಷ್ಕರಿಸಿರುವ ಗಿರೀಶ್ ನಿಜಕ್ಕೂ ರೈತನ ಸ್ನೇಹಿತ!

ಆತ್ಮವಿಶ್ವಾಸವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು, ಇಡೀ ಜಗತ್ತನ್ನೇ ಗೆಲ್ಲಬಹುದು ಎಂಬುದಕ್ಕೆ ಗಿರೀಶ್ ಅವರೇ ಜ್ವಲಂತ ಉದಾಹರಣೆ. ಕರ್ನಾಟಕದ ಹೆಮ್ಮೆಯ ಪುತ್ರ ಗಿರೀಶ್ ಅವರು ಮಂಗಳವಾರ ರಾಷ್ಟ್ರಪತಿ ಭವನದಲ್ಲಿ (Festival of Innovation -2017 at Rashtrapati Bhavan) ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸುತ್ತಿದ್ದಾರೆ. ಇದು ಅವರಿಗೆ ಮಾತ್ರವಲ್ಲ ಇಡೀ ಕನ್ನಡನಾಡಿಗೆ ಹೆಮ್ಮೆಯ ಸಂಗತಿ. [ಕೋಲನೂರಿ ನಿಂತ ದೇವತೆ... ಕಾಲಮೀರಿ ನಡೆದಳು...!]

ಹೀಗೆ ಬೆಂಗಳೂರಿಗೆ ಬಂದಿದ್ದ ಗಿರೀಶ್ ಬೆಟ್ಟದಷ್ಟು ಕನಸು, ಆನೆಯ ಬಲದಷ್ಟು ಆತ್ಮವಿಶ್ವಾಸದೊಂದಿಗೆ ಪರಿಚಯವಿಲ್ಲದ ಮಹಾನಗರಿಗೆ ಬಂದಿದ್ದರು. ಅವರ ಈ ಪ್ರಯಾಣ ಕಷ್ಟಗಳಿಂದ ಕುಡಿತ್ತೇ ಹೊರತು ಯಾವ ಸುಖಭೋಗದಿಂದಲ್ಲ. ಸಾಧನೆ ಮಾಡಬೇಕೆಂದು ನಿಂತವನಿಗೆ ಅನುಕೂಲತೆಗಳು ಬಗ್ಗೆ ಕೊರತೆ ಕಾಣಲ್ಲ. ಯಾಕೆಂದರೆ ಅವರು ತಮ್ಮ ಅನುಕೂಲತೆಗಳನ್ನು ತಾವೇ ಸ್ವತಃ ಪೂರೈಸಿಕೊಳ್ಳುವಷ್ಟು ಸಾಮರ್ಥ್ಯ ಉಳ್ಳವರಾಗಿರುತ್ತಾರೆ.

ಅವರು ಮಾಡಿರುವ ಸಾಧನೆಗಳು ಒಂದೇ ಎರಡೇ... ಎಲೆ ಮರೆಯ ಕಾಯಿಯಂತೆ ತಮ್ಮ ನಿಸ್ವಾರ್ಥ ಸೇವೆಯನ್ನು ಮಾಡುತ್ತಿರುವ ಗಿರೀಶ್ ಅದೆಷ್ಟೋ ಯುವಕರಿಗೆ ಸ್ಫೂರ್ತಿ. ಅವರಿಗೆ ಶುಭವಾಗಲಿ, ಅವರ ಕೀರ್ತಿ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಬೆಳಗಲಿ ಮತ್ತು ರೈತರಿಗೆ ಅನುಕೂಲವಾಗುವಂಥ ಇನ್ನಷ್ಟು ಆವಿಷ್ಕಾರಗಳು ಹೊರಬರಲಿ. ಇಲ್ಲಿವೇ ನೋಡಿ ಅವರ ಸಾಧನೆಗಳು.. [ಕಲುಷಿತ ನೀರಿಗೆ ಜಲಚಿಕಿತ್ಸೆ, ಸಪ್ತಗಿರಿ ವಿದ್ಯಾರ್ಥಿಗಳ ಸಾಧನೆ]

ಪರಿಸರ ಸ್ನೇಹಿ ಬೋರ್ ವೆಲ್ ಸ್ಕ್ಯಾನರ್

ಪರಿಸರ ಸ್ನೇಹಿ ಬೋರ್ ವೆಲ್ ಸ್ಕ್ಯಾನರ್

ಇದು ಒಂದು ಸರಳ ಪರಿಸರ ಸ್ನೇಹಿ ಆವಿಷ್ಕಾರವೇ ಸಹಿ. ಉದ್ದವಾದ ವೈರ್ ಗೆ ಕ್ಯಾಮೆರಾ ಕಟ್ಟಿ ಭೂಮಿಯೊಳಗೆ ಇಳಿಸಿದರೆ ಇದು ತಳಭಾಗದಲ್ಲಿ 180 ಡಿಗ್ರಿ ತಿರುಗಿ ನೀರಿನ ಸೆಲೆಯನ್ನು ಕಂಡಿ ಹಿಡಿಯುತ್ತೆ. ಇದನ್ನು ಕ್ಲಿಕ್ ಮಾಡಿ ನೀರಿನ ಲಭ್ಯತೆ ಮತ್ತು ಅದರ ಒಳ ಹರಿವಿನ ಮಾಹಿತಿಯನ್ನು ರೈತರಿಗೆ ನೀಡುತ್ತದೆ. ಈ ಸುಲಭವಾದ ಆವಿಷ್ಕಾರವೇ ಗಿರೀಶ್ ಅವರ ಸಕ್ಸಸ್... ಇದಕ್ಕೆ ಅವರಿಗೆ ರಾಷ್ಟ್ರಪತಿಗಳಿಂದ ರಾಷ್ಟೀಯ ಆವಿಷ್ಕಾರ ಪ್ರಶಸ್ತಿ ಕೂಡಾ ಲಭಿಸಿದೆ.

ಮೈಕ್ರೋ ಇರ್ರೀಗೇಷನ್ ಸಿಸ್ಟಮ್

ಮೈಕ್ರೋ ಇರ್ರೀಗೇಷನ್ ಸಿಸ್ಟಮ್

ಇದನ್ನು ನೀರಿನ ಪಂಪ್ ಗೆ ಅಳವಡಿಸಿದರೆ ಸಾಕು ಬೆಳೆಗೆ ಎಷ್ಟು ಬೇಕೋ ಅಷ್ಟು ನೀರನ್ನು ಪೂರೈಸುತ್ತದೆ. "ಸೇವ್ ವಾಟರ್ ಸೇವ್ ಲೈಫ್ " ಅನ್ನೋ ಹಾಗೆ ಈ ಸಿಂಪಲ್ ಆವಿಸ್ಕಾರ ರೈತರಿಗೆ ತುಂಬಾ ಅನುಕೂಲವಾಗಿದೆ. ಇದಕ್ಕೆ ಆಂಡ್ರಾಯ್ಡ್ ನ ಟಚ್ ನೀಡಿದ್ದು ಮನೇಲಿದ್ದೇ ಮೊಬೈಲ್ ಮೂಲಕ ಪಂಪ್ ಆನ್ ಅಂಡ್ ಆಫ್ ಮಾಡಬಹುದಾಗಿದೆ. ಇದು ಸೋಲಾರ್ ವಿದ್ಯುತ್ನಿಂದ್ ಕಾರ್ಯ ಮಾಡುತ್ತದೆ. ಇದರಿಂದ ರೈತರ ಖರ್ಚು ಕಮ್ಮಿ ಜಾಸ್ತಿ ಲಾಭ.

ಹಕ್ಕಿಗಳ ದನಿ ಅನಿಕಸಿರುವ ಬರ್ಡ್ ರೆಫೆಲ್ಲರ್

ಹಕ್ಕಿಗಳ ದನಿ ಅನಿಕಸಿರುವ ಬರ್ಡ್ ರೆಫೆಲ್ಲರ್

ಇದು ಎಲ್ಲ ರೈತರು ಫೇಸ್ ಮಾಡೋ ಕಾಮನ್ ಪ್ರಾಬ್ಲಮ್ ಗೆ ಸೊಲ್ಯೂಷನ್. ಹಕ್ಕಿಗಳ ಕಾಟದಿಂದ ಬೆಳೆ ಹಾನಿಯನ್ನು ತಡೆಯೋ ತಂತ್ರಾಂಶ. ಎಂಟು ಸ್ಪೀಕರ್ಗಳನ್ನು ಹೊಂದಿರೋ ಈ ಯಂತ್ರ ಬೇರೆ ಬೇರೆ ಧ್ವನಿಗಳನ್ನು ಅನುಕರಿಸುತ್ತೆ. ಹಕ್ಕಿಗಳು ಬಂದುಕೂತಾಗ ಈ ಯಂತ್ರ ವಿಚಿತ್ರ ಧ್ವನಿಗಳ ಮೂಲಕ ಆ ಹಕ್ಕಿಗಳನ್ನ ಓಡಿಸಿ ಬೆಳೆ ಹಾನಿಯನ್ನು ಕಂಟ್ರೋಲ್ ಮಾಡುತ್ತೆ. ಇದರಿಂದ್ ರೈತ ಮನೇಲಿ ಹಾಯಾಗಿ ಮಲಗಬಹುದು.

ಸರಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ

ಸರಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಜಾಗೃತಿ

ಇವರು ತಮ್ಮ ಪ್ರೊಜೆಕ್ಟ್ಗಳನ್ನು ಸಾರಕಾರಿ ಶಾಲೆಗಳಿಗೆ ಹೋಗಿ ಅಲ್ಲಿ ಸೆಮಿನಾರ್ಸ್ ಕಂಡಕ್ಟ್ ಮಾಡಿ ಲೈವ್ ಡೆಮೋ ಕೊಟ್ಟು ಅಲ್ಲಿರುವ ಮಕ್ಕಳಲ್ಲಿ ಒಂದು ಜಾಗೃತಿಯನ್ನ ಮೂಡಿಸಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡಿದ್ದಾರೆ ಬನ್ನಿ ಈ ಸ್ವಾಭಿಮಾನಿ ಕನ್ನಡಿಗನ ಕನಸಿನ ಕಾರ್ಯಕ್ಕೆ ಕೈ ಜೋಡಿಸೋಣ.

ಕುಸಿಯುತ್ತಿರುವ ಅಂತರ್ಜಲ ಮಟ್ಟ

ಕುಸಿಯುತ್ತಿರುವ ಅಂತರ್ಜಲ ಮಟ್ಟ

ಬೆಂಗಳೂರಿನಂಥ ನಗರಗಳಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದು ಗ್ರೌಂಡ್ ಲೆವೆಲ್ ವಾಟರ್ ಮ್ಯಾನೇಜ್ಮೆಂಟ್ ಬಗ್ಗೆ ಹಲವಾರು ಯೋಚನೆಗಳಿದ್ದು ಅವುಗಳನ್ನು ಜಾರಿಗೆ ತರಲು ಒಳ್ಳೆಯ ವೇದಿಕೆ ಅನುಕೂಲ ಮಾಡಿ ಕೊಟ್ಟಲ್ಲಿ ಒಳ್ಳೆಯ ಅವಕಾಶ ನೀಡಿದಂತಾಗುತ್ತದೆ. ಗಿರೀಶ್ ಅವರಿಗೆ ಕೇಂದ್ರದ ಗ್ಲೋಬಲ್ ಇನ್ನೊವೇಷನ್ ಫಂಡ್ ನಿಂದ ಹಣಕಾಸು ಸಹಾಯ ಸಿಗುತ್ತಿದೆ. ರಾಜ್ಯ ಸರಕಾರದಿಂದಲೂ ಸಹಕಾರ ಸಿಗಲಿ ಎಂಬುದು ಅವರ ಆಶಯ.

ಗಿರೀಶ್ ಸಂಪರ್ಕ : 99021 33996

English summary
Girish Badragond from Vijayapura has invented many instruments like borewell scanner, micro irrigation system, bird refeller helpful to farmers. He has been invited by Rashtrapati Bhavan to present his innovations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X